ಡಲ್ಲಾಸ್ ನಲ್ಲಿ ಪ್ರಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ

Sri Lakshmi Ganapathi Temple Plano
ಡಲ್ಲಾಸ್, ಏ.20: ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಬೇಡುತ್ತಾ ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಪ್ಲಾನೋ ನಗರದ ಲಕ್ಷ್ಮಿ ಗಣಪತಿ ದೇಗುಲದಲ್ಲಿ ಪ್ರಪ್ರಥಮ ಬಾರಿಗೆ ಶ್ರೀಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿದೆ ಎಂದು ಟಿಟಿಡಿ ಪ್ರಕಟಿಸಿದೆ.

ಮೇ.12ರಂದು Dr.Pepper Arena, Frisco, TX ನಲ್ಲಿ ಕಲ್ಯಾಣೋತ್ಸವ ನಡೆಯಲಿದೆ. ಪ್ರತಿದಿನ ತಿರುಮಲ ತಿರುಪತಿ ದೇವಸ್ಥಾನಮ್ ಗೆ ಕಲ್ಯಾಣೋತ್ಸವ ಆಯೋಜನೆಗಾಗಿ 100,000 ಅರ್ಜಿಗಳು ಬರುತ್ತದೆ. ತೋಮಾಲಾ ಹಾಗೂ ಅರ್ಚನೆಗಾಗಿ 2000 ಟಿಕೆಟ್, ಸುಪ್ರಭಾತ ಸೇವೆಗೆ 1000 ಅರ್ಜಿ ಬರುತ್ತದೆ.

ಆದರೆ, 600 ಜನರಿಗೆ ಮಾತ್ರ ಕಲ್ಯಾಣೋತ್ಸವ ಹಾಗೂ 50 ಜನರಿಗೆ ತೋಮಾಲಾ/ಅರ್ಚನೆ/ಸುಪ್ರಭಾತ ಸೇವೆಗೆ ಅವಕಾಶ ಇರುತ್ತದೆ. ಹೀಗಾಗಿ ಭಕ್ತಾದಿಗಳಿಗೆ ಶ್ರೀಲಕ್ಷ್ಮಿಗಣಪತಿ ದೇಗುಲ ಉತ್ತಮ ಅವಕಾಶ ನೀಡುತ್ತಿದೆ. ಸುಮಾರು 200ಕ್ಕೂ ಅಧಿಕ ಸ್ವಯಂ ಸೇವಕರು ಈ ಕಲ್ಯಾಣೋತ್ಸವ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಜ್ಜಾಗಿದ್ದಾರೆ.

* ತಿರುಮಲ ದೇಗುಲದ ವಿಕಾಸನ ಆಗಮ ಪದ್ಧತಿಯಂತೆ ಎಲ್ಲಾ ಧಾರ್ಮಿಕ ಕಾರ್ಯಗಳು ಜರುಗಲಿದೆ.
* ಶ್ರೀ ಪ್ರಹ್ಲಾದಾಚಾರ್ಯ/ಶ್ರೀ ಚಂದ್ರಮೌಳಿ ಶರ್ಮ/ಶ್ರೀ ಶರತ್ ಕುಮಾರ್ ಮುಂತಾದ ಋತ್ವಿಜರಿಂದ ವೆಂಕಟೇಶ್ವರ ಸ್ವಾಮಿಯ ಪೂಜಾ ಕೈಂಕರ್ಯಗಳು ನಡೆಯಲಿದೆ.
* ಟಿಟಿಡಿಯ ಪ್ರಮುಖ ಸದಸ್ಯರಾದ ಎಂಎಲ್ ಎ ಮುತ್ಯಂ ರೆಡ್ಡಿ, ವೆಂಕಟರಾಮಿ ರೆಡ್ಡಿ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

* ತಿರುಪತಿ ತಿಮ್ಮಪ್ಪನ ಪ್ರಸಾದ, ಅಮ್ಮನವರ ಶ್ರೀಕುಂಕುಮ, ಲಡ್ಡು ಪ್ರಸಾದಂ ಉಚಿತವಾಗಿ ಹಂಚಲಾಗುತ್ತದೆ.

ಸುಪ್ರಭಾತಂ- 8 ಬೆಳಗ್ಗೆ
ತೋಮಾಲಾ ಸೇವೆ- 8.30
ಅಷ್ಟದಳಪಾದಪದ್ಮಾರಾಧನನ(ಆರ್ಚನೆ)-9 ಗಂಟೆ
ಕಲ್ಯಾಣೋತ್ಸವ-10 ಗಂಟೆ

* ಇಡೀ ಕಾರ್ಯಕ್ರಮ ಎಲ್ಲಾ ವರ್ಗಕ್ಕೂ ಮುಕ್ತವಾಗಿದ್ದು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Vasanth Suri - 408-239-3436; Sarma Gunturi – 972-897-3302; Sri kumar (Temple Priest) – 361-726-3227;

Cheruku Srinivas Reddy – 510-396-2615.

Ravi Akula – 847-372-9599; Vijay Todupunuri – 469-387-1689; Satya Pulipaka – 972-740-5117; Satyam Kalyandurg

- 214-632-7734.


ವೆಬ್ ಸೈಟ್ :www.hindutempleofplano.org

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+