ಕೊರಿಯದಲ್ಲಿ ಭಾನುವಾರ ಹಾರಲಿದೆ ಕನ್ನಡ ಬಾವುಟ

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೆ ನೀ ಕನ್ನಡವಾಗಿರು
ಕನ್ನಡವೇ ಸತ್ಯಾ ಕನ್ನಡವೇ ನಿತ್ಯ ಎಂಬ ದ್ಯೇಯವಾಕ್ಯ ಇಟ್ಟುಕೊಂಡ ಕೊರಿಯಾ ಕನ್ನಡ ಕೂಟದ ಗೆಳೆಯರು ಈ ಬಾರಿಯ ಕನ್ನಡ ರಾಜ್ಯೋತ್ವವನ್ನು ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕೊರಿಯಾ ಕನ್ನಡ ಕೂಟವು ಭಾನುವಾರ ನವೆಂಬರ್ 17th, 2013ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು, ಸಿಯೋಲ್ ನ್ಯಾಷನಲ್ ವಿಶ್ವವಿದ್ಯಾಲಯ ಗೊನ್ ಹಾಲ್, ಸಿಯೋಲ್ ನಲ್ಲಿ ಹಮ್ಮಿಕೊಂಡಿದೆ. ಎಲ್ಲರೂ, ಅಂದು ತಮ್ಮ ಬೇರೆ ಕೆಲಸಗಳನ್ನು ಬದಿಗೊತ್ತಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿ.
ಕಾರ್ಯಕ್ರಮದ ವೇಳಾಪಟ್ಟಿ
10:00 ಕಾರ್ಯಕ್ರಮ ಪ್ರಾರಂಭ
10:30 ಧ್ವಜಾರೋಹಣ ಮತ್ತು ನಾಡಗೀತೆ
11:00 ಸಾಂಸ್ಕೃತಿಕ ಕಾರ್ಯಕ್ರಮಗಳು
13:00 ಮಧ್ಯಾಹ್ನ ಭೋಜನ
14:30 ಚಟುವಟಿಕೆಗಳು
15:40 ಬಹುಮಾನ ವಿತರಣೆ
15:50 ವಂದನಾರ್ಪಣೆ
15:55 ಸಾಮೂಹಿಕ ಭಾವಚಿತ್ರ
16:00 ಕಾರ್ಯಕ್ರಮ ಮುಕ್ತಾಯ [2012ರ ಕೊರಿಯ ಕನ್ನಡ ರಾಜ್ಯೋತ್ಸವ ವರದಿ]
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರಾಹುಲ್ ಗೌಡ
010-2600-1947
[email protected].











Click it and Unblock the Notifications