ಅಮೆರಿಕನ್ನಡ ಸಂಚಿಕೆಗಳಿಗೆ ಕಂಪ್ಯೂಟರ್ ತಂತ್ರಾಂಶದ ಕಾಣಿಕೆ
ಹರಿ ಅಂದರೆ ನೆನಪಾಗುವುದು ಅವರ ಮಾತುಗಳು. ನಿರರ್ಗಳವಾಗಿ, ಆ ದಂಡೆಯಿಂದ ಈ ದಂಡೆಗೆ ಬಡಿಯುತ್ತ, ಪಕ್ಕದ ಗಿಡ ಮರಗಳನ್ನು ಮಾತಾಡಿಸುತ್ತ, ಸಸಿಗಳನ್ನು ಪೋಷಿಸುತ್ತ ಹರಿಯುವ ಕನ್ನಡ ನದಿ ನಮ್ಮ ಹರಿ. ಮಾತು ಅಂದರೆ ಹಾಳು ಹರಟೆ ಅಲ್ಲ. ಗಂಭೀರ ವಿಷಯಗಳನ್ನು ಸಹಜವಾಗಿ ಚರ್ಚಿಸುವುದು. ಹರಿಯ ಜ್ಞಾನ ಆಳವಾಗಿತ್ತು, ಹರವು ಅಪಾರವಾಗಿತ್ತು. ಕಠಿನ ವಿಷಯಗಳನ್ನು ಎಲ್ಲರಿಗೂ ತಿಳಿಯುವ ಹಾಗೆ ತರ್ಕಬದ್ಧವಾಗಿ ಉದಾಹರಣೆ ಸಹಿತ ಮಾತಿನಲ್ಲಿ ವಿವರಿಸುವುದು ಹರಿಯ ವೈಶಿಷ್ಟ್ಯವಾಗಿತ್ತು.
ಮಾತೆಂದರೆ ಹರಿಗೆ ಎಷ್ಟು ಆಪ್ತವಾಗಿತ್ತು ಎಂದು ತಿಳಿಯಲು ಅವರ ಪುಸ್ತಕಗಳ ಹೆಸರುಗಳೆ ಸಾಕು: ಮಾತಿನ ಮಂಟಪ, ಮಾತಿನ ಚಪ್ಪರ, ಮಾತಿನ ಚಾವಡಿ, ಮಾತಿನ ಮಲ್ಲಿಗೆ, ಮಾತೇ ಮುತ್ತು. ಇವೆಲ್ಲ ಪ್ರಬಂಧ, ವಿಮರ್ಶೆ, ವಿಚಾರ, ಸಂಶೋಧನೆಗಳನ್ನೊಳಗೊಂಡ ಪ್ರೌಢ ಲೇಖನಗಳ ಹೊತ್ತಿಗೆಗಳು.

ಶಿವನಿಗೆ ಅಭಿಷೇಕ ಪ್ರಿಯ ಮತ್ತು ವಿಷ್ಣುವಿಗೆ ಅಲಂಕಾರ ಪ್ರಿಯ ಎಂದು ಹೇಳಿಕೆ. ನಮ್ಮ ಹರಿ-ಹರ-ಈಶ್ವರನಿಗೆ ಎರಡು ಪ್ರಿಯ. ಮಾತಿನ ಅಭಿಷೇಕ, ಮಾತಿನ ಅಲಂಕಾರ. ಆದರೆ ಈ ಅಲಂಕಾರ ಅಭಿಷೇಕಗಳು ತಮಗಲ್ಲ, ಕೇಳುಗರಿಗೆ. ಹರಿಯ ಪುಸ್ತಕಗಳು ಯಾರಿಗೂ ಎಟುಕದ ಪಾಂಡಿತ್ಯದ ಓದಲಾಗದ ಕಂತೆಗಳಲ್ಲ.
