ಗಾಳಿನಗರಿ ಶಿಕಾಗೊದಲ್ಲಿ ವೈಭವದ ಹವ್ಯಕ ಸಮ್ಮೇಳನ

Posted By: ತ್ರಿವೇಣಿ ಶ್ರೀನಿವಾಸರಾವ್, ಇಲಿನಾಯ್
Subscribe to Oneindia Kannada

HAVYAKA ASSOCIATION OF AMERICAS(HAA) ಇದು 1982ರಲ್ಲಿ, ಅಮೆರಿಕದಲ್ಲಿ ನೆಲೆಸಿರುವ ಹವ್ಯಕ ಸಮುದಾಯವನ್ನು ಸಂಘಟಿಸಲು ಆರಂಭವಾದ ಒಕ್ಕೂಟ. ಆಗಿನಿಂದ ಈಗಿನವರೆಗೆ, ಪ್ರತಿ ಎರಡು ವರ್ಷಗಳಿಗೊಮ್ಮೆ ಅಮೆರಿಕದ ವಿವಿಧ ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಿಕೊಂಡು ಬಂದಿದೆ.

ಅದರಂತೆ, ಈ ವರ್ಷದ ಸಮ್ಮೇಳನವು ಜುಲೈ 1 ಮತ್ತು 2ರ ಶನಿವಾರ, ಭಾನುವಾರಗಳಂದು, ಇಲಿನಾಯ್ ರಾಜ್ಯದ ಗ್ರೇಸ್‍ಲೇಕ್' ನಗರದಲ್ಲಿರುವ, ಚಿನ್ಮಯ ಮಿಷನ್ ಸಂಸ್ಥೆಯ ಆಡಳಿತಕೊಳ್ಳಪಟ್ಟ ಯಮುನೋತ್ರಿ' ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

Havyaka Sammelana In Illinois by Havyaka Association of Americas

ಮುದ್ದು ಗಣೇಶನ ಮೂರ್ತಿಯನ್ನು ಜಾಗಟೆ, ತಾಳಮೇಳಗಳೊಂದಿಗಿನ ಮೆರವಣಿಗೆಯಲ್ಲಿ ಕರೆತರುವ ಮೂಲಕ ಸಮಾವೇಶ ಆರಂಭಗೊಂಡಿತು.

Read Also : ಹವ್ಯಕ ಬ್ರಾಹ್ಮಣ ಬದುಕು ಮತ್ತು ವಿವಾಹ ಪದ್ಧತಿ

ಹವ್ಯಕ ಒಕ್ಕೂಟದ ಅಧ್ಯಕ್ಷರಾದ ಅನಿಲ್ ಮತ್ತು ಸುಜಾತ ಅಡ್ಕೋಳಿ, ಹವ್ಯಕ ಸಮಿತಿಯ ಮುಖ್ಯಸ್ಥರಾದ ಶಂಕರ್ ಹೆಗ್ಡೆ, ರಾಜಾಶಂಕರ್ ಕಣಗಲಘಟ್ಟ, ಈಶ್ವರ ವಾರಣಾಸಿ, ಮುರಳಿಧರ್ ಕಜೆ, ಬಾಲ ಪಳಮಡೈ, ಮೂರ್ತಿ, ಸಚಿನ್ ಮತ್ತಿತರರು ಜ್ಯೋತಿ ಬೆಳಗುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು.

Havyaka Sammelana In Illinois by Havyaka Association of Americas

ಈ ಕಾರ್ಯಕ್ರಮಕ್ಕಾಗಿ ಭಾರತದಿಂದ ಆಗಮಿಸಿದ್ದ ಕಲಾವಿದರಾದ ನಾಗಚಂದ್ರಿಕ ಭಟ್, ಎಂ.ಡಿ. ಪಲ್ಲವಿ, ಅರುಣ್ ಕುಮಾರ್ ಅವರು ಸುಗಮ ಸಂಗೀತ, ಚಿತ್ರಗೀತೆಗಳನ್ನು ಹಾಡಿ ಜನಮನ ತಣಿಸಿದರು.

Havyaka Sammelana In Illinois by Havyaka Association of Americas

ಕೆನಡಾದ ಟೊರಾಂಟೊದಿಂದ ಆಗಮಿಸಿದ್ದ ಯಕ್ಷಮಿತ್ರ' ತಂಡವು ಸುಭದ್ರ ಕಲ್ಯಾಣ' ಯಕ್ಷಗಾನವನ್ನು ಪ್ರದರ್ಶಿಸಿತು. ಇದಲ್ಲದೆ ಹವ್ಯಕ ಸದಸ್ಯರಿಂದ ಗಾಯನ, ನೃತ್ಯ, ಮಕ್ಕಳ ನಾಟಕ ಮುಂತಾದ ಹತ್ತುಹಲವು ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

Havyaka Sammelana In Illinois by Havyaka Association of Americas

ನಿರ್ಮಲಾ ಮೋಹನ್ ಅವರಿಂದ ಮಂಡಲ ಕಲೆ'ಯ ಪ್ರದರ್ಶನ, ಡಾ.ಸುಮಾ ರಾಜಾಶಂಕರ್ ಅವರು ಮಕ್ಕಳಿಗಾಗಿ ನಡೆಸಿಕೊಟ್ಟ ವಿಜ್ಞಾನ ಶಿಬಿರ, ಲೀಲಾ ಹೆಗಡೆಯವರು ಸಿದ್ಧಪಡಿಸಿದ್ದ ಗೊಂಬೆಗಳು, ಈಗ ಕಣ್ಮರೆಯಾಗಿರುವ ಗೃಹೋಪಯೋಗಿ ವಸ್ತು ಪ್ರದರ್ಶನ... ಇವೆಲ್ಲವೂ ಈ ಸಮ್ಮೇಳನದ ವೈಶಿಷ್ಟ್ಯವಾಗಿದ್ದವು.

Havyaka Sammelana In Illinois by Havyaka Association of Americas

ಹವ್ಯಕ ಸಮುದಾಯದ ಕಲೆ, ಸಂಸ್ಕೃತಿ, ಊಟೋಪಚಾರದ ಸೊಗಡನ್ನು ಎರಡು ದಿನಗಳ ಕಾಲ ಪಸರಿಸಿದ ಸಮ್ಮೇಳನ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಯಿತು. ಮುಂದಿನ ಸಮ್ಮೇಳನ ಕೆನಡಾದ ಟೊರಾಂಟೊದಲ್ಲಿ ನಡೆಯುತ್ತಿರುವುದರಿಂದ, ಎಲ್ಲರನ್ನೂ ಅಲ್ಲಿಗೆ ಆಹ್ವಾನಿಸಲಾಯಿತು.

Read also :ಅಮೆರಿಕ ಹವ್ಯಕ ಸಮ್ಮೇಳನ ಕುರಿತಾದ ಸೊಗಸಾದ ವರದಿ

ಈ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಪ್ರಾಯೋಜಕರು, ಕಾರ್ಯಕರ್ತರಿಗೆ, ಧನ್ಯವಾದ ಸಮರ್ಪಿಸುವ ಮೂಲಕ ಸಮ್ಮೇಳನ ಶುಭಾಂತ್ಯ ಕಂಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Havyaka Sammelana held In Illinois by Havyaka Association of Americas on July 1 and 2. Many artists including MD Pallavi enthralled the audience with melodious songs. Yakshagana, science workshop, doll exhibition were also part of the celebrations. Report by Triveni Srinivas Rao.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