ನಿರಾಣಿ ನೇತೃತ್ವದ ನಿಯೋಗದ ಅಮೆರಿಕ ಪ್ರವಾಸ

ನಿರಾಣಿ ನಿಯೋಗ ಅಮೆರಿಕದಲ್ಲಿರುವ ಅನೇಕ ಉದ್ಯಮಗಳಿಗೆ ಭೇಟಿ ನೀಡಿ ವ್ಯಾಪಾರ ವರ್ಧಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. ಶಿಕಾಗೋ ಅಂತಾರಾಷ್ಟ್ರೀಯ ಉತ್ಪನ್ನ ಮಾರುಕಟ್ಟೆಗೆ ಭೇಡಿ ನೀಡಿ ಹಣ್ಣು ತರಕಾರಿಗಳನ್ನು ಸಂರಕ್ಷಿಸಲು ರೈತರಿಗೆ ನೆರವಾಗುವ ವಿಧಾನಗಳನ್ನು ಅಭ್ಯಸಿಸಿತು.
ಅರ್ಸೆಲರ್ ಮಿಟ್ಟಲ್ ಕಂಪನಿಯ ಜಾಗತಿಕ ಸಂಶೋಧನಾ ಮತ್ತು ಅಭಿವೃದ್ಧಿ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳೊಂದಿಗೆ ನಿರಾಣಿ ಚರ್ಚೆ ನಡೆಸಿದರು. ಜಾಗತಿಕವಾಗಿ 11 ಆರ್ & ಡಿ ಘಟಕಗಳನ್ನು ಕಂಪನಿ ಹೊಂದಿದೆ.
ಕರ್ನಾಟಕದಲ್ಲಿಯೂ ವಿಶ್ವಮಟ್ಟದ ಆರ್ ಅಂಡ್ ಡಿ ಘಟಕವನ್ನು ಸ್ಥಾಪಿಸಬೇಕೆಂದು ನಿರಾಣಿ ಆಹ್ವಾನ ನೀಡಿದರು ಮತ್ತು ಎಲ್ಲ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದರು. ಶಿಕಾಗೋ ಕನ್ನಡ ಕೂಟ ಕರ್ನಾಟಕದ ನಿಯೋಗಕ್ಕೆ ಒತಣಕೂಟ ಏರ್ಪಡಿಸಿತ್ತು.
ಇದೇ ವರ್ಷ ಡಿಸೆಂಬರ್ 1 ಮತ್ತು 2ರಂದು ನಡೆಯಲಿರುವ ಕೃಷಿ-ವ್ಯಾಪಾರ ಸಮಾವೇಶ ಮತ್ತು ಮುಂದಿನ ವರ್ಷ ಜೂನ್ 7 ಮತ್ತು 8ರಂದು ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಅಮೆರಿಕದ ಉದ್ಯಮಿಗಳಿಗೆ ವಿವರಣೆ ನಿಯೋಗ ನೀಡಿತು.












Click it and Unblock the Notifications