ಉತ್ತಮ ಲೇಖಕರ ಬಗ್ಗೆ ಸಾಮಾನ್ಯವಾಗಿ ಹೇಳುವುದು ಪುಸ್ತಕ ತನ್ನಿಂದ ತಾನೆ ಓದಿಸಿಕೊಂಡು ಹೋಗುತ್ತದೆ'' ಎಂದು. ಆದರೆ ಹರಿಯ ಪುಸ್ತಕ ನೀವು ಓದುವುದೂ ಇಲ್ಲ, ಅದು ಓದಿಸಿಕೊಂಡು ಹೋಗುವುದೂ ಇಲ್ಲ! ಓದನ್ನೆ ಮೀರಿ ಹರಿಯೆ ನಿಮ್ಮ ಎದುರು ಕುಳಿತು ಮಾತಾಡುತ್ತಿದ್ದಾರೆ ಎನ್ನುವ ಅನುಭವ ಸಹಜ. ಮಾತೆ ಹರಿಯ ಆತ್ಮಕಥೆ? ಮೌನ ಮಾತನಾಡಿಸಿದಾಗ''. ಹರಿಯ ಪುಸ್ತಕ ಓದಿದಾಗ ಮೌನ ನಿಮ್ಮದಾದರೆ, ಮಾತು ಹರಿಯದು.
ಎರಡನೆಯದಾಗಿ, ಹರಿಯ ಕನ್ನಡ ಪ್ರೇಮ ಕೇವಲ ಬರಹಕ್ಕೆ ಸೀಮಿತವಾಗಿರಲಿಲ್ಲ. ಹರಿ ಕನ್ನಡದಲ್ಲಿ, ಕನ್ನಡಿಗರಲ್ಲಿ ಒಂದಾಗಿ ಬೆರೆತುಕೊಂಡರು. ಕನ್ನಡ ಸಂಘಗಳನ್ನು ಕಟ್ಟಿದರು. ಅಮೆರಿಕದ ಕನ್ನಡ ಕೂಟಗಳ ಸಾಹಿತ್ಯ ಸಂಚಿಕೆಗಳನ್ನು ಸಂಪಾದಿಸಿದರು. ಕನ್ನಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು. ಉತ್ತುಂಗದಲ್ಲಿ ನಿಲ್ಲುವುದು ಅವರ ಅಮೆರಿಕನ್ನಡ ಪತ್ರಿಕೆ. ಇದೊಂದು ಸಾಹಸವೆ ಸರಿ. ಎರಡು ತಿಂಗಳಿಗೊಮ್ಮೆ 50ಕ್ಕೂ ಹೆಚ್ಚು ಪುಟಗಳನ್ನು ಪ್ರಕಟಿಸುವ ಉದ್ದೇಶ.

ತಾಂತ್ರಿಕ ತೊಂದರೆಗಳಿರಲಿ, ಅಮೆರಿಕೆಯಲ್ಲಿ ಕನ್ನಡ ಬರೆಯುವವರಾರು? ಬರೆದರೂ ಓದುವವರಾರು? ಪಾಟ್ಸ್‌ಟೌನ್ ಎನ್ನುವ ಅಮೆರಿಕೆಯ ಮೂಲೆಯೊಂದರಲ್ಲಿ ಕುಳಿತು ಅಮೆರಿಕೆಯ ಉದ್ದಗಲಕ್ಕೂ ಬರಹಗಾರರನ್ನೂ ಓದುಗರನ್ನೂ ಕಲೆ ಹಾಕಿದವರು ಹರಿ. ಕಲೆ ಹಾಕಿದರು ಅನ್ನುವುದಕ್ಕಿಂತ ಹುಟ್ಟು ಹಾಕಿ, ಪೋಷಿಸಿ, ಬೆಳೆಸಿದರು ಎನ್ನುವುದೆ ಉಚಿತ. ತನಗೆ ಕನ್ನಡ ಬರುವುದಿಲ್ಲ, ಕನ್ನಡ ಬರಹಗಾರನಲ್ಲ ಎಂದುಕೊಂಡ ಅನೇಕರು ಅಮೆರಿಕನ್ನಡದ ಪುಟಪುಟಗಳಲ್ಲಿ ಅವಿಸ್ಮರಣೀಯರಾಗಿದ್ದಾರೆ.
