• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿತ್ಯಾನಂದನ ಅಮೆರಿಕಾ ಆಶ್ರಮಕ್ಕೆ ಭೇಟಿ

By * ಚಿತ್ರದುರ್ಗ ಸಂಜೀವಮೂರ್ತಿ
|
Paramahamsa Nithyananda
ಕಳೆದ ವಾರ ನಾನು ಅಮೆರಿಕಾಗೆ ಹೋಗಿದ್ದೆ. ಏನೇನೂ ಸಿದ್ಧತೆಗಳಿಲ್ಲದೆ ಏಕಾಏಕಿ ಕೈಗೊಂಡ ಪ್ರವಾಸ ಅದಾಗಿತ್ತು. ನನ್ನ ಮಗಳ ಗ್ರಾಜ್ಯುಯೇಷನ್ ಸಮಾರಂಭ ಟಕೊಮ ವಿಶ್ವವಿದ್ಯಾನಿಲಯದಲ್ಲಿ ಏರ್ಪಾಟಾಗಿತ್ತು. ಮಗಳಿಗೆ ಸರ್ ಪ್ರೈಸ್ ಕೊಡೋಣ ಅಂದುಕೊಂಡು ಅವಳಿಗೆ ಹೇಳದೇ ಕೇಳದೇ ಅಮೆರಿಕಾ ವಿಮಾನ ಹತ್ತಿದ್ದೆ. (ಈ ಸೀಕ್ರೆಟ್ ಅನ್ನು ನನ್ನ ಸನ್ ಇನ್ ಲಾಗೆ ಮಾತ್ರ ಲೀಕ್ ಮಾಡಿದ್ದೆ!)

ಟಕೊಮ ವಿವಿ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಾಟಾಗಿತ್ತು. ಬೆಳಗ್ಗೆ 9 ರಿಂದ 9.30. ಕೇವಲ ಅರ್ಧ ಗಂಟೆ ಕಾರ್ಯಕ್ರಮ. ಅತ್ಯಂತ ಶಿಸ್ತುಬದ್ಧ ಮತ್ತು ಅಚ್ಚುಕಟ್ಟಾದ ಗ್ರಾಜ್ಯುಯೇಷನ್ ಸಮಾರಂಭ ಅದಾಗಿತ್ತು. ಮಗಳು ಗ್ರಾಜ್ಯುಯೇಟ್ ಆದದ್ದಕ್ಕಿಂತ ಪದವಿ ಪ್ರದಾನ ಕಾರ್ಯಕ್ರಮವೇ ನನಗೆ ಹೆಚ್ಚು ಮುದಕೊಟ್ಟಿತು.

ಸಮಾರಂಭ ಮುಗಿದ ನಂತರ ಸಮೀಪದ ರೆಡ್ಮಂಡ್ ನಲ್ಲಿರುವ ಒಂದು ಇಂಡಿಯನ್ ರೆಸ್ಟೋರೆಂಟಿಗೆ ಹೋಗಿ ಭಾರತೀಯ ಶೈಲಿಯ ಸುಗ್ರಾಸ ಭೋಜನ ಸವಿದೆವು. ಊಟ ಮಾಡಿ ಮನೆಗೆ ಬಂದು ಎಂದಿನಂತೆ ಒನ್ಇಂಡಿಯಾ ಕನ್ನಡ ಪುಟ ತೆರೆದು ನೋಡಿದರೆ 'ಮಹಾನುಭಾವ' ನಿತ್ಯಾನಂದನ "ದರ್ಶನ ಭಾಗ್ಯ" ಪ್ರಾಪ್ತಿಯಾಯಿತು. ಅವನ ಎಲ್ಲ ಪ್ರತಾಪಗಳನ್ನು ಹಾಗೂ ಕರ್ನಾಟಕದ ಇತರ ಸುದ್ದಿ ಸ್ವಾರಸ್ಯಗಳನ್ನು ಓದಿಕೊಂಡೆ. ಇನ್ನು ಕಿರುತೆರೆಯಲ್ಲಿ ನಿತ್ಯಾನಂದನ ಸುದ್ದಿಗಳದೇ ಆರ್ಭಟ.

ಅಮೆರಿಕಾದಲ್ಲೂ ನಿತ್ಯಾನಂದ ಪ್ರಸಿದ್ಧಿ ಪಡೆದಿದ್ದಾನಂತೆ ನಿನಗೇನಾರೂ ಗೊತ್ತಾ? ಅಂತ ಮಗಳನ್ನು ಕೇಳಿದೆ. "ಅಯ್ಯೋ ಯಾಕೆ ಕೇಳ್ತೀರ ಅಣ್ಣಾ? ನಮ್ಮನೆ ಇಂದ 4 ಮೈಲ್ ದೂರದಲ್ಲಿ ಅವನೊಂದು ಸಂಸ್ಥೆ ಇದೆ. ಬೇಕಾದರೆ ಬೆಳಿಗ್ಗೆ ಹೋಗೋಣ, ಹೇಗಿದ್ದರೂ ಶನಿವಾರ ನನಗೆ ರಜೆ, ಅಂದಳು." ಸರಿ, 9 ಜೂನ್ ಬೆಳಿಗ್ಗೆ ಅಲ್ಲಿಗೆ ಹೋದ್ವಿ. 2877, 152nd Ave NE, Bldg #13, Redmond, WA 98052, 425-749-7073

'ನಿತ್ಯಾನಂದನ ಆಶ್ರಮ'ದಲ್ಲಿ (Nithyananda Vedic Temple) ಕಾಲಿಡುತ್ತಿದ್ದಂತೆಯೇ ಕಟ್ಟುಮಸ್ತಾದ ಭಾರತೀಯ ಸುಂದರ ನಾರಿಯೋರ್ವಳು ನಮ್ಮನ್ನು ಎದುರುಗೊಂಡಳು. ಕಿವಿಗೆ ಇಂಪಾದ ನಿತ್ಯಾನಂದ ಸ್ತುತಿ ಅಲೆಅಲೆಯಾಗಿ ತೇಲಿಬರುತ್ತಿತ್ತು. ಅಲ್ಲಿದ್ದ ಒಬ್ಬ ಮಧ್ಯವಯಸ್ಸಿನ ಭಾರತೀಯ ತಾಳಕ್ಕೆ ಹೆಜ್ಜೆ ಹಾಕುತ್ತಲೇ ನಮ್ಮತ್ತ ಮುಗುಳ್ನಗೆ ಬೀರಿದ. ಅಲ್ಲೇ ಇದ್ದ ಅಮೆರಿಕನ್ ಅಜ್ಜಿ ಒಬ್ಬಳು ಸ್ವಾಗತಿಸಿ ಒಳಗೆ ಹೋಗಿ ಎಂದಳು.

ಒಳಗೆ 3-4 ನಾರಿಮಣಿಯರಿದ್ದದ್ದು ನಮ್ಮ ಕಣ್ಣಿಗೆ ಬಿತ್ತು. ಗಣೇಶ, ವೆಂಕಟೇಶ, ಈಶ್ವರ ಲಿಂಗ, ನಟರಾಜ ವಿಗ್ರಹಗಳ ಎದುರು ಭಾಗಕ್ಕೆ ಒಂದು ಸಿಂಹಾಸನದ ಮೇಲೆ ನಿತ್ಯಾನಂದನ ಫೋಟೊ ರಾರಾಜಿಸುತ್ತಿತ್ತು. ಆಶ್ಚರ್ಯವೆಂದರೆ ಎಲ್ಲ ವಿಗ್ರಹಗಳಿಗೂ ಇವನಥರವೇ ಪೇಟ ಹಾಕಿದ್ದರು. ಸರಿ ಎಲ್ಲರಿಗೂ ಒಳ್ಳೆಯದಾಗಲೀ ಅಂತ ಗಣೇಶನಿಗೆ ಒಂದು ನಮಸ್ಕಾರ ಮಾಡಿ ಹೊರಟಾಗ, ಆ ಭಾರತದ ನಾರಿ "ಆಗಾಗ್ಗೆ ಬನ್ನಿ, ಸಂಜೆ ತುಂಬಾ ಚೆನ್ನಾಗಿರುತ್ತೆ, ಸ್ವಾಮೀಜಿಯ ಪರ್ಸನಲ್ ದರ್ಶನ ಸಿಗುತ್ತೆ. ದಯವಿಟ್ಟು ಬನ್ನಿ, ರಿಜಿಸ್ಟರ್ ಮಾಡಿ ಅಂತ ಒಂದು ಬ್ರೋಶರ್ ಕೈಗಿಟ್ಟಳು.

ಸ್ವಾಮೀಜಿಯಿಂದ ಜೀವನ್ಮುಕ್ತಿ ಸಿಗುತ್ತೆ ಎಂದು ಆಕೆ ಹೇಳುತ್ತಿದ್ದರೆ, ನಮ್ಮ ಕಾಲುಗಳು ಆಗಲೇ ಹೊರಡು ಹೊರಡು ಎನ್ನುತ್ತಿದ್ದವು. ಅಷ್ಟರಲ್ಲಿ ಮತ್ತೊಬ್ಬ ಮಹಿಳೆ ಬಂದು ಪ್ರಸಾದ ಸ್ವೀಕರಿಸಿ ಅಂತ ಒಳಗೆ ಕರೆದರು. ಪರ್ವಾಗಿಲ್ಲ ಎಂದರೂ ಬಿಡದೆ ಭರ್ತಿ ಬಾದಾಮಿ ಒಗ್ಗರಣೆ ಹಾಕಿದ್ದ ಚಿತ್ರಾನ್ನ ಕೈಗೆ ಇಟ್ಟರು. ಇಷ್ಟವಿಲ್ಲದೆ ಒಂದೇಸಲ ಕೈಗೆ ತೊಗೊಂಡು ಕಾಲಿಗೆ ಬುದ್ಧಿ ಹೇಳಿ, ಕಾರು ಹತ್ತಿ 100 KM ಸ್ಪೀಡಿನಲ್ಲಿ ಮನೆ ಕಡೆ ಓಟ ಕಿತ್ವಿ.

ಇಲ್ಲಿ ಪ್ರಶ್ನೆ ಎಂದರೆ ಪ್ರೈವೇಟ್ ದರ್ಶನ ಎಂದರೇನು? ಜೀವನ್ಮುಕ್ತಿ ಎಂದರೇನು? ನಂತರ ಅವರು ನಮಗೆ ಕೊಟ್ಟ ಆ ಪತ್ರಗಳನ್ನು ನೋಡಿದರೆ, ಅಬ್ಬಾ ನಮ್ಮ ಉಪನಿಷತ್ಕಾರರ ಉದಾತ್ತ ದೃಷ್ಟಿ ಎಲ್ಲಿ? ಇವರ ಭೋಗ ಜೀವನ ದೃಷ್ಟಿ ಎಲ್ಲಿ? ಒಂದಕ್ಕೊಂದು ಸಂಬಂಧವೇ ಇಲ್ಲವಲ್ಲ ಎನಿಸಿತು. ಹಾಗೆಯೇ ಒಳಗೆ ನಾನು ಒಂದಷ್ಟು ಫ಼ೋಟೋಗಳನ್ನು ಕ್ಲಿಕ್ಕಿಸಿಕೊಂಡೆ. (ಫೋಟೋ ತೆಗೆಯಬಾರದು ಅಂತ ಬೋರ್ಡ್ ಹಾಕಿದ್ದರೂ ಸಹ.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸ್ವಾಮಿ ನಿತ್ಯಾನಂದ ಸುದ್ದಿಗಳುView All

English summary
A visiting Father to her daughters US home stumbles on Paramahamsa Nithyananda Vedic Temple in Redmond, Seattle WA. The Indian type ashram in US claims to offer health, wealth, relationships, excellence, enlightenment, yoga and meditation. Flash trip, travelogue to US by C A Sanjeeva Murthy, Kannadiga from Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more