ವ್ಯಾಲೆಂಟೈನು ವ್ಯಾಲೆಂಟೈನು..ಸವಿತಾ ರವಿಶಂಕರ್savitharavishankar& commat yahoo.comವ್ಯಾಲೆಂಟೈನು‘ವ್ಯಾಲೆಂಟೈನೂ’..,ಅಂಗಂದ್ರೇನೋ ಬಸವಾ??ಅಂಗಂದ್ರೇ....,ಯೆಂಡ್ರು ಗಂಡ್ರಿಗೆ ಗದರ್ಕೊಂಡು,ಗಂಡ್ರು ಯೆಂಡ್ರಿಗೆ ಬೆದರ್ಕೊಂಡು,ಇನಾಮು, ಊಗೋಳ್ನ ತಂದ್ಕೊಂಡು, ದಿನ್‌ಪೂರ್ತಿ ನೀ ರಾಣೀಂತ ಸಾರ್ಕೊಂಡು,ಆ ದಿನದ್ ಮಟ್ಟ್‌ಗೆ ಆಡೋ ‘ಆಟಾ’ ಕಣೇ ಬಸವಿ.*ವ್ಯಾಲೆಂಟೈನು-ಗಿಫ್ಟುಪ್ಯಾಟೆಯಿಂದ ಬಸವ ತಂದಬಸವಿಗೆ ‘ಟೆಡಿಬೇರು’...,ಇದೇನಪ್ಪೋ ಎಂದು ಬಸವಿ,ಹಾರಿ ನೆಗೆದು ಮಾರು ‘ವ್ಯಾಲೆಂಟೈನು’ ಬಸವಿ ಎಂದು,ಬಸವ ಕುಣಿದ ಜೋರು ಪಕಪಕನೆ ನಕ್ಕು ಬಸವಿಕೊಟ್ಲು ‘ಮುತ್ತ’ ನೂರು.*‘ಪ್ರೇಮಿಗಳ್-ದಿನಾಚರಣೆ’ಕಂಡಿಲ್ಲ, ಕೇಳಿಲ್ಲ, ಮಾಡಿಲ್ಲಪ್ಪೋ, ನಾ ‘ಪ್ರೇಮಿಗಳ್-ದಿನಾಚರಣೆ’..,ಕುಂತಿವ್ನಿ ಸಿವಾಂತ ಜಾಗರಣೆ,ನೋಡಿವ್ನಿ ಅಣ್ಣೋರ ರಾಯರ ಕರುಣೆ,ಆಡಿವ್ನಿ ಹುಣಿಸಿಪಚ್ಚಿ ಅಳಿ-ಗುಳಿ-ಮಣೆ,ಬುಟ್ಟೀವ್ನಿ ಜೀರಿಗಿ, ಮೆಣ್ಸು, ಬೆಳ್ಳುಳ್ಳಿ ಒಗ್ಗರಣೆ,ಆದ್ರ ನಾ ಎಂದ್ಗೂಕಂಡಿಲ್ಲ, ಕೇಳಿಲ್ಲ, ಮಾಡಿಲ್ಲಪ್ಪೋ‘ಪ್ರೇಮಿಗಳ್-ದಿನಾಚರಣೆ’..,ನಿಮ್ಮಾಣೆ!!!Post your viewsಮುಖಪುಟ / ಎನ್‌ಆರ್‌ಐ