1983-84ರಲ್ಲಿ ಕನ್ನಡ ಬರೆಯಲು, ಸಂಪಾದಿಸಲು, ಮತ್ತು ಲೇಸರ್ ಪ್ರಿಂಟರ್ ನಲ್ಲಿ ಮುದ್ರಿಸಲು ಒಂದು ಕಂಪ್ಯೂಟರ್ ತಂತ್ರಾಂಶ ಒಂದನ್ನು ನಿರ್ಮಿಸಿದ್ದೆ. ನನ್ನ ಕೆಲ ಮುದ್ರಿತ ಕವಿತೆಗಳನ್ನು ಅಂದಿನ ಲಾಸ್ ಏಂಜಲೀಸ್ ಕನ್ನಡ ಕೂಟದ ಪಿಕ್‌ನಿಕ್ ನಲ್ಲಿ ಮೊದಲ ಬಾರಿ ಇತರರಿಗೆ ತೋರಿಸಿದೆ. ರಾತ್ರಿ ಮನೆಗೆ ಬಂದಾಗ ದೂರವಾಣಿ ಕರೆ ನಾನು ಹರಿ ಅಂತ....'' ಈಗಿನಂತೆ ಸೆಲ್ ಫೋನುಗಳು ಇದ್ದರೆ ನಾನು ಪಿಕ್‌ನಿಕ್‌ನಲ್ಲಿ ಇದ್ದಾಗಲೆ ಕರೆಯುತ್ತಿದ್ದರೊ ಏನೋ. ಇದು ಅವರ ಜಾಗೃತ ಕನ್ನಡ ಪ್ರಜ್ಞೆಗೆ ಉದಾಹರಣೆ.
ಅಮೆರಿಕೆಯ ಯಾವ ಮೂಲೆಯಲ್ಲೆ ಯಾವ ಕನ್ನಡ ಸಂಗತಿ ನಡೆದರೂ ಅದು ಹರಿಯ ಅರಿವಿನ ಪರಿಧಿಯಲ್ಲೆ. ಹೀಗೆ ಶುರುವಾದ ನಮ್ಮ ಮಾತುಕತೆ ಮುಗಿದದ್ದೆ ಇಲ್ಲ. ಮುಂಚೆಯೆ ನನ್ನನ್ನು ಅರಿತವರಲ್ಲ, ನಾನು ಮುದ್ರಿಸಿದ್ದನ್ನು ಕಂಡವರಲ್ಲ. ಆ ಒಂದೆ ದೂರವಾಣಿ ಕರೆಯಲ್ಲಿ, ಅಮೆರಿಕನ್ನಡಕ್ಕೆ ನನ್ನ ಸೇರಿಕೆಯಾಗಿತ್ತು. ಅಮೆರಿಕನ್ನಡದ ಮೊದಲನೆಯ ಸಂಚಿಕೆ ಜಯರಾಮ ಉಡುಪ ಅವರ ಕೈಬರಹದಲ್ಲಿ ಮೂಡಿದ್ದರೆ, ಎರಡನೆಯ ಸಂಚಿಕೆಯಿಂದ ನನ್ನ ತಂತ್ರಾಂಶದಿಂದ ಮುದ್ರಿಸಿದ ಲೇಖನಗಳು ಬರತೊಡಗಿದವು.
ಅಮೆರಿಕನ್ನಡ ಅನ್ನುವ ಪದವೆ ನಮ್ಮ ಪ್ರಜ್ಞೆಯಲಿ ಹಾಸು ಹೊಕ್ಕಾಗಿ ಸೇರಿದೆ. ಪತ್ರಿಕೆಯ ಜೊತೆಗೆ ಇದು ಹರಿಯ ಇನ್ನೊಂದು ಅಪೂರ್ವ ಕಾಣಿಕೆ. ಅಮೆರಿಕೆಯಲ್ಲಿ ಕನ್ನಡದ ಜಾಗೃತಿಗೆ ಹರಿ ಮತ್ತು ಅವರ ಅಮೆರಿಕನ್ನಡ ಪತ್ರಿಕೆ ಕಾರಣ. ಅಮೆರಿಕಯೆಲ್ಲಿ ಕನ್ನಡದ ಹರಿಕಾರ ಹರಿಯೆ ಎಂದು ನಿಸ್ಸಂಶಯವಾಗಿ ಹೇಳಬಹುದು.
-
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Gold: ಅಮೆರಿಕಕ್ಕೆ ವೆನೆಜುವೆಲಾದಿಂದ 1,000 ಕೆ.ಜಿ ಚಿನ್ನ ರಫ್ತು: ಬಹುಕೋಟಿ ಡಾಲರ್ ಒಪ್ಪಂದಕ್ಕೆ ಸಹಿ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ











Click it and Unblock the Notifications