ಕನೆಕ್ಟಿಕಟ್ ನಲ್ಲಿ ಕನ್ನಡ ಶಾಲೆ ಬಾರಿಸಿದ ಡಿಂಡಿಮ

Children of Kannada school in Connecticut
ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಅಪರೂಪವಾಗಿ, ದುರ್ಬೀನ್ ಇಡ್ಕೊಂಡು ಹುಡುಕಾಡೋ ಈ ಕಾಲದಲ್ಲಿ, ಇದ್ದರೂ ಮಕ್ಕಳೇ ಕನ್ನಡ ಶಾಲೆಗೆ ಬಾರದಂತಹ ಈ ಕಾಲದಲ್ಲಿ.. ದೂರದ ಅಮೇರಿಕಾದ ಕನೆಕ್ಟಿಕಟ್ನಲ್ಲಿ ಇರುವ ಅಮೆರಿಕನ್ನಡ ಶಾಲೆ ಯಶಸ್ವಿಯಾಗಿ ತನ್ನ ಎರಡನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು ಜೂನ್ 18ರಂದು ಸೌತ್ ವಿಂಡ್ಸರ್ ನಲ್ಲಿ ಏರ್ಪಡಿಸಿತ್ತು!

ಎಲ್ಲ ಮಕ್ಕಳು ತಮ್ಮ ಪೋಷಕರೊಂದಿಗೆ ಈ ಸಂಭ್ರಮದಲ್ಲಿ ಪಾಲ್ಗೊಂಡರು. ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದ ಈ 2011ರ ವಾರ್ಷಿಕ ಘಟಿಕೋತ್ಸವ ಕು| ಮೇಘಳ ಪ್ರಾರ್ಥನೆಯೊಂದಿಗೆ ಶುರುವಾಯಿತು. ಅನಿತಾ ಜೋಯಿಸ್ ರವರಿಂದ ಸ್ವಾಗತ ಕೋರಲಾಯಿತು.

ರಘು ಸೋಸಲೆಯವರು ಕನ್ನಡ ಶಾಲೆಯ ವಿದ್ಯಾರ್ಥಿಗಳ ಮೇಲೆ ಹಾಡಿದ ಒಂದು ಸುಂದರ ಹಾಡು ಎಲ್ಲರ ಮನ ಸೆಳೆಯಿತು. ನಂತರ ಕನೆಕ್ಟಿಕಟ್ನ ಕನ್ನಡ ಕೂಟ ಅದ್ಯಕ್ಷರಿಂದ ಒಂದು ಪುಟ್ಟ ಭಾಷಣ. ಪೋಷಕರು ತಮ್ಮ ಅಭಿಪ್ರಾಯಗಳನ್ನು ಎಲ್ಲರೊಂದಿಗೆ ಹಂಚಿಕೊಂಡ ಮೇಲೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಿಗೂ ಸರ್ಟಿಫಿಕೇಟ್ ನೊಂದಿಗೆ ಕನ್ನಡ ಪುಸ್ತಕವನ್ನು ನೀಡಲಾಯಿತು.

ವಂದನಾರ್ಪಣೆಯಾದ ಮೇಲೆ ಲಘು ಉಪಹಾರದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