ಪ್ರೀತಿಯೆಂದರೆ ಅದಲ್ಲ !


ಪ್ರೀತಿಯೆಂದರೆ ಅದಲ್ಲ !
K. Triveni Srinivasarao
  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    ತವರು : ಕಡೂರು - ಚಿಕ್ಕಮಗಳೂರು ಜಿಲ್ಲೆ

    [email protected]
ಪ್ರೀತಿಯೆಂದರೆ-
ಅಲ್ಲ , ಬರೀ ಹಸಿಹಸಿ ಕಾಮನೆಗಳ ಪ್ರಲಾಪ
ಒಲವೊಂದು ಮರೆಯದ ಮಧುರ ಆಲಾಪ
ಅದು ಎದೆಯ ಬಾನಲಿ ಮೆರೆವ ಇಂದ್ರಚಾಪ !

ಪ್ರೀತಿಯೆಂದರೆ-
ಬರೀ ತುಟಿಗಳ ಚುಂಬನವಲ್ಲ
ತೋಳುಗಳ ಬಂಧನವೂ ಅಲ್ಲ
ಅದು ಕಾಮ-ಪ್ರೇಮಗಳ ಬೇವು-ಬೆಲ್ಲ !

ಪ್ರೀತಿಯೆಂದರೆ-
ದಾಹಭರಿತ ದಿನ ರಾತ್ರಿಗಳ
ಹಳಹಳಿಕೆಯ ಹಗಲುಗನಸುಗಳಲ್ಲ
ಅದು ಜನ್ಮಜನ್ಮಾಂತರದ ಸಿಹಿನೆನಪು!

ಪ್ರೀತಿಯೆಂದರೆ-
ಅಗ್ಗದ ಬೆಲೆಗೆ ಸಿಗುವ
ನಿರ್ಭಾವ ನಿರ್ಗಂಧ ಕುಸುಮವಲ್ಲ
ಅದು ದೇವಲೋಕದಿಂದ ಬಂದ ದಿವ್ಯ ಪಾರಿಜಾತ!

ಪ್ರೀತಿಯೆಂದರೆ-
ಒಲಿದ ಮನಸು ಮನಸು ಮಾತ್ರ
ಕೇಳಬಲ್ಲ ಪಿಸುನುಡಿ
ಲೋಕಕೆಲ್ಲ ತಿಳಿಯುವಂತೆ
ಮಾಡಬೇಕೆ ಗಡಿಬಿಡಿ?

ಇರಲಿ ಪ್ರೀತಿ ಸುಪ್ತವಾಗಿ
ಹೃದಯದಲ್ಲಿ ತಣ್ಣನೆ
ಬಿಸಿಲಿನಲ್ಲಿ ಬಯಲಿನಲ್ಲಿ
ಹರವಬೇಡಿ ಸುಮ್ಮನೆ!


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+