ಶರೀರ ಸ್ವಾಸ್ಥ್ಯಕ್ಕೂ ಸೌನಾ ಸ್ನಾನಕ್ಕೂ ಅವಿನಾಭಾವ ನಂಟು
ಮನುಷ್ಯ ಅಂದಮೇಲೆ ಶರೀರ ಸ್ವಾಸ್ಥ್ಯ ವನ್ನು ಕಾಪಾಡಿಕೊಳ್ಳುವುದು ಮಹತ್ವದ ಸಂಗತಿ ಅಲ್ಲವೇ? ದಿನವಿಡೀ ನಾನಾ ಬಗೆಯ ಚಟುವಟಿಕೆಗಳಲ್ಲಿ ವ್ಯಸ್ತವಾಗಿರುವ ನಮ್ಮ ದೇಹ ಆ ದಣಿವನ್ನು ನಿವಾರಿಸಿಕೊಂಡು ಮತ್ತೆ ಹಗುರವಾಗಬೇಕು ಎಂಬುದು ಶರೀರದ ಸಹಜ ಅವಶ್ಯಕತೆ.
ಅದಕ್ಕಾಗಿಯೇ ಅನೇಕರು ದಿನದ ಕೆಲಸಕಾರ್ಯಗಳು ಮುಗಿದು ಸಂಜೆಗೆ ಮರಳಿ ಬಂದ ಮೇಲೆ ಒಂದು ಬಿಸಿನೀರಿನ ಸ್ನಾನಕ್ಕಾಗಿ ಹಾತೊರೆಯುತ್ತಾರೆ. ಬಿಸಿನೀರಿನ ಸ್ನಾನಕ್ಕೆ ಬಹಳ ಮಹತ್ವವಿರುವುದು ಅದರ ಈ ಆರೋಗ್ಯಕಾರೀ ಗುಣದಿ೦ದಾಗಿಯೇ.

ಅದರಲ್ಲೂ ಚೆನ್ನಾಗಿ ಎಣ್ಣೆ ಒತ್ತಿಕೊ೦ಡು ಸುಡು ಸುಡು ನೀರಿನಿ೦ದ ಮಾಡುವ 'ಅಭ್ಯ೦ಗ' ನಮ್ಮಲ್ಲಿ ಬಹು ಜನಪ್ರಿಯ. ಅಲ್ಲದೇ ಆಯುರ್ವೇದೀಯ ಚಿಕಿತ್ಸೆ ಪ೦ಚಕರ್ಮ ಮತ್ತು ಮಸಾಜ್ ಸೆ೦ಟರುಗಳಲ್ಲಿ ಹಬೆ ಅಥವಾ ನೀರಿನ ಉಗಿಯನ್ನು ದೇಹಕ್ಕೆ ಒದಗಿಸಿ ಆಯಾಸ ಆಲಸ್ಯಗಳನ್ನು ಕಳೆಯುವ ವಿಧಾನಗಳು ಉ೦ಟು.
ಹಾಗೆ ನೋಡಿದರೆ ಸೌನಾ ಎ೦ಬುದು ಜಗತ್ತಿಗೆ ಅಪರಿಚಿತವೇನಲ್ಲ. ಆದರೆ ನಾನು ಕ೦ಡ ಸ೦ಗತಿ ಎ೦ದರೆ ಫಿನ್ಲ್ಯಾಂಡಿನಲ್ಲಿ - ಸೌನಾ ಎ೦ಬ ಅವರದೇ ಆದ ವಿಶಿಷ್ಟ ಹಬೆಸ್ನಾನವಿದೆ. ಇದಕ್ಕಾಗಿಯೇ ಇಲ್ಲಿ ವಿಶೇಷ ವ್ಯವಸ್ಥೆಗಳೂ ಇವೆ. ಎಲ್ಲಕ್ಕೂ ಮುಖ್ಯವಾಗಿ ಫಿನ್ನಿಶ್ ಸೌನಾ ಇಲ್ಲಿನವರ ಜೀವನದಲ್ಲಿ, ಸ೦ಸ್ಕೃತಿಯಲ್ಲಿ ಬಹಳ ಪ್ರಮುಖ ಸ್ಥಾನ ಪಡೆದಿದೆ. ಹಬೆ ಅಭ್ಯ೦ಗದ ಈ ಫಿನ್ನಿಶ್ ನಮೂನೆ ತನ್ನದೇ ಆದ ಸೊಗಸನ್ನು ಪಡೆದಿದೆ.
ಯುರೋಪಿನ ಅನೇಕ ದೇಶಗಳಲ್ಲಿ ಸೌನಾ ಎಂಬುದು ಸಾಮಾನ್ಯವಾಗಿದ್ದರೂ, ಮಾಡಿದರೆ 'ಫಿನ್ನಿಶ್' ನಮೂನೆಯ 'ಸೌನಾ' ಮಾಡಬೇಕು ಎಂದು ಹೇಳುವುದನ್ನು ಕೇಳಿದರೆ ಅದೇನು ವಿಶೇಷ ಎಂದು ಅನಿಸದಿರದು. ಹಾಗೆ ಈ ಸೌನಾ ಇಲ್ಲಿನವರ ದೈನ೦ದಿನ ಜೀವನದಲ್ಲಿ ಒಂದು ಅವಿಭಾಜ್ಯ ಅಂಗದಂತಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಇದು ಬೇಕೇ ಬೇಕು ಇವರಿಗೆ.
ಹಲವಾರು ಬಗೆಯ ಸೌನಾಗಳು ಇಲ್ಲಿ ಲಭ್ಯವಿರುತ್ತವೆ. ಹಿಂದಿನ ಕಾಲದಲ್ಲಿ ಇರುತ್ತಿದ್ದದ್ದು ಮರದಿಂದ ಮಾಡಿದ ದೊಡ್ಡ ಕೋಣೆಯ ಮೂಲೆಯಲ್ಲಿ ಸ್ಥಾಪಿಸಿದ್ದ ಒಲೆ. ಹೊಟ್ಟು ಅಥವಾ ಕಟ್ಟಿಗೆಯ ಉರಿ. ಅದರ ಮೇಲೆ ಕೂರಿಸಿದ ದೊಡ್ಡ ಕೊಳಗದಲ್ಲಿ ವಿಶೇಷ ಬಗೆಯ ಕಲ್ಲುಗಳು.

ಉರಿಯ ಉಷ್ಣದಿಂದ ಕಾಯ್ದ ಕಲ್ಲುಗಳ ಮೇಲೆ ಸುರಿಯುವ ನೀರಿನಿಂದಾಗಿ ಎದ್ದು ಸುತ್ತಲೂ ವ್ಯಾಪಿಸಿಕೊಳ್ಳುವ ಹಬೆ. ಇದೇ ಸೌನಾದ ಮೂಲಭೂತ ಅಂಶ. ಈಗ ಆಧುನಿಕ ಕಾಲದ ಸೌನಾಗಳಲ್ಲಿ ವಿದ್ಯುತ್ ಚಾಲಿತ ಮತ್ತು ಇನ್ ಫ್ರಾರೆಡ್ ಉಷ್ಣವನ್ನು ಬಳಸುವ ವಿಧಾನಗಳಿವೆ.
ಕಾರ್ಯ ವಿಧಾನ ಈಗಲೂ ಹಾಗೆಯೇ. ಇಲ್ಲಿ ಸೌನಾದ ಕೋಣೆಗಳು ಯಾವಾಗಲೂ ಮರದಿಂದಲೇ ತಯಾರಿಸಲ್ಪಟ್ಟಿರುತ್ತವೆ ಎಂಬುದು ಗಮನಾರ್ಹ, ಏಕೆಂದರೆ ವಿಶೇಷ ಮರದ ಆವರಣವೇ ಇಂಥ ಘನಮಟ್ಟದ ಹಬೆಯನ್ನು ತಾಳಿಕೊಳುತ್ತದೆ.
ಯಾವುದೇ ಉಷ್ಣ ಕಾರಕಕ್ಕೆ ಜೋಡಿಸಿದ ಒಂದು ದೊಡ್ಡ ಕೊಳಗ ಅಥವಾ ಡಬ್ಬಿಯಲ್ಲಿನ ಕಲ್ಲುಗಳನ್ನು ಒಂದು ನಿರ್ದಿಷ್ಟ ಹಂತಕ್ಕೆ ಬಿಸಿ ಮಾಡಿ ಅಲ್ಲಿ ಕುಳಿತಕೊಳ್ಳುವವರು ಆಗಾಗ ಸುರಿಯುವ ತಣ್ಣೀರು ಸೌನಾದ ಕೋಣೆಯಲ್ಲಿ ಅಗಾಧವಾದ ಹಬೆಯನ್ನು ತುಂಬಿಸುತ್ತದೆ.
ಅಲ್ಲಿ ಮರದಿ೦ದ ಮಾಡಿದ ಒ೦ದು ಬಕೆಟ್ಟಿನಲ್ಲಿ ಮರದ ಸವುಟಿನೊ೦ದಿಗೆ ತಣ್ಣೀರನ್ನು ತು೦ಬಿಸಿ ಇಟ್ಟಿರುತ್ತಾರೆ. ಹೆಚ್ಚಿನ ಸಮಯ ನೂರು ಡಿಗ್ರಿ Celsiusನಷ್ಟಕ್ಕೆ ಇರಬಹುದಾದ ಉಷ್ಣಾಂಶದ ಈ ಹಬೆಯೇ ಶರೀರವನ್ನು ಬೆವರಿಳಿಸಿ ತನ್ಮೂಲಕ ನೋವು, ಆಯಾಸ, ಬಳಲಿಕೆಗಳನ್ನು ನಿವಾರಿಸುವುದರ ಜೊತೆಗೆ ದೇಹದಲ್ಲಿ ಶೇಖರಣೆಯಾದ ಕಲ್ಮಶಗಳನ್ನು ಬೆವರಿನ ಮುಖಾಂತರ ಹೊರತಳ್ಳುತ್ತದೆ.
ಜನರು ತಮ್ಮ ಅವಶ್ಯಕತೆಯನುಗುಣವಾಗಿ ಅಥವಾ ತಡೆದುಕೊಳ್ಳುವ ಸಮಯದ ವರೆಗೆ ಇಲ್ಲಿ ಕುಳಿತಿದ್ದು ಮತ್ತೆ ಅಲ್ಲಿಯೇ ಹೊರಬದಿಯಲ್ಲಿರುವ ಸ್ನಾನದ ಕೋಣೆಯಲ್ಲಿ ಚನ್ನಾಗಿ ಶವರ್ ಮಾಡಿ ಮತ್ತೆ ಸೌನಾದೊಳಗೆ ಹೋಗಿ ಕೂರುತ್ತಾರೆ.
ಅರಣ್ಯ ಅಥವಾ ನದೀ ದಂಡೆಯ ಕುಟೀರಗಳಲ್ಲಿರುವ ಸೌನಾ ಆದರೆ ಅಲ್ಲಿಂದ ಹೊರಬಂದು ನೇರವಾಗಿ ನದಿ ಅಥವಾ ಸರೋವರದಲ್ಲಿ ಮುಳುಗೇಳುತ್ತಾರೆ. ಹೀಗೆ ಅನೇಕ ಬಾರಿ ಮಾಡಿ ಮುಗಿಸಿ ಹೊರಬಂದರೆ ಶರೀರವಿಡೀ ಹತ್ತಿಯಂತೆ ಹಗುರವಾಗಿರುವ ಅನುಭವ ಸೌನಾ ಮಾಡಿದ ಪ್ರತಿಯೊಬ್ಬರಿಗೂ ಆಗಿರುತ್ತದೆ!
ಸೌನಾದಲ್ಲಿ ಕೂರಲು ಸಾಮಾನ್ಯವಾಗಿ ಕನಿಷ್ಟ ಉಡುಪು ಧರಿಸಬೇಕಾಗುತ್ತದೆ. (ಫಿನ್ನಿಶ್ ಪುರುಷರು ನಿವಾ೯ಣರಾಗಿಯೂ ಸೌನಾ ಮಾಡುತ್ತಾರಂತೆ) ಒಬ್ಬರು, ಇಬ್ಬರು, ಅಥವಾ ಹಲವು ಜನರು ಒಂದೇ ಬಾರಿ ಮಾಡಬಹುದಾದ ಸೌನಾಗಳು ಇಲ್ಲಿರುತ್ತವೆ.

ಖಾಸಗಿಯಾಗಿ ಮನೆಗಳಲ್ಲಿ ತಮ್ಮದೇ ಸೌನಾ ಇಟ್ಟುಕೊಳ್ಳುವ ಆಸಕ್ತಿ ಇಲ್ಲಿನವರಿಗಿದೆ. ಬಹುಮಹಡಿ ಅಪಾಟ್ಮೆಂಟುಗಳಲ್ಲಿ ಸಾಮಾನ್ಯವಾಗಿ ಸೌನಾ ವ್ಯವಸ್ಥೆ ಇದ್ದೇ ಇರುತ್ತದೆ. ಹೋಟೆಲುಗಳಲ್ಲೂ ಈ ವ್ಯವಸ್ಥೆ ಬಹು ಜನಪ್ರಿಯ ಇಲ್ಲಿ.
ಅಷ್ಟೇ ಅಲ್ಲ, ಶೀತ ಆಯ್ತೋ? ಸೌನಾ ಮಾಡಿ, ಮೈ ಕೈ ನೋವೇ? ಸೌನಾ ಮಾಡಿ, ಆಲಸ್ಯವೇ? ಸೌನಾ.ಇನ್ನು ವ್ಯಾಯಾಮ ಮಾಡಿದ ಮೇಲೂ ಇದೇ! ಹೀಗೆ ಎಲ್ಲದಕ್ಕೂ ಸೌನಾ ಸ್ನಾನ ಎಂಬ ರಾಮಬಾಣದ ಉಪಾಯ ಬಳಸುತ್ತ ಖುಷಿಯಾಗಿರುವ ಜನರಿವರು. ಒಟ್ಟಿನಲ್ಲಿ ಶರೀರ ಸ್ವಾಸ್ಥ್ಯಕ್ಕೂ ಸೌನಾ ಸ್ನಾನಕ್ಕೂ ಅವಿನಾಭಾವದ ಸಂಬಂಧವುಂಟು. ಒಮ್ಮೆ ಮಾಡಿ ನೋಡಿ!
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications