ಪ್ರಿಯೆಪ್ರಶಾಂತ್ ಬೀಚಿprashanth& commat bol.co.tzಅಕ್ಕರೆಯ ಮಾತಿನಲಿ ಸಕ್ಕರೆಯ ತುರುಕಿ,ಮಾತಾಡುವ ಮೊದಲೆ ಕಳೆದು ಹೋದಳೆ?ತವಕಿಸುತ್ತ ಕುಳಿತೆ ನಿನ್ನ ನುಡಿಗೆ ಕಾದು,ಎಲ್ಲಿರುವೆಯೆ ಓ ನನ್ನ ಪ್ರಿಯೆ?ಹಾಲು ನಾಚಿತೆ ನಿನ್ನ ಬಿಳುಪಿಗೆ,ಕಮಲವು ಮುದುಡಿ, ದಾಳಿಂಬೆ ಸೊರಗಿತು,ನಿನ್ನ ಸ್ಪರ್ಶ ಹಾಗು ದಂತದ ಮೋಡಿಗೆ,ಒಮ್ಮೆ ಎದುರಾಗೆ ನನ್ನ ಪ್ರಿಯೆ.ನಿನ್ನೊಲುಮೆಗೆ ನಾ ಬಿರಿದಿಹೆನು,ನೀ ಕಾಣದೆ ನಾ ಕೊರಗಿಹೆನು,ನೀ ಇಲ್ಲದೆ ನಾ ಇರುವೆನೆ,ಬಾ ಬಾರೆ ಪ್ರಿಯೆ.ಹೀಗಿರಬೇಕು ಪ್ರಿಯೆಯಾಬ್ಬಳು ಎಂದೆನಿಸಿರುವೆ,ಕಾಣದೆ ನಿನ್ನ ಪ್ರೀತಿಯ ಮಾಡಿರುವೆ,ದೇವರಿಲ್ಲದೆ ಗುಡಿಯ ನಾ ಕಟ್ಟಿರುವೆ,ಬಂದು ಕೂರಬಾರದೆ ಪ್ರಿಯೆ?Post your viewsಮುಖಪುಟ / ಎನ್‌ಆರ್‌ಐ