ಮುಂಜಾವುಸಂಧ್ಯಾ ರವೀಂದ್ರನಾಥ್divyakrithi& commat hotmail.comಉದಯರವಿಯ ಕೆಂಪಿನಲ್ಲಿಉಷೆಯ ಮಂದಹಾಸದಲ್ಲಿನಿಶೆಯ ಹೊದಿಕೆ ತೆರೆಯುವಲ್ಲಿನೆರಳು ಬೆಳಕಿನಾಟದಲ್ಲಿನನ್ನ ನಾನು ಮರೆತೆನಲ್ಲಿಮುಗಿಲ ನೀಲಿ ಹಿನ್ನೆಲೆಯಲಿಎತ್ತರ ಗಿರಿಶ್ರೇಣಿಯಲ್ಲಿಅಡಿಯಿಡುತಿಹ ನಸುಕಿನಲ್ಲಿಮಸಕು ಮಸಕು ಬೆಳಕಿನಲ್ಲಿನನ್ನ ನಾನು ಮರೆತೆನಲ್ಲಿಬಿರಿಯುತಿರುವ ಮೊಗ್ಗಿನಲ್ಲಿಮಿನುಗುತಿರುವ ಹಿಮಮಣಿಯಲಿಕರಗುತಿರುವ ಮಂಜಿನಲ್ಲಿಗರಿಕೆಯಂಚಿನಿಬ್ಬನಿಯಲಿನನ್ನ ನಾನು ಮರೆತೆನಲ್ಲಿಸ್ತಬ್ಧ ತಂಪು ಮಾರುತನಲಿಅಲುಗದಿರುವ ಎಲೆಗಳಲ್ಲಿಅರಳಿದ ಹೂಗೊಂಚಲಲ್ಲಿಹಕ್ಕಿ ಹಾಡಿನಿಂಚರದಲಿನನ್ನ ನಾನು ಮರೆತೆನಲ್ಲಿಎಂಥ ಜಾದು ಬೆಳಗಿನಲ್ಲಿನಾಕ ಧರೆಗೆ ಇಳಿಯುವಲ್ಲಿನಭದ ಹಿಗ್ಗು ಹರಡುವಲ್ಲಿನವಚೇತನ ಉಕ್ಕುವಲ್ಲಿನನ್ನ ನಾನು ಮರೆತೆನಲ್ಲಿಬೆಳಕು ಹರಿವ ವೈಖರಿಯಲಿಮೈನಿಮಿರುವ ಕ್ಷಣಗಳಲ್ಲಿನನ್ನ ನಾನು ಮರೆತೆನಲ್ಲಿಪುಳಕಗೊಂಡೆ ಹರುಷದಲ್ಲಿನಿನ್ನ ನಾನು ಕಂಡೆನಲ್ಲಿ !Post your viewsಮುಖಪುಟ / ಎನ್ಆರ್ಐ