ಕನೆಕ್ಟಿಕಟ್ ಕನ್ನಡಿಗರ ನಗಿಸಲು ಬರುತ್ತಿದ್ದಾನೆ Rambo
ಮನೆ ತನಕ ಬಾರೆ ಮನೆ ತನಕ, ಹೊಡಿತೀನಿ ಡೌವ್ ಕೊನೆತನಕ :)
ಛೇ! ಯಾರಪ್ಪ ಅದು? ಪೋಲಿ ಹಾಡು ಹೇಳ್ತಾ ಬರ್ತಿರೋದು ಅಂತಿರಾ? ಬೇರೆ ಯಾರು ಅಲ್ಲ. ಬರ್ತಾ ಇರೋದು ನಮ್ಮ ಕನ್ನಡ ಹೀರೋ RAMBO, ಅದೂ ಮೊದಲ ಬಾರಿಗೆ ಕನೆಕ್ಟಿಕಟ್ಗೆ!
ನ್ಯೂ ಇಂಗ್ಲೆಂಡ್ ಪ್ರಾಂತ್ಯದಲ್ಲಿರುವ ನಮ್ಮ ಹೊರನಾಡು ಕನ್ನಡಿಗರನ್ನು ನಕ್ಕು ನಲಿಸಲು ಬರುತ್ತಿರುವ ಈ ಸೂಪರ್ ಕಾಮಿಡಿ ಮತ್ತು ಸಸ್ಪೆನ್ಸ್ ಕಥೆಯುಳ್ಳ ಸೂಪರ್ ಹಿಟ್ ಕನ್ನಡ ಚಿತ್ರ RAMBO (ಕಾಮಿಡಿ ಕಿಂಗ್ ಶರಣ್ ಅವರ ನೂರನೇ ಚಿತ್ರ!) ಇದೇ ಮಾರ್ಚ್ 30ರಂದು ಮಧ್ಯಾಹ್ನ 4.15ಕ್ಕೆ ಕನೆಕ್ಟಿಕಟ್ ನಲ್ಲಿ ಪ್ರದರ್ಶನವಾಗುತ್ತಿದೆ.
ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದಂತಹ ಈ ಸೂಪರ್ ಕಾಮಿಡಿ ಸಿನೆಮಾ ನೋಡಲು ಎಲ್ಲರೂ ಬನ್ನಿ. ನೋಡಿ ಮನಸಾರೆ ನಕ್ಕು ನಲಿಯಿರಿ.
ವಿಳಾಸ : Parkade Cinemas, 416 West Middle TPK, Manchester, CT-06042. (Use Google Maps for correct direction)
ಆನ್ ಲೈನ್ ಮುಖಾಂತರ ಟಿಕೆಟ್ ಕೊಳ್ಳಲು ಈ ಕೊಂಡಿ ಕ್ಲಿಕ್ಕಿಸಿ. (ಮೊದಲು ಬಂದವರಿಗೆ ವಿಶೇಷ ಕೊಡುಗೆ)
ತಾರಾಗಣದಲ್ಲಿ : ಶರಣ್, ಮಾಧುರಿ, ತಬಲ ನಾಣಿ, ಶೃತಿ, ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲ, ಕುರಿ ಪ್ರತಾಪ್ ಮುಂತಾದವರು.
ನಿರ್ಮಾಪಕ : ಅಟ್ಲಾಂಟಾ ನಾಗೇಂದ್ರ ಮತ್ತು ಶರಣ್
ನಿರ್ದೇಶನ : ಎಂ.ಎಸ್. ಶ್ರೀನಾಥ್
ಸಂಗೀತ : ಅರ್ಜನ್ ಜನ್ಯ
ಛಾಯಾಗ್ರಹಣ : ಎಸ್ ಕೃಷ್ಣ (ಮುಂಗಾರು ಮಳೆ ಖ್ಯಾತಿ)
ಮೂವಿ ತಂಕ ಬನ್ನಿ ಮೂವಿ ತಂಕ....
ನಗುವಿರಿ ನೀವು ಕೊನೆ ತಂಕ...!
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ













Click it and Unblock the Notifications