ಸಿಂಗಪುರದಲ್ಲಿ 'ನಾದಬ್ರಹ್ಮ' ಹಂಸಲೇಖ ಪ್ರೇಮಲೋಕ

ಸದಾ ಹೊಸತನ್ನೇನ್ನಾದರೂ ಸಿಂಗನ್ನಡಿಗರಿಗೆ ನೀಡಲು ಹಾತೊರೆಯುವ ಕನ್ನಡ ಸಂಘ (ಸಿಂಗಪುರ), ಈ ವರ್ಷ ಹಲವು ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಉತ್ತರಾಯಣ ಸಂಕ್ರಾಂತಿ ಸಂಭ್ರಮದಿಂದ ಆಗಲೇ ಅದ್ದೂರಿಯಾಗಿ ಆರಂಭವಾಗಿರುವ ಈ ವರ್ಷ, ಹಲವು ಅರ್ಥಪೂರ್ಣ, ಮನೋರಂಜನೆಯ ಕಾರ್ಯಕ್ರಮಗಳಿಂದ ಅಲಂಕೃತಗೊಳ್ಳಲಿದೆ.

ಕನ್ನಡ ಚಿತ್ರರಸಿಕರ ಹೃದಯದಲ್ಲಿ ಪ್ರೇಮಲೋಕವನ್ನು ಸೃಷ್ಟಿಸಿಕೊಂಡಿರುವ ಗೀತರಚನೆಕಾರ, ಸಂಭಾಷಣೆಕಾರ ಹಾಗು ಮೆಲುಕು ಹಾಕುವಂತಹ ಪ್ರೇಮಗೀತೆಗಳ ಸಂಗೀತಕಾರ ಗಂಗರಾಜು ಉರುಫ್ ಹಂಸಲೇಖ ಅವರು ಕನ್ನಡ ಸಂಘ (ಸಿಂಗಪುರ) ಆಯೋಜಿಸಿರುವ ಮಾರ್ಚ್ 1ರ , 'ಹಂಸಲೇಖ-ಪ್ರೇಮಲೋಕ ಸುಮಧುರ ಸಂಜೆ' ಕಾರ್ಯಕ್ರಮಕ್ಕೆ ತಮ್ಮ ತಂಡದೊಂದಿಗೆ ಆಗಮಿಸುತ್ತಿದ್ದಾರೆ.

Hamsalekha-Premaloka Musical Evening in Singapore

ಸಿಂಗಪುರದಲ್ಲಿ ಮೊದಲ ಬಾರಿಗೆ ಸಂಗೀತ ಸಂಜೆಯಲ್ಲಿ ಪಾಲ್ಗೊಳ್ಳುತ್ತಿರುವ ಹಂಸಲೇಖ ಅವರು ಸುಮಾರು ನಾಲ್ಕು ಗಂಟೆಗಳ ಕಾಲ ಸಿಂಗನ್ನಡಿಗರನ್ನು ಹಂಸಲೋಕಕ್ಕೆ ಕೊಂಡೊಯ್ದು ತಮ್ಮ ಜನಪ್ರಿಯ ಗೀತೆಗಳಿಂದ ರಂಜಿಸಲಿದ್ದಾರೆ. [ಹಂಸಲೇಖ, ಹರಿಕೃಷ್ಣ : ಇಬ್ಬರಲ್ಲಿ ಯಾರು ಪ್ರತಿಭಾನ್ವಿತರು]

ಈ ಅಪೂರ್ವ ನಾದಗಂಗೆ ಸಿಂಗಪುರದ ಡೋವರ್ ನಲ್ಲಿರುವ ''ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಶನ್ ಸೆಂಟರ್''ನಲ್ಲಿ ಹರಿದಾಡಲಿದೆ. ಸಿಂಗಪುರ ಅಲ್ಲದೆ ಹತ್ತಿರದ ಮಲೇಶಿಯಾ, ಇಂಡೋನೇಷ್ಯ ಮತ್ತು ಥೈಲಾಂಡ್ ನಲ್ಲಿರುವ ಕನ್ನಡಿಗರೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ಹಂಸಲೇಖರ ಮರೆಯಲಾರದ ಗೀತೆಗಳ ನಾದರಸವನ್ನು ಸವಿಯಬೇಕೆಂದು ಕನ್ನಡ ಸಂಘ (ಸಿಂಗಪುರ) ಅಶಿಸುತ್ತದೆ. [ಹಂಸಲೇಖ ಕಣ್ಣಲ್ಲಿ ನೀರು ತರಿಸಿದ ರವಿಚಂದ್ರನ್]

ಹಂಸಲೇಖರ ಜೊತೆಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರು ಯಾರು ಮತ್ತು ಕಾರ್ಯಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ನಿರೀಕ್ಷಿಸಿ. ಟಿಕೆಟ್ ಮತ್ತು ಇತರ ವಿವರಗಳಿಗೆ ಕನ್ನಡ ಸಂಘ (ಸಿಂಗಪುರ)ದ ಅಂತರ್ಜಾಲ ತಾಣ www.singara.orgಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+