ಪ್ರೀತಿಯ ಸುತ್ತಮುತ್ತ ಮೂರು ಕವಿತೆಜಯಕುಮಾರ್ ಸಿ ಡಿ ಲೂಯಿಸ್‌ವಿಲ್, ಕೆಂಟಕಿjkthecool& commat yahoo.com1ಪ್ರೀತಿಕಾಳ್ಗಿಚ್ಚಲ್ಲಹೋಮ ಕುಂಡದ ಅಗ್ನಿ ಪ್ರೀತಿ.ಸುರೆಯಲ್ಲಕ್ಷೀರಸಾಗರದ ಅಮೃತ ಪ್ರೀತಿ.ಆಣವಲ್ಲಹೂವಿನ ಮಕರಂದ ಪ್ರೀತಿ.ಉನ್ಮಾದವಲ್ಲಹೃದಯದ ಸೆಳೆತ ಪ್ರೀತಿ.ಪ್ರಾಯವಲ್ಲಮನಸಿನ ಜವವೇ ಪ್ರೀತಿ.2ಪ್ರೀತಿ ಮತ್ತು ಕೋಗಿಲೆಪ್ರೀತಿಯಲಿ ಬಿದ್ದಾಗಅವಳ ಕಾವ್ ಕಾವ್ ಕೂಡಾ ಕೇಳಿಸುವದು ಕೂಹೂ ಕೂಹೂ ಎಂದು!3ಪ್ರೀತಿ ಮತ್ತು ಸೌಂದರ್ಯಅವಳು ಕೇಳಿದಳು : ನಾನು ಸುಂದರಳೆಂದು ನಿನ್ನ ಪ್ರೀತಿಯೋ ಅಥವಾ ನಿನ್ನ ಪ್ರೀತಿಯಿಂದ ನಾನು ಸುಂದರಳೊ?ನಾನೆಂದೆ :ಬದುಕಿನಲಿ ಪ್ರೀತಿಯೋ ಅಥವಾ ಪ್ರೀತಿಯಿಂದ ಬದುಕೋ?ಆರಿಸು ಉತ್ತರವನ್ನು.Post your viewsಮುಖಪುಟ / ಎನ್‌ಆರ್‌ಐ