ಆಕ್ಟರ್, ಡೈರೆಕ್ಷರ್ ಉಪ್ಪಿಗಿಂತ ರೈಟರ್ ಉಪ್ಪೀನೇ ಇಷ್ಟ
ವೈಶಾಲಿ : ನೀವು ಹೀಗೆ ತುಂಬಾ ಸಿನಿಮಾಗಳನ್ನು ನಿರ್ದೇಶಿಸಿದ್ದೀರ, ಅಭಿನಯಿಸಿದ್ದೀರ. ನನಗೆ ಪರ್ಸನಲಿ ಚಿತ್ರನಟ ಉಪ್ಪಿಗಿಂತ ನಿರ್ದೇಶಕ ಉಪೇಂದ್ರ ಹೆಚ್ಚು ಇಷ್ಟ. ನಿಮಗೆ ವೈಯಕ್ತಿಕವಾಗಿ ಆಕ್ಟಿಂಗ್ ಇಷ್ಟನೋ, ಡಿರೆಕ್ಟಿಂಗ್ ಇಷ್ಟನೋ?
ಉಪ್ಪಿ : ಆಕ್ಚುವಲೀ, ನಂಗೆ ಇವರಡರಿಗಿಂತ ರೈಟಿಂಗ್ ಇಷ್ಟ. ಬರೆಯೋದಿಷ್ಟ. ಅದು ಮೂಲ. ಬರೆದಾಗ ನಾನು ತುಂಬಾ ಎಂಜಾಯ್ ಮಾಡಿ ಬರೀತೀನಿ. ಅದಾಮೇಲೆ ಉಳಿದೆಲ್ಲ ತಾನಾಗೆ ಆಗುತ್ತೆ.
ವೈಶಾಲಿ : ಒಹ್ ನಿಜಕ್ಕೂ ಖುಷಿ ಆಯ್ತು ನಿಮಗೆ ಮೂಲವಾದ ಬರವಣಿಗೆ ಇಷ್ಟ ಅಂತ ತಿಳಿದು. ಈ ವಿಷಯ ಬಹಳಷ್ಟು ನಮ್ಮಲ್ಲಿ ಜನರಿಗೆ ಗೊತ್ತಿರಲಿಲ್ಲ. ನಿಮ್ಮ ಸಿನಿಮಾಗಳಲ್ಲಿ ನಿಮ್ಮ ಡೈಲಾಗ್ ಹೇಳೋ ಪರಿ ಇದೆಯಲ್ಲ, ರಂಗಭೂಮಿಯ ಹಿನ್ನೆಲೆಯಿಂದ ಬಂದವರು ಕೂಡ ಅಷ್ಟು ನಿರರ್ಗಳವಾಗಿ ಡೈಲಾಗ್ ಹೇಳಲ್ಲ. ಅದು ಪರಿಶುದ್ಧ ಕನ್ನಡ ಆಗಿರಬಹುದು, ಅಥವಾ ಈಗಿನ ಪಡ್ಡೆ ಹುಡುಗರ ಸ್ಟ್ರೀಟ್ ಲಾಂಗ್ವೇಜ್ ಆಗಿರಬಹುದು. ಇಲ್ಲ ಆಧ್ಯಾತ್ಮ ಚಿಂತನೆಯ ಸ್ಟೈಲ್ ಆದ್ರೂ ಆಗಿರಬಹುದು. ಅಷ್ಟು ನಿರರ್ಗಳವಾಗಿ ಡೈಲಾಗ್ ಹೇಳ್ತೀರಲ್ಲ ಹೇಗೆ ಬಂತು ಅದು? ಏನು ಸ್ಪೂರ್ತಿ?

ಉಪ್ಪಿ : ಹಹಹ, ಚಿಕ್ಕಂದಿನಲ್ಲಿ ನಮ್ಮಪ್ಪ ಅಮ್ಮ ತುಂಬಾ ಜಗಳಾಡೋರು. ಅದನ್ನು ನೋಡ್ತಾ ನೋಡ್ತಾ ಬಂತು ಅನ್ಕೋತೀನಿ. ನಮ್ ತಂದೆ ಕನ್ನಿಕಾ ಪರಮೇಶ್ವರಿ ಅಂತ ವಿಶ್ವೇಶ್ವರಮ್ ಅಲ್ಲಿ ಒಂದು ದೇವಸ್ಥಾನ ಇದೆ, ಅಲ್ಲಿ ಅಡಿಗೆ ಕೆಲಸ ಮಾಡೋರು. ಅಲ್ಲಿ ಯಾವಾಗಲೂ ಹರಿಕತೆ ಕೇಳೋರು. ಆಮೇಲೆ ಮನೆಗ್ ಬಂದು ಫುಲ್ ಕತೆ ನಮಗೆ ಹೇಳೋರು. ಈ ಕಲ್ಪನೆ ಅಂತ ನಮಗೆಲ್ಲ ಶುರುವಾಗಿದ್ದೆ ಅಲ್ಲಿಂದ. ಅದೇ ನಂಗೆ ಯಾವಾಗಲೂ ಅನ್ಸುತ್ತೆ ಓದೋ ಅಭ್ಯಾಸ ಮಾಡ್ಕೊಂಡ್ರೆ ಕಲ್ಪನೆ ತುಂಬಾ ಚೆನ್ನಾಗಿ ಬರುತ್ತೆ.
ಈಗೇನಾಗ್ತಿದೆ ಅಂದ್ರೆ, ನಂ ಮಕ್ಳೆ ನೋಡ್ತೀನಿ, 24 ಗಂಟೆ ಟ್ಯಾಬು, ಟೀವಿ, ಫೋನ್ ಹಿಂದ್ಕೊಂಡು ಕೂತಿರ್ತಾರೆ. ಎಲ್ಲವೂ ರೆಡಿಮೇಡ್ ಆಗೋಗ್ಬಿಟ್ಟಿದೆ ಈವಾಗ. ನಮ್ಗೆನಂದ್ರೆ ಆಗ ಚಂದಮಾಮ ಅಂತ ಕತೆ ಪುಸ್ತಕ ಬರ್ತಿತ್ತು. ಚಂದಮಾಮ ಓದ್ತಾ ಇದ್ರೆ ಅಲ್ಲೊಬ್ಬ ರಾಜ ಇದ್ದ, ಒಂದು ಊರಿತ್ತು, ಒಂದು ಕಾಡಿತ್ತು ಅಂತ ನಮಗೊಂದು ಕಲ್ಪನೆ, ಒಹ್ ಕಾಡಂದ್ರೆ ಹೀಗಿರಬಹುದು, ಊರಂದ್ರೆ ಹಿಂಗಿರ್ಬಹುದು ಅಂತ ಕಲ್ಪನೆ. ಈ ಕಲ್ಪನೆ ಅನ್ನೋದು ಬೇಕು ಮನುಷ್ಯನಿಗೆ. ಅದು ಓದೋದರಿಂದ ಮಾತ್ರ ಸಾಧ್ಯ. ನಾನೇನೋ ಹಳೇ ಕಾಲ್ದವ್ನ ತರಹ ಮಾತಾಡ್ತಿದೀನಿ ಅನ್ಕೊಬಹುದು ನೀವು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications