ಅಮೆರಿಕಾದಲ್ಲಿ ನಾ ತಿಂದ.. ಅಲ್ಲಲ್ಲ ನೋಡಿದ ನೀರ್ದೋಸೆ!

By: ನಾಗರಾಜ ಎಂ., ಕನೆಕ್ಟಿಕಟ್
Subscribe to Oneindia Kannada

ರೀ ಏನು ಬೇಕು ಊಟಕ್ಕೆ? ಅಂತ ಹೆಂಡ್ತಿ ಕೇಳಿದ್ದಕ್ಕೆ, ಏನಿದಿಯೇ...? ಅಂತ ಟಿ.ವಿ.ನಲ್ಲಿ ತೋರಿಸ್ತಾ ಇದ್ದ "Mr Trump" ನ ನೋಡ್ತಾನೆ ತಿರುಗಿ ನಾ ಕೇಳಿದ್ದೆ. ಸ್ವಲ್ಪ ದೋಸಾ ಹಿಟ್ಟು ಇದೆ... ಒಂದೆರಡು ದೋಸಾ ಹಾಕ್ಲಾ ಎಂದಾಗ... ಅಯ್ಯೋ? ಮತ್ತೆ ಅದೇ ಖಾಲಿ ದೋಸೆನಾ ಅಂತ ನಾ ಗೊಣಗಿದಾಗ, ಮತ್ತೆ ಎಂಥಾ ದೋಸೆ ಬೇಕು ನಿಮಗೆ? ಸ್ವಲ್ಪ ಗಡುಸಾಗೇ ಕೇಳ್ಸಿತ್ತು ಹೆಂಡ್ತಿ ವಾಯ್ಸ್!

ಈ ಮಲ್ನಾಡು, ಮಂಗಳೂರು ಕಡೆ ಮಾಡ್ತಾರಲ್ಲ... ಹಲಸಿನ ದೋಸೆ, ನೀರ್ ದೋಸೆ.... ಆ ತರಹ ಏನಾರ ಸ್ವಲ್ಪ ಸ್ಪೆಷಲ್ ಮಾಡಬಹುದಲ್ಲ ಅಂತ ನಿಧಾನವಾಗೇ ನಾ.. ಕೇಳಿದ್ದೆ. ನಂಗೆ ಅವೆಲ್ಲ ಮಾಡೋಕೆ ಬರೋಲ್ಲ... receipe ನೋಡಿ ಕಲಿಯೋಕೆ ನಂಗೆ ಟೈಮೂ ಇಲ್ಲ.. ಬೇಕಿದ್ರೆ ಸ್ವಲ್ಪ ಕೆಂಪು ಚಟ್ನಿ ಸವರಿ ಮಸಾಲಾ ದೋಸೆ ಮಾಡಿ ಕೊಡ್ತೀನಿ, ಅದನ್ನೇ ತಿನ್ರಿ" ಅಂತ ಹೇಳ್ತಾನೆ ಚೆನ್ನಾಗಿ ಕಾದಿದ್ದ ಹಂಚಿನ ಮೇಲೆ ಹೆಂಡ್ತಿ ನೀರು ಚಿಮ್ಮಿಸಿದ್ದಕ್ಕೆ... ಸುರ್ರ್ ಅಂತ ಶಬ್ದ ಮಾಡಿತ್ತು ಅದು, ಕಾದಿದ್ದ ಹಂಚು!

"ಹೌದು ನಿಮಗೆ ಹೇಳೋದು ಮರ್ತಿದ್ದೆ.. ದೋಸಾ ಅಂದ ಮೇಲೆ ನೆನಪಾಯಿತು.. ನಿಮ್ಮ ಫ್ರೆಂಡ್ ರಮೇಶ್ ಫೋನ್ ಮಾಡಿದ್ರು, ಹೊಸ ಕನ್ನಡ ಮೂವಿ ಬಂದಿದೆ ಅಂತ... ನೀವು ಕೇಳಿದ್ರಲ್ಲ... ಅದೇ ನೀರ್ ದೋಸೆ ಅಂತ... ಅದರ ಹೆಸ್ರುನೂ ನೀರ್ ದೋಸೆ ಅಂತೆ... ನೀವು ಏನಾರ ಹೋಗ್ತೀನಿ ಅಂದ್ರೆ ಅವರಿಗೆ ಫೋನ್ ಮಾಡ್ಬೇಕಂತೆ.... ನೋಡಿ" ಅವಳು ಹೇಳಿದಾಗ... ಫ್ರೈಡೆ ನೈಟ್ ಹೆಂಗೆ ಕಾಲ ಕಳಿಯೋದು ಅಂತ ಯೋಚನೆ ಮಾಡ್ತಿದ್ದ ನಾನು, ಪಟ್ ಅಂತ ಫೋನ್ ಹಚ್ಚೇ ಬಿಟ್ಟಿದ್ದೆ ರಮೇಶನಿಗೆ... ನಾನೂ ಬರ್ತೀನಿ ಅಂತ. [ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ!]

Neer Dose film review by Nagaraja Maheswarappa

ಎದುರಿಗೆ ಇದ್ದ ಗಡಿಯಾರದ ಮುಳ್ಳು ಆಗಲೇ 8-45 ಅಂತ ತೋರಿಸ್ತಿತ್ತು... ಓಹ್ ಲೇಟ್ ಆಯಿತು ಅಂತ... ಗಬ ಗಬನೇ ಕೆಂಪು ಚಟ್ನಿ ಸವರಿದ ಮಸಾಲಾ ದೋಸೆನ ತಿಂದು.. ಓಡಿದ್ದೆ ಥೀಯೇಟರ್ ಕಡೆಗೆ.

ಎಲ್ಲರೂ (ಮನುಜರು ಮಾತ್ರ) ಒಂದಲ್ಲ ಒಂದು ರೀತಿ ಮುಖವಾಡ ಹಾಕಿಕೊಂಡೇ ಈ ಜಗದಲ್ಲಿ ಎಷ್ಟೇ ಕಷ್ಟ-ಕಾರ್ಪಣ್ಯಗಳಿದ್ದರೂ ತೋರಿಸಿಕೊಳ್ಳದೆ, ನಾವೂ ಎಲ್ಲರಿಗಿಂತ ಚೆನ್ನಾಗಿದೀವಿ ಅಂತ ತೋರಿಸಿಕೊಳ್ಳೋ ಬದಲು... ಒಮ್ಮೆ ಮುಖವಾಡ ತೆಗೆದು ಜೀವನದ ರೀತಿ-ನೀತಿಗಳನ್ನು ಅರಿತು ನಿಜವಾದ ಮನುಜರಂತೆ ಯಾಕೆ ನಾವು ಬದುಕಬಾರದು?

ಬಾಳಲು, 60x30 ಅಡಿ ಭೂಮಿ ಜಾಗಕ್ಕೆ ನಾ ಮುಂದು - ನೀ ಮುಂದು
ಅಂತ ದುಪ್ಪಟ್ಟು ಹಣ ಕೊಟ್ಟು ಕೊಳ್ಳೋ ನಾವು...
ಹೂಳಲು, 6x3 ಅಡಿ ಭೂಮಿ ಜಾಗ ಫ್ರೀ ಆಗಿ ಕೊಡ್ತೀವಿ ಅಂದ್ರು... ನಾ ಹಿಂದೆ - ನೀ ಹಿಂದೆ
ಅಂತ ದೂರ ಓಡಿ ಹೋಗೋದ್ಯಾಕೆ?

"ಸಂಬಂಧಿಕರು ಹೆಂಗೆ ಅಂದ್ರೆ..
ಚೆನ್ನಾಗಿ healthy - wealthy ಆಗಿದ್ರೆ ಅಂಟ್ಕೋತಾರೆ
ಇಲ್ಲ ಅಂದ್ರೆ ಮುಖ ಕಂಡ್ರೆ ಸೆಟ್ಕೋತಾರೆ..."

"ಸತ್ತಾಗ ಬಂದು ಚಟ್ಟಕ್ಕೆ ಹೆಗಲು ಕೊಡುವವರ ಬದ್ಲು
ಇರುವಾಗಲೇ ಕಷ್ಟ-ಸುಖದಲ್ಲಿ ಹೆಗಲು ಕೊಡುವವರೇ.. ನಿಜವಾದ ಸಂಬಂಧಿಕರು - ಮಿತ್ರರು" ['ನೀರ್ ದೋಸೆ' ಸವಿಯಲು ಗರ್ಲ್ ಫ್ರೆಂಡ್ ಜೊತೆ ಹೋದ್ರೆ 'ಗುಮ್ಮೋದು' ಖಚಿತ!]

Neer Dose film review by Nagaraja Maheswarappa

ಮಕ್ಕಳಿಗೆ ಹಣ, ಐಶ್ವರ್ಯ, ಅಂತಸ್ತು, ಸ್ಟೇಟಸ್ ಇದ್ರೆ ಮಾತ್ರ ಜೀವನ ಅಂತ ಪಾಠ ಹೇಳಿಕೊಡೋ ನಾವು, ಅದರ ಬದಲು.... ಕಷ್ಟಗಳೆಂಬ ಕತ್ತಲನ್ನು ಓಡಿಸಲು ದೀಪದಂತೆ ಬೆಳಗಿ - ಸುಂದರತೆಯ ಪ್ರತೀಕವಾದ ಹೂವಿನ್ನು ಪ್ರೀತಿಸುವಂತೆ... ಜೀವನವನ್ನು ಪ್ರೀತಿಸಲು ಮಕ್ಕಳಿಗೆ ಪಾಠ ಮಾಡಿಕೊಟ್ಟರೆ ಹೇಗೆ ಎಂಬ ಪರಿಕಲ್ಪನೆಯನ್ನು...

"ನಗ್ತಾ ಇದ್ದರೆ ಬಾಡೂಟ,
ಅಳ್ತಾ ಇದ್ದರೆ ಜೂಜಾಟ,
ಲೈಫು ಇಷ್ಟೇ ಜಗ್ಗೇಶ"

ಅಂತ ದಿಟ್ಟ-ನೇರ-ನಿರಂತರವಾಗಿ ಮನಮುಟ್ಟುವಂತೆ ಹೇಳುವುದರಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ ಮತ್ತು ಅದರ ಜೊತೆ ನವರಸ ನಾಯಕ ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ್ ರಂಗನಾಥ್ ಅವರ ನಟನೆ ಅಷ್ಟೇ ಚೆನ್ನಾಗಿದೆ... ಅಂತ ದಿಟ್ಟ-ನೇರವಾಗಿ ಹೇಳ್ತಾ ಇರೋದು... ನಿಮ್ಮೆಲ್ಲರ ನಾಗೇಶ!

"ನೀರ್ದೋಸೆ"... ಒಂದು ಉತ್ತಮ ಕಥಾ ಸಂದೇಶವುಳ್ಳ ಚಿತ್ರ.... ವೀಕ್ ಡೇಸ್ ಆಫೀಸ್ ಜಂಜಾಟ, ವೀಕೆಂಡ್ ಬರೀ ಜೂಜಾಟ ಎಲ್ಲಾ ಮರೆತು... ಹೋಗಿ ನೋಡಿಬನ್ನಿ... ಇಷ್ಟ ಆಗುತ್ತೆ ನೀರ್ ದೋಸೆ ಎಂಬ ಬಾಡೂಟ!

Neer Dose film review by Nagaraja Maheswarappa

ಇಷ್ಟು ದಿನ ಬರೀ ಮಸಾಲಾ ದೋಸೆ, ಬೆಣ್ಣೆ ದೋಸೆ, ಸೆಟ್ ದೋಸೆ, ಖಾಲಿ ದೋಸೆ (ಬರೀ ಹೀರೋಯಿಸಂ ಡೈಲಾಗು, ಅಸಾಧ್ಯವಾದ ಫೈಟಿಂಗ್ಸ್, ಅಬ್ಬರವಾದ ಹಾಡುಗಳಿರೋ ಸಿನಿಮಾ) ತಿಂದು ತಿಂದು ಬೊರ್ರಾಗಿತ್ತು... ನೀರ್ದೋಸೆ ನೋಡಿ... ಅಲ್ಲಲ್ಲ ತಿಂದು ಬಹಳ ಖುಷಿನೇ ಆಯ್ತು.

ಬೇರೆ ದೋಸೆಗಳಿಗೆ ಹೋಲಿಸಿದ್ರೆ
ನೀರ್ದೋಸೆ ಸ್ವಲ್ಪ ವೆಟ್...
ಆದ್ರೆ.. ಸಿನಿಮಾ ನೋಡಿದ ಮೇಲೆ
ಆಗುತ್ತೆ.. ಎಲ್ಲರಿಗೂ ಪೆಟ್...! :)

ಯಾರೋ ಬಾಗಿಲು ಕುಟ್ತಾ ಇದಾರೆ.. ಅಲ್ಲಲ್ಲ.. ತಟ್ತಾ ಇದಾರೆ... ಹೋಗಿ ನೋಡ್ಕೊಂಡು ಬರ್ತೀನಿ ! ;)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Nagaraja Maheswarappa, resident of Connecticut in USA, reviews Kannada film Neer Dose directed by Vijaya Prasad. The movie explores the journey of three friends played by Hariprriya, Jaggesh and Dattanna, with humor and drama.
Please Wait while comments are loading...