ನ್ಯೂಜೆರ್ಸಿಯಲ್ಲಿ ಮುದನೀಡಿದ ಮಹಾಶಿವರಾತ್ರಿ, ನೃತ್ಯೋತ್ಸವ

By: ಸರಿತಾ ನವಲಿ, ನ್ಯೂ ಜೆರ್ಸಿ
Subscribe to Oneindia Kannada

'ಮಹಾಶಿವರಾತ್ರಿ' ಆಚರಣೆಯ ಅಂಗವಾಗಿ, ಅಮೆರಿಕದ ನ್ಯೂ ಜೆರ್ಸಿ ರಾಜ್ಯದ ಎಡಿಸನ್‌ನ 'ಶ್ರೀ ಕೃಷ್ಣ ವೃಂದಾವನ' ದೇವಸ್ಥಾನದಲ್ಲಿ ದಿನವಿಡೀ ಶಾಸ್ತ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

'ಮಹಾಶಿವರಾತ್ರಿ'ಯ ಪ್ರಯುಕ್ತ ವಾರಾಂತ್ಯವಾದ ಮಾರ್ಚ್ 12ರಂದು ವಿವಿಧ ಸೇವಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿಯ ಶ್ರೀ ಪುತ್ತಿಗೆ ಮಠದ ಶಾಖೆಯಾದ 'ಶ್ರೀ ಕೃಷ್ಣ ವೃಂದಾವನ', ಸ್ಥಳೀಯ ಭಕ್ತರಿಗೋಸ್ಕರ ಬಹಳಷ್ಟು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. [ಟೆಕ್ಸಾಸ್ನಲ್ಲಿ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣ ವೃಂದಾವನ ಉದ್ಘಾಟನೆ]

Mahashivaratri and dance program in Sri Krishna Brundavana New Jersey

ಪ್ರಧಾನ ಅರ್ಚಕರಾದ ಯೋಗೀಂದ್ರ ಭಟ್, ಅರ್ಚಕರುಗಳಾದ ರಾಘವೇಂದ್ರ ಭಟ್, ವಾದಿರಾಜ ಭಟ್ ಮತ್ತು ಸುರೇಶ ಭಟ್ ಇವರ ಮಾರ್ಗದರ್ಶನ, ನೂರಾರು ಸ್ವಯಂಸೇವಕರುಗಳ ಸಹಕಾರ ಈ ನಿರಂತರ ನೃತ್ಯೋತ್ಸವ ಸೇವೆಯನ್ನು ಯಶಸ್ವಿಗೊಳಿಸಿದವು.

ಪ್ರತಿವರ್ಷ ನಡೆಸುವ ಈ ನೃತ್ಯೋತ್ಸವದಲ್ಲಿ ಈ ಬಾರಿಯೂ 32 ಸ್ಥಳೀಯ ನೃತ್ಯತಂಡಗಳು ಭಾಗವಹಿಸಿದ್ದವು. 445 ನೃತ್ಯಪಟುಗಳು ಭರತನಾಟ್ಯ, ಕುಚಿಪುಡಿ, ಕಥಕ್, ಓಡಿಸ್ಸಿ, ಮೋಹಿನಿ ಅಟ್ಟಂ ಶೈಲಿಗಳಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನವನ್ನು ನೀಡಿದರು. ಸುಸಜ್ಜಿತವಾದ ವೇದಿಕೆ 'ಆನಂದತೀರ್ಥ ಮಂಟಪ'ದಲ್ಲಿ ವಿಶೇಷವಾಗಿ 'ಶಿವ ತಾಂಡವ' ನೃತ್ಯಗಳು ಮನಸೂರೆಗೊಂಡವು. [ರಂಗದ ರಂಗೇರಿಸಿದ ಸಂಜನಾ, ರಿನಿಜಾ ರಂಗಪ್ರವೇಶ]

Mahashivaratri and dance program in Sri Krishna Brundavana New Jersey

ನೃತ್ಯೋತ್ಸವದ ಜೊತೆಗೆ ವಿಶೇಷ ಪೂಜೆಗಳನ್ನೂ ಕೈಗೊಳ್ಳಲಾಯಿತು. 'ದ್ವಾದಶ ಲಿಂಗ-ಮಂಡಲ ಪೂಜೆ', 'ಏಕಾದಶ ರುದ್ರಾಭಿಷೇಕ', 'ಮೃತ್ಯುಂಜಯ ಹೋಮ', 'ಅಘೋರ ಹೋಮ', 'ಲಕ್ಷ ಮೃತ್ಯುಂಜಯ ಜಪ' ಪೂಜೆಗಳನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು.

ದಿನದ ಎಲ್ಲ ಕಾರ್ಯಕ್ರಮಗಳು, 'ಶ್ರೀ ಶ್ರೀನಿವಾಸ ಕಲ್ಯಾಣ' ವಿಶೇಷ ನೃತ್ಯರೂಪಕದೊಂದಿಗೆ ಮುಕ್ತಾಯಗೊಂಡವು. ಅಲ್ಲದೇ ಮುಂಬರುವ ಏಪ್ರಿಲ್ 2ರಂದು, ಶ್ರೀ ಕೃಷ್ಣ ವೃಂದಾವನದ 13ನೆಯ ವಾರ್ಷಿಕೋತ್ಸವ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಜಯಂತಿ ಉತ್ಸವವನ್ನು ವಿಶೇಷ ಪೂಜೆಗಳೊಂದಿಗೆ ಆಚರಿಸಲಾಗುವುದೆಂದು ಪ್ರಧಾನ ಅರ್ಚಕರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Classical dance program was organized by Sri Krishna Brundavana in New Jersey, America on 12th March on the occasion of Mahashivaratri. 445 dancers performed various types of dances. A report by Saritha Navali.
Please Wait while comments are loading...