ಕನ್ನಡಿಗ ನೀರಜ್ ಪಾಟೀಲ್ ಪರ ಕೀತ್ ವಾಜ್ ಚುನಾವಣೆ ಪ್ರಚಾರ

ಲಂಡನ್, ಜೂನ್ 1: ಭಾರತೀಯ ಮೂಲದ- ದೀರ್ಘ ಕಾಲದಿಂದ ಸಂಸದರಾಗಿರುವ ಕೀತ್ ವಾಜ್ ಅವರು ಲಂಡನ್ ನ ಪಟ್ನಿ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ನೀರಜ್ ಪಾಟೀಲ್ ಪರವಾಗಿ ಚುನಾವನೆ ಪ್ರಚಾರ ನಡೆಸಿದ್ದಾರೆ. ಬ್ರಿಟಿಷ್ ಸಂಸತ್ ಗೆ ಸ್ಪರ್ಧಿಸುತ್ತಿರುವ ಮೊದಲ ಕನ್ನಡಿಗ ಡಾ.ನೀರಜ್ ಪಾಟೀಲ್.

ಇನ್ನು ಕೀತ್ ವಾಜ್ ಮೂಲತಃ ಗೋವಾದವರು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ ಲೀಸಸ್ಟೆರ್ ನಿಂದ 1987ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಇನ್ನು ನೀರಜ್ ಪಾಟೀಲ್ ಅವರು ಕನ್ಸರ್ವೆಟಿವ್ ಪಕ್ಷದ ಶಿಕ್ಷಣ ಸಚಿವ ಜಸ್ಟಿನ್ ಗ್ರೀನಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ. ಗ್ರೀನಿಂಗ್ 2005ರಿಂದ ಇದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.[ಬೆಂಗಳೂರು ಸ್ಟ್ರೀಟ್ ನಿಂದ ಪ್ರಚಾರ ಆರಂಭಿಸಿದ ಪಾಟೀಲ]

Keith Vaz campaigns for Kannadiga Dr Neeraj Patil in Putney constituency

ಡಾ.ಪಾಟೀಲ್ ಲಂಡನ್ ಬೊರೋಗ್ ಆಫ್ ಲ್ಯಾಂಬೆತ್ ಗೆ 2010-2011ರಲ್ಲಿ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮೂಲದ ಪಾಟೀಲರು, ಥೇಮ್ಸ್ ನದಿ ದಡದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆ ಮಾಡುವ ಅಭಿಯಾನದಲ್ಲಿ ತುಂಬ ಸಕ್ರಿಯವಾಗಿದ್ದರು. ಅದರಲ್ಲಿ ಯಶಸ್ಸು ಕೂಡ ಸಾಧಿಸಿದರು.

ಇದೇ ತಿಂಗಳ ಎಂಟನೇ ತಾರೀಕು ಚುನಾವಣೆ ನಡೆಯಲಿದೆ. ಬ್ರೆಕ್ಸಿಟ್ ನಿಂದ ಬ್ರಿಟಿಷ್ ಆರ್ಥಿಕತೆ ಮೇಲೆ ಆಗಿರುವ ಪರಿಣಾಮವು ಈ ಬಾರಿಯ ಚುನಾವಣೆ ವಿಷಯ. ಮತ್ತು ತೆರಿಗೆ ವಿಚಾರ ಕೂಡ ಪ್ರಮುಖವಾಗಿ ಚರ್ಚೆಯಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+