ಅಮೆರಿಕಾದಲ್ಲಿ ಅದ್ಧೂರಿ ವಿಶ್ವ ವೀರಶೈವ ಸಮ್ಮೇಳನ

Sri Shivamurthy Shivacharya Swamiji, Janardhana Swamy and Suresh Angadi
ಎಲ್ಲೆಡೆ ಶಿವಶರಣರ ಭಾವಚಿತ್ರಗಳು, ಭವ್ಯವಾದ ಅನುಭವ ಮಂಟಪದಲ್ಲಿ ಕುಳಿತು ಶರಣರು ಮಾಡುತ್ತಿದ್ದ ಇಷ್ಟಲಿಂಗ ಪೂಜೆ, ವೇದಿಕೆ ಮೇಲೆ ವಿಶ್ವಗುರು ಬಸವಣ್ಣ, ಅಲ್ಲಮ ಪ್ರಭು, ಶರಣೆ ಅಕ್ಕ ಮಹಾದೇವಿ, ಶರಣ ಮಾದಾರ ಚೆನ್ನಯ್ಯ, ಮಡಿವಾಳ ಮಾಚಿದೇವರು, ಲಿಂಗಾಂಗ ಯೋಗಿ ಸಿದ್ಧರಾಮೇಶ್ವರ ಎಲ್ಲ ಕಾಣಿಸಿಕೊಂಡರೆ ಹೇಗಾಗಿರಬಹುದು? ಇದೆಲ್ಲ ಕೇಳಿದೊಡೆ ಎಲ್ಲರ ಚಿತ್ತದಲ್ಲಿ ಒಮ್ಮೆಲೇ.. ವೀರಶೈವ ಧರ್ಮ ಸಂಸ್ಥಾಪಕರಲ್ಲಿ ಮುಖ್ಯರಾದ ವಿಶ್ವಗುರು ಬಸವಣ್ಣನವರ ಬಸವನ ಬಾಗೇವಾಡಿ - ಕೂಡಲ ಸಂಗಮದ ನೆನಪಾದರೆ ಅಚ್ಚರಿ ಏನಿಲ್ಲ..

ಆದರೆ ಈ ದೃಶ್ಯ ಕಂಡು ಬಂದಿದ್ದು "ಅಂದು 12ನೇ ಶತಮಾನದಲ್ಲಿ ನುಡಿದಂತೆ ನಡೆದು ವೀರಶೈವ ಧರ್ಮ ಪ್ರಾರಂಭಿಸಿದ ವಿಶ್ವಗುರು ಬಸವಣ್ಣ ಹಾಗು ಎಲ್ಲ ಶಿವ ಶರಣರ ವಚನಗಳನ್ನು, ಜಗದೆಲ್ಲೆಡೆ ಸಾರುವ ಉದ್ದೇಶದಿಂದ" ಉತ್ತರ ಅಮೆರಿಕಾದಲ್ಲಿರುವ ವೀರಶೈವ ಸಮಾಜ ನ್ಯೂಇಂಗ್ಲಂಡ್ ಚಾಪ್ಟರ್(ಶಾಖೆ) ಜುಲೈ 2 ಮತ್ತು 3ರಂದು ನಡೆದ 34ನೇ ವಿಶ್ವ ವೀರಶೈವ ಸಮ್ಮೇಳನ ಮತ್ತು ವಿಶ್ವ ಬಸವ ಚರ್ಚಾ ಗೋಷ್ಠಿಯಲ್ಲಿ. ಬೋಸ್ಟನ್ ನಗರಕ್ಕೆ ಹೊಂದಿಕೊಂಡಿರುವ Newton, MA - ಚಾರ್ಲ್ಸ್ ನದಿ ತೀರದಲ್ಲಿರುವ Marriott ಹೋಟೆಲ್ನ ವಿಶಾಲವಾದ ಸಭಾಂಗಣದಲ್ಲಿ ನಡೆಯಿತು.

ಪ್ರತಿ ವರ್ಷ ನಡೆಯುವ ಉತ್ತರ ಅಮೆರಿಕಾ ವಿಶ್ವ ವೀರಶೈವ ಸಮ್ಮೇಳನ ಈ ಬಾರಿ ಬೋಸ್ಟನ್ ನಗರದಲ್ಲಿ ಪ್ರಥಮ ಬಾರಿಗೆ ಅತ್ಯಂತ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು. ಸಮಾವೇಶವನ್ನು ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಡಾ : ಶಿವಕುಮಾರ ಸ್ವಾಮೀಜಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸ್ವಾಗತ ಗೀತೆಯ ನಂತರ ತರಳುಬಾಳು ಜಗದ್ಗುರುಗಳಾದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ದೀಪ ಹಚ್ಚುವುದರೊಂದಿಗೆ ಈ ಎರಡು ದಿನದ ಕಾರ್ಯಕ್ರಮ ಆರಂಭವಾಯಿತು.

ನಂತರ ಇದೇ ಮೊದಲಬಾರಿಗೆ ನಡೆದ ವಿಶ್ವ ಬಸವ ಚರ್ಚಾ ಗೋಷ್ಠಿಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅರವಿಂದ್ ಜತ್ತಿ - ಬಸವ ಸಮಿತಿ ಅಧ್ಯಕ್ಷರು, ಗೊರೂರು ಚನ್ನಬಸಪ್ಪ - ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು, ಡಾ| ಸಿ. ಸೋಮಶೇಖರ - ಐಎಎಸ್ , ಜಿಲ್ಲಾಧಿಕಾರಿಗಳು, ತುಮಕೂರು, ಎಚ್.ವಿ. ನಾಗೇಂದ್ರಪ್ಪ - ಅಖಿಲ ಭಾರತ ವೀರಶೈವ ಮಹಾಸಭಾ, ಉಪಾಧ್ಯಕ್ಷರು, ಜರಗನಹಳ್ಳಿ ಶಿವಶಂಕರ್ - ಬರಹಗಾರರು, ಸುರೇಶ ಅಂಗಡಿ, ಲೋಕಸಭಾ ಸದಸ್ಯರು, ಪ್ರಖ್ಯಾತ ಉದ್ಯಮಿ ಡಾ| ಗುರುರಾಜ್ ದೇಶಪಾಂಡೆ, ಜನಾರ್ಧನ ಸ್ವಾಮಿ, ಲೋಕಸಭಾ ಸದಸ್ಯರು, ಡಾ| ಸೋಮಶೇಖರ್ ಪಳ್ಯೇಗಾರ್ - VSNA ಪ್ರೆಸಿಡೆಂಟ್ ಇವರೆಲ್ಲ - ಬಸವ ತತ್ವ, ವೀರಶೈವ ಸಂಸ್ಕೃತಿ, ಶರಣರ ವಚನಗಳ ಬಗ್ಗೆ ಮಾತನಾಡಿದರು.

ಅಮೆರಿಕ, ಕೆನಡಾ, ಮೆಕ್ಸಿಕೋ, ಯುರೋಪ್, ಇಂಡಿಯಾ ಹೀಗೆ ಎಲ್ಲೆಡೆಯಿಂದ ನೂರಾರು ಶಿವ ಶರಣ-ಶರಣೆಯರು ಎರಡು ದಿನದ ಈ ಸಮ್ಮೇಳನಕ್ಕೆ ಆಗಮಿಸಿ ಎಲ್ಲ ಕಾರ್ಯಕ್ರಮಗಳಲ್ಲಿ ಆಸಕ್ತಿಯಿಂದ ಭಾಗವಹಿಸಿ, ರುಚಿ ರುಚಿಯಾದ ಕರ್ನಾಟಕದ ಪ್ರಸಿದ್ದ ಇಡ್ಲಿ- ವಡಾ, ಉಪ್ಪಿಟ್ಟು, ಕೇಸರಿಬಾತ್, ಹೋಳಿಗೆ, ರೊಟ್ಟಿ ಊಟ ಮಾಡಿ ಆನಂದಿಸಿದರು.

ಕೊನೆಯದಿನ ಸಂಜೆ ನಡೆದ ಮಲ್ಲಿ ಸಣ್ಣಪ್ಪನವರ ವಿರಚಿತ ಸಾಮಾಜಿಕ ನೀತಿಕತೆ ಸಾರುವ "ಅಮೇರಿಕಾದಲ್ಲಿ ಬಸವಣ್ಣ" ಎಂಬ ಹಾಸ್ಯಭರಿತ ನಾಟಕ ಎಲ್ಲರ ಮನಸೆಳೆದು ಭರ್ಜರಿ ಕರತಾಡನ ಗಿಟ್ಟಿಸಿದ್ದಲ್ಲದೆ ಬಸವಣ್ಣನವರ ಕಾಯಕವೇ ಕೈಲಾಸದ ಸಂದೇಶವನ್ನು ಎಲ್ಲರಲ್ಲಿ ಅರಿವು ಮಾಡಿಸಿತು. [34ನೇ ವಿಶ್ವ ವೀರಶೈವ ಸಮ್ಮೇಳನ ಚಿತ್ರಪಟ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+