ಜೂಜು ಸುಂದರಿಯರು


ಜೂಜು ಸುಂದರಿಯರು
Suresh Ramachandra
ಅಮೆರಿಕದಲ್ಲಿ ಇರುವುದೊಂದು ಸುಂದರ ನಗರ
ಪಾಪ ಮಾಡುವುದಕ್ಕೆ ಇರುವುದೀ ಆಗರ
ಏನು ಸೊಗಸಿದು ಪಾಪ ಮಾಡುವವರಿಗು ಇರುವುದು ಒಂದು ಊರು
ಇರುಳು ಹಗಲುಗಳಿಲ್ಲದ, ಅರೆ ಬೆತ್ತಲು ಸುಂದರಿಯರ ಈ ಊರು

ಎಲ್ಲೆಲ್ಲು ಸ್ವಪ್ನ ಸುಂದರಿಯರೆ, ಅರೆ ನಗ್ನ, ಕಣ್ಮನಗಳಿಗಾನಂದ
ಊಹೆಗೂ ನಿಲುಕದ ಮಾಯಾಲೋಕದ ಸುಂದರಿಯರ ಸಾಲು ಸಾಲು
‘ಏನ್ರಿ ನೋಡ್ತ ಇದ್ದೀರ?’ ಎಂಬ ನನ್ನವಳ ಸಿಡಿಲಿನ ದನಿ ಕೇಳಿ
ಬೆಚ್ಚಿ ಬಿದ್ದ ನಾನು ಮಾಯಾಲೋಕದಿಂದ ಇಳಿದೆ ನಿಜ ಲೋಕಕ್ಕೆ

ಜೂಜಿನ ಮನೆಯಲ್ಲಿ ರೋಲೆ ಆಡುತ್ತ ಕುಳಿತಾಗ
ಜೆಸ್ಸಿಕ ಎಂಬ ಕನ್ಯೆ ಸುಳಿದಾಗ ತಪ್ಪಿತು ಲೆಕ್ಕ, ಹೋಯಿತು ಡಾಲರ್‌
ಕೇಳಿತವಳ ಮಧುರ ದನಿ ‘ಡ್ರಿಂಕ್‌ ಪ್ಲೀಸ್‌’
ಕೊರಳ ದನಿಗೆ ಮರುಳಾಗಿ ನುಡಿಯಿತು ‘ಎಸ್‌ ಪ್ಲೀಸ್‌’

ನೆನಪಾಯ್ತು ನನಗೆ, ಪುರಂದರ ಉವಾಚ
ಯಾರು ಹಿತವರು ನಿನಗೆ ಈ ಮೂವರೊಳಗೆ,
ನಾರಿಯಾ, ಧಾರುಣಿಯಾ, ಬಲು ಘನದ ಸಿರಿಯಾ? ಮೂವರು ಹಿತ ನನಗೆ!
ಮೂರು ಇರುವ ಲಾಸ್‌ ವೇಗಸ್‌ ಇನ್ನು ಹೆಚ್ಚು ಹಿತ!!

ಮರುಭೂಮಿಯಲ್ಲಿ ಇರುವುದು ದೊಡ್ಡ ಕಾರಂಜಿ
ಮೋಜಿನ ಚೆಲುವೆಯಂತೆ ಗಂಟೆಗೊಮ್ಮೆ ಚಿಮ್ಮುವಳು ಕಾರಂಜಿ
ಜೂಜಿನ ಮನೆಯ ಸುಂದರಿಯರ ನೋಡಿ ಬಂತನುಮಾನ
ಇವಳ ಸೃಷ್ಟಿಸಿದ ದೇವರು ಕುಡಿದಿದ್ದ ಹೆಚ್ಚು ಸುರೆ!

ಅಂದು, ಜೂಜಾಡಿ ಧರ್ಮರಾಯ ಕಳೆದ ರಾಜ್ಯ, ಹೆಂಡತಿ
ಇಂದು ಲಾಸ್‌ ವೇಗಾಸ್ನಲ್ಲಿ ರಾಯರು ಕಳೆದರು ಹಣ, ಬುದ್ಧಿ !
ಜೂಜಾಡಿ ಧರ್ಮರಾಯ ಕಡೆಗೆ ಹೊರಟ ಯುದ್ಧಕೆ
ಜೂಜಾಡಿ ರಾಯರು ಹೊರಟರು ಮನೆಗೆ, ಮನಶ್ಯಾಂತಿಗೆ!

ಈಗರ್ಥವಾಯಿತು ಎನಗೆ ಧರ್ಮರಾಯನ ಜೂಜಿನ ಸೋಲು
ಇದ್ದೀತು ಅವನ ಸುತ್ತ ಮುತ್ತ ಲಾಸ್‌ ವೇಗಸ್ನ ಸುಂದರಿಯರ ಸಾಲು!
ಎಲ್ಲೆಲ್ಲು ಬೆತ್ತಲು ಸುತ್ತ ಮಾತ್ರ ಕತ್ತಲು
ಬೆತ್ತಲೆಂಬ ಕತ್ತಲೆ ಕವಿದು ತಪ್ಪಿತು ದಾಳದ ದಾರಿ


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+