ರಜೆಯ ಮಜಕ್ಕಾಗಿ 'ಲ್ಯಾನ್ಗ್ ಕಾವಿ' ಎಂಬ ಮಾಂತ್ರಿಕ ದ್ವೀಪ

By: ಸೀತಾ ಕೇಶವ, ಸಿಡ್ನಿ
Subscribe to Oneindia Kannada

ಪ್ರವಾಸದ ಮಾಡುವವರಿಗೆ ಮೊದಲು ಇರಬೇಕಾದ ಅರ್ಹತೆ ಅಂದ್ರೆ ಉತ್ಸಾಹ ಮತ್ತು ಆಸಕ್ತಿ. ಪ್ರಯಾಣ ಮಾಡುವ ಮನಸ್ಸು ಹಾಗೂ ಹೊಸ ಜಾಗಗಳನ್ನು ನೋಡುವ ಉತ್ಸಾಹದೊಂದಿಗೆ ನಾವು ಈ ಬಾರಿ 'ಲ್ಯಾನ್ಗ್ ಕಾವಿ' ದ್ವೀಪಕ್ಕೆ ತೆರಳಿದ್ದೆವು. ಈ ಹೆಸರನ್ನೇ ಹೆಚ್ಚು ಕೇಳಿರದಿದ್ದರೂ ರಜೆಯ ಮಜ ಅನುಭವಿಸುವುದಕ್ಕಾಗಿ ನಾವು ಆಯ್ದುಕೊಂಡ ಜಾಗ ಕೌಲಾಲಾಂಪುರ ದಿಂದ 413 ಕಿ.ಮಿ ದೂರದಲ್ಲಿರುವ ಲ್ಯಾನ್ಗ್ ಕಾವಿ ದ್ವೀಪ.

ಇಲ್ಲಿಗೆ ರೈಲು, ವಿಮಾನ ಮತ್ತು ದೋಣಿ ಸೌಲಭ್ಯಗಳಿವೆ. ಪ್ರತಿ ದಿವಸ ಮೂರು ದೋಣಿಗಳು 'ಪೆನಾಂಗ್' ದ್ವೀಪದಿಂದ ಲ್ಯಾನ್ಗ್ ಕಾವಿ ದ್ವೀಪಕ್ಕೆ ಬರುತ್ತೆ. ನಾವು ಕೌಲಾಲಾಂಪುರದಿಂದ ವಿಮಾನದಲ್ಲಿ ಹೋಗಿದ್ದೆವು. ಪ್ರಯಾಣ ಕೇವಲ ಒಂದು ಘಂಟೆ ಮಾತ್ರ. ಈ ದ್ವೀಪದ 'ಕಾಡಿನ ಜೀವನ'ದ ಅನುಭವ ಪಡೆಯಬೇಕೆಂದರೆ 'ಮ್ಯಾಟ್ ಚಿನ್ ಚಾನ್ಗ್' ಬೆಟ್ಟಕ್ಕೆ ಕೇಬಲ್ ಕಾರ್ ನಲ್ಲಿ ಹೋಗಬೇಕು.[ಡಲ್ಲಾಸ್ ನಲ್ಲಿ ಮಲ್ಲಿಗೆ ಕನ್ನಡಿಗರ ಘಮಘಮ ಯುಗಾದಿ!]

Lang Kavi of Malaysia-a magical island!

ಕೇಬಲ್ ಕಾರಿನಲ್ಲಿ ಮೊದಲು ಹೊರಟಾಗ, ಸಮುದ್ರಮಟ್ಟಕ್ಕಿಂತ 2000 ಅಡಿ ಇತ್ತರದಿಂದ ವಾಟರ್ ಫಾಲ್, ದಟ್ಟವಾದ ಕಾಡುಗಳ ದೃಶ್ಯಾವಳಿ ಕಾಣುತ್ತದೆ. ಇದು ಮೊದಲ ನಿಲ್ದಾಣ. ಇಲ್ಲಿ ಇಳಿದು ಪ್ರಕೃತಿ ಸೌಂದರ್ಯವನ್ನು ಮನದಣಿಯೆ ಅನುಭವಿಸಬಹುದು.

Lang Kavi of Malaysia-a magical island!

ನಂತರ ಇಪ್ಪತ್ತು ನಿಮಿಷ ಕೇಬಲ್ ಕಾರಿನಲ್ಲಿ ಸಮುದ್ರಮಟ್ಟಕ್ಕಿಂತ 2300 ಅಡಿ ಎತ್ತರದಲ್ಲಿರುವ ಹೆಸರಾಂತ ಆಕಾಶ ಸೇತುವೆಯತ್ತ ಪಯಣ. ಈ ಸೇತುವೆಯ ಮೇಲೆ ನಡೆದಾಡುವ ಅನುಭವ ನಿಜಕ್ಕೂ ರುದ್ರರಮಣೀಯ! ಸುಮಾರು ಇನ್ನೂರು ಮೆಟ್ಟಲುಗಳನ್ನು ಕಾಲು ನಡಿಗೆಯಲ್ಲಿ ಹತ್ತಬಹುದು ಇಲ್ಲದಿದ್ದಲ್ಲಿ 'ಟ್ರಾಮ್' ವ್ಯವಸ್ಥೆಯೂ ಇದೆ.

Lang Kavi of Malaysia-a magical island!

ಲ್ಯಾನ್ಗ್ ಕಾವಿ ದ್ವೀಪದ ಇನ್ನೊಂದು ಅವೀಸ್ಮರಣೀಯ ಅನುಭವವೆಂದರೆ ದೋಣಿವಿಹಾರದ ಜಾಗ. 'ಮ್ಯಾಂಗ್ರೋವ್ ಕಾಡು' ತುಂಬಿರುವ ಟಾನ್ ಜಂಗರು ಎನ್ನುವ ಊರಿಗೆ ದೋಣಿಯಲ್ಲಿ ಹೋಗಬೇಕು. ಈ ಸುಂದರ, ದಟ್ಟ ಕಾಡುಗಳ ನಡುವಿನ ನೀರಿನಲ್ಲಿ ದೋಣಿ ವಿಹಾರವೆಂದರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿತ್ತು. ಆ ಸಣ್ಣ ಪುಟ್ಟ ಜಾಗದಲ್ಲೂ ನಾಜೂಕಾಗಿ ದೋಣಿ ಓಡಿಸುತ್ತಿದ್ದ ನಾವಿಕನ ಕೌಶಲ್ಯವನ್ನು ಮೆಚ್ಚಲೇಬೇಕು!

ಹಾದಿಯಲ್ಲಿ ವಿವಿಧ ರೀತಿಯ ಕೋತಿ, ಹದ್ದುಗಳು ಕಾಣಿಸಿದವು. ಬ್ರಾಹ್ಮಿನಿ ಕೈಟ್ ಮತ್ತು ಬಿಳಿ ಎದೆಯ ಹದ್ದು ಎಂಬ ಎರಡು ವಿಧದ ಹದ್ದುಗಳು ಆಕರ್ಷಿಸಿದವು. ಆರ್ಚರ್ ಫಿಶ್, ಮಶ್ರೂಮ್ ಸ್ಟಿಂಗ್ ರೇ, ಟ್ರೆವಿಲ್ಲೀ ಮತ್ತು ಸ್ಟಿಬಾಸ್' ಮುಂತಾದ ಜಲಚರಗಳಿಗೆ ಆಹಾರ ನೀಡುವುದಕ್ಕೂ ನಮಗೆ ಅವಕಾಶವಿದೆ..

Lang Kavi of Malaysia-a magical island!

ಅಲ್ಲಿಂದ ದೊಡ್ಡ ಸುಣ್ಣಕಲ್ಲು ಗುಹೆಯೊಳಗೆ ತಲೆ ಬಗ್ಗಿಸಿಕೊಂಡು ನಿಶ್ಶಬ್ದವಾಗಿ ಹೊಕ್ಕರೆ ತಣ್ಣಗೆ ಎ.ಸಿ ರೂಮ್ ನಲ್ಲಿ ನಡೆದಂತಾಗುತ್ತದೆ. ಅಲ್ಲಿ ಯಥೇಚ್ಛವಾಗಿದ್ದ ಬಾವಲಿಗಳೂ ನಮಗೇನೂ ಮಾಡುವುದಿಲ್ಲ ಅನ್ನೋದು ಅಚ್ಚರಿಯ ವಿಷಯ.

Lang Kavi of Malaysia-a magical island!

ಲ್ಯಾನ್ಗ್ ಕಾವಿ ಅಕ್ವೇರಿಯಂ ಅನ್ನು ನೋಡಲು ಎರಡು ಕಣ್ಣು ಸಾಲದು. ಇದರೊಂದಿಗೆ ವಿಧ ವಿಧದ ಪೆಂಗ್ವಿನ್ ಗಳೂ ನಮ್ಮನ್ನು ಆಕರ್ಷಿಸಿದವು. ಇಷ್ಟೇ ಅಲ್ಲ, ಈ ದ್ವೀಪದಲ್ಲಿ ಇನ್ನೂ ಏನೇನೋ ಇದೆ. ಪ್ರವಾಸಿಗರನ್ನು ಸೆಳೆಯುವ ಮಾಂತ್ರಿಕ ಶಕ್ತಿಯೂ ಇದಕ್ಕಿದೆ.

ಒಟ್ಟಿನಲ್ಲಿ ಈ ರಮಣೀಯ ದ್ವೀಪ ಹೈಕಿಂಗ್, ಸೈಕಲಿಂಗ್, ನೀರಿನ ಆಟಗಳಿಗೆ ಹೆಸರುವಾಸಿಯಾಗಿರುವುದರಿಂದ ರಜೆಯ ಮಜಾ ಅನುಭವಿಸುವುದಕ್ಕೆ ಹೇಳಿಮಾಡಿಸಿದ ಜಾಗ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lang Kavi of Malaysia is a magical island which looks like a heaven to the tourists. Here is an experience a tourist, who visited Lank Kavi island recently.
Please Wait while comments are loading...