'ದೇವ್ರು ಅನ್ನೋ ಡೈರೆಕ್ಟರ್ ಒಬ್ಬ ಮೇಲಿದ್ದಾನೆ'

ವೈಶಾಲಿ : ತುಂಬಾ ಖುಶಿಯಾಯ್ತು, ನಿಮ್ಮ ಸ್ಫೂರ್ತಿ ಓದು, ಕನ್ನಡದ ಪುಸ್ತಕಗಳು ಅಂತ ಕೇಳಿ. ಹಾಗಿದ್ರೆ ಬಿಡುವಿನ ವೇಳೆಯಲ್ಲಿ ನಿಮ್ಮ ಹವ್ಯಾಸ ಅಂದ್ರೆ ಓದೋದೇನ?

ಉಪ್ಪಿ : ನಿಜ, ಸ್ವಲ್ಪ ಓದ್ತೀನಿ, ಹೆಚ್ಚು ನನ್ನೋಳಗನ್ನೇ ನಾನು ಓದ್ಕೊಲ್ಳೋಕೆ ಪ್ರಯತ್ನ ಮಾಡ್ತೀನಿ.

ವೈಶಾಲಿ : ದಿಸ್ ಬ್ರಿನ್ಗ್ಸ್ ಟು ಎನ್ ಇಂಟರೆಸ್ಟಿಂಗ್ ಕ್ವೆಸ್ಚನ್, ಉಪೇಂದ್ರದಿಂದ ಆರಂಭಿಸಿ, ಬುದ್ಧಿವಂತ, ನಾನು ನಾನೇ ಅಥವಾ ಈಗಿನ ಉಪ್ಪಿ2 ಹೀಗೆ ನಿಮ್ಮ ಬಹುತೇಕ ಸಿನಿಮಾಗಳಲ್ಲಿ ಒಂದು ಆಧ್ಯಾತ್ಮಿಕ ಟಚ್ ಇದೆ. ಶರೀಫರು ಹೇಳೋ ತರಾ "ನಾನೆಂದರೆ ನಾನಲ್ಲ" ಅಂತನೋ, ಅಥವಾ ಕನಕದಾಸರು ಹೇಳೋ ತರಾ "ನಾನು ಹೋದರೆ ಹೋಗಬಹುದು" ಅನ್ನೋವಂತದ್ದನ್ನು ಸರಳವಾಗಿ ಈಗಿನ ಕಾಲದ ಹೈಸ್ಕೂಲ್ ಮಕ್ಳಾದ್ರೂ ಆಗಿರಬಹುದು ಅಥವಾ ತುಂಬಾ ಓದಿಕೊಂಡಿರೋ ವಯಸ್ಕರಾದರೂ ಆಗಿರಬಹುದು, ಎಲ್ಲರಿಗೂ ಏನೋ ಅಪೀಲ್ ಅಗೋ ತರದಲ್ಲಿ ಉಪ್ಪಿ ಸ್ಟೈಲಲ್ಲಿ ಪ್ಯಾಕೇಜ್ ಮಾಡಿಕೊಡುವ ಈ ಚಿಂತನೆ ನಿಮಗೆ ಯಾವಾಗ ಯಾಕೆ ಶುರುವಾಯ್ತು?

An interview with Real Star Upendra in America - part4

ಉಪ್ಪಿ : ಅದೇ ಆಗ್ಲೇ ಹೇಳಿದ್ನಲ್ಲ. ಮಕ್ಕಳ ಕೂಟದಲ್ಲಿ ಅಂದು ವಿಚಾರ ಬಂತು ಅಂದ್ನಲ್ಲ. ನಾವಿರೋ ಮನೆ ಚಿಕ್ಕ ಮನೆ, ಒಂದು ವಟಾರ, ಅದೂ ಚಿಕ್ಕ ವಟಾರ. ಅಲ್ಲಿ ಯಾವಾಗಲೂ ತುಂಬಾ ಗಲಾಟೆ. ಬಡತನ ಇತ್ತು, ಒಂದು ನೋವಿತ್ತು. ನನ್ಗೆನಂದ್ರೆ ಎಲ್ಲ ಸ್ವರ್ಗದ ತರಾ ಇರ್ಬೇಕು. ಎಲ್ರೂ ಸಂತೋಷವಾಗಿರಬೇಕು, ಎಲ್ರೂ ಚೆನ್ನಾಗಿರಬೇಕು. ಯಾರೂ ಅಳಬಾರದು ಅಂತ ಏನೋ ಕಲ್ಪನೆ. ಅದಕ್ಕಾಗೆ ಈ ಎಂಟರ್ಟೇನ್ಮೆಂಟ್ ಇಂಡಸ್ತ್ರಿಯಿಂದ ಶುರು ಮಾಡಿ, ಜನರಿಗೆ ಸಂತೋಷ ಕೊಡ್ಬೇಕು ಅಂತ ಶುರುವಾಗಿದ್ದು. ಈ ಸೂಪರ್ ಸಿನಿಮಾ ನಾ ಮಾಡಿದ್ದು ಅದೇ ಕಲ್ಪನೆಯಿಂದಲೇ. ಏನೋ ಎಲ್ರೂ ಖುಷಿಯಾಗಿರಬೇಕು. ನಮ್ ಇಂಡಿಯಾ ಮುಂದುವರೀಬೇಕು. ಒಂದು ಅಮೆರಿಕಾ ತರಾ ಇಂಡಿಯಾ ಆಗ್ಬಿಡ್ಬೇಕು. ಒಂದೊಳ್ಳೆ ಇಂಡಿಯಾ, 2025 ಇಂಡಿಯಾ ಚೇಂಜ್ ಆಗಿರತ್ತೆ, ಡಾಲರ್ ಬೆಲೆ ಇಳಿದೊಗತ್ತೆ. ಈ ತರಾ. ಆಮೇಲನಿಸ್ತು.

ಇದೆಲ್ಲ ಆಯಿತು ಅಂತಾನೆ ಅಂದ್ಕೊಳ್ಳೋಣ, ಇಂಡಿಯಾ ಅಮೆರಿಕಾ ತರಾ ಅಗ್ಬಿಟ್ಟಿತು ಅಂದ್ರೂ, ಎಲ್ರೂ ಚೆನ್ನಾಗಿರ್ತಾರಾ? ಸಂತೋಷವಾಗಿರ್ತಾರಾ ಮನುಷ್ರು? ಇನ್ನೂ ಏನೋ ಇರತ್ತೆ, ಮನುಷ್ಯ ಮನುಷ್ಯನ ಸಂಬಂಧಗಳಲ್ಲೇ ಏನೋ ನೋವಿರತ್ತೆ. ಏನಿದು? ಅಲ್ಟಿಮೇಟ್ ಏನಂದ್ರೆ, ನನಗೆ ಒಂದೇ ಒಂದು ಆಸೆ ಅಂದ್ರೆ ಒಬ್ಬ ನಿರಂತರವಾಗಿ ಸಂತೋಷವಾಗಿರೋದು ಹ್ಯಾಗೆ ಅಂತ? ಇದಕ್ಕೆ ನನಗಿನ್ನೂ ಅನ್ಸರ್ ಸಿಕ್ಕಿಲ್ಲ. ಅದರ ಹುಡುಕಾಟದ ಪ್ರಯತ್ನಾನೆ ಉಪ್ಪಿ 2. ಯೋಚನೆ ಮಾಡದೆ ಇದ್ರೆ, ಪ್ರೆಸೆಂಟ್ ನಲ್ಲಿದ್ರೆ, ಅದಕ್ಕಿಂತ ಸಂತೋಷ ಬೇರೆ ಇಲ್ಲ.

ದೇವ್ರು ಅನ್ನೋ ಡೈರೆಕ್ಟರ್ ಒಬ್ಬ ಮೇಲಿದ್ದಾನೆ. ಅವ್ನು ನಂಬಿಬಿಟ್ಟ ಅಂದ್ರೆ ಎಲ್ಲವೂ ಚೆನ್ನಾಗಿರತ್ತೆ. ಆದ್ರೆ ಯೋಚನೆ ಮಾಡದೆ ಇರೋದು ಎಷ್ಟು ಕಷ್ಟ ಅಂತಾ ಆ ಪಿಚ್ಚರ್ ನೋಡಿದ್ರೆ ನಿಮಗೆ ಗೊತ್ತಾಗತ್ತೆ. ಎಲ್ಲಾ ಕನ್ಫ್ಯೂಸ್ ಅಗ್ಬಿಡತ್ತೆ. ಪಾಸ್ಟ್ ನಲ್ಲಿ ಆಗಿರೋದೂ ಸತ್ಯ. ಫ್ಯೂಚರ್ ನಲ್ಲಿ ಆಗೋದೂ ಸತ್ಯ. ಆದರೆ ಎಲ್ಲಕ್ಕಿಂತ ಹೆಚ್ಚಿನ ಸತ್ಯ ಅಂದ್ರೆ ಈ ಕ್ಷಣ. ಈ ಕ್ಷಣಲ್ಲಿ ನಾವು ಸಂತೋಷವಾಗಿದ್ರೆ ಮುಂದೆಲ್ಲ ತಾನಾಗೆ ಎಲ್ಲ ಚೆನ್ನಾಗಿರತ್ತೆ. ಆದ್ರೆ ಪ್ರತಿಕ್ಷಣನೂ ಪ್ರೆಸೇಂಟಲ್ಲಿ ಬದುಕೋದಿದೆಯಲ್ಲ ಅದು ಕಷ್ಟ, ಆದ್ರೆ ಅದೇ ನಿಜವಾದ ಹ್ಯಾಪಿನೆಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+