ವಿಡಿಯೋ : ಏನೋ ಒಂಥರಾ... ಪ್ರೀತಿಯಲ್ಲಿ ಬಿದ್ದಾಗ!
ಹೇಗೋ ನನ್ನ ಪಾಡಿಗೆ ನಾ ಇದ್ದೆ... ನೀ ಬಂದ ಮೇಲೆ... ಹೆಂಗೆಂಗೋ ಆಗೋದೇ ನಾನು... ಈ ಪ್ರೀತಿಯಲ್ಲಿ ಬಿದ್ದಾಗ! ಪ್ರೇಮಿ ಎಷ್ಟೇ ಸಮೀಪ ಇದ್ದರೂ, ಇನ್ನು ಹತ್ತಿರ - ಹತ್ತಿರ ಬರಲಿ, ಅನ್ನೋದು ಎಲ್ಲಾ ಪ್ರೇಮಿಗಳ ಆಸೆ ಅಲ್ವಾ? ನಿಮಗೂ ಹಂಗೆ ಅನ್ನಿಸುತ್ತಾ?
ಯಾಕೀ ಅಂತರಾ, ಏನೋ ಒಂಥರಾ.... ನೀನಿದ್ದರೆ, ಈ ಜಗವೇ ಬಲು ಸುಂದರ! ಸುಂದರ ಸಾಹಿತ್ಯದ ಈ ಕನ್ನಡ ವಿಡಿಯೋ ಹಾಡನ್ನು... ಉತ್ತರ ಅಮೆರಿಕಾದಲ್ಲೇ ಪೂರ್ಣ ಚಿತ್ರೀಕರಿಸಿ ನಿರ್ಮಿಸಿರುವ "ಸಿಹಿ ಇಂಚರ ಪ್ರೊಡಕ್ಷನ್" ತಂಡದ ಈ ಸುಂದರ ಹಾಡು ಮೊನ್ನೆ ದಸರಾ ಹಬ್ಬದಂದು ಬಿಡುಗಡೆಯಾಯಿತು.

ಈ ಸುಂದರ ಹಾಡಿಗೆ ಸಂಗೀತ ಸಂಯೋಜಿಸಿದವರು ಸೂರ್ಯ ಪ್ರಕಾಶ್
ಹಿನ್ನೆಲೆ ಗಾಯನ : ಈಶ ಸುಚಿ
Rhythm, Mixing, Master : ನಿತೀಶ್ ಓಕೆ
Keys : ಕಿಚ್ಚು
Humming Vocals : ಸನೂಪ್ ಕುಮಾರ್ & ನಿಖಿಲ್ ಥಾಮಸ್
Song Recording @ ವಿಜಯ್ ರಾಜ್ ಅವರ ಸ್ವರಾಗ್ ಸ್ಟುಡಿಯೋ, ಬೆಂಗಳೂರು
ಸಿನಿಮಾಟೋಗ್ರಫಿ : Chakster, ಜೇಮ್ಸ್ ವೆಂಗಲಾರಿಕ್ & ನಾಗರಾಜ್ ಎಂ
ತಾರಾಗಣ : ಮಾಲು ಜಯನ್ ಮತ್ತು ನಾಗರಾಜ್ ಎಂ

ಹಾಡಿಗೆ ಸಾಹಿತ್ಯ ಬರೆದು, ನಿರ್ಮಿಸಿ - ನಿರ್ದೇಶಿಸಿರುವುದು ಅಮೆರಿಕಾದ ನಾರ್ತ್ ಕರೋಲಿನಾ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗ ನಾಗರಾಜ್ ಎಂ. ಬನ್ನಿ, ಎಲ್ಲಾ ಸೇರಿ ನೋಡುವ... ನೋಡಿ ನಲಿವ.... ಜೊತೆಗೆ "ಸಿಹಿ ಇಂಚರ" ತಂಡದ ಈ ಹೊಸ ಪ್ರತಿಭೆಗಳಿಗೆ ಪ್ರೀತಿ - ಪ್ರೋತ್ಸಾಹ ನೀಡುವಾ.












Click it and Unblock the Notifications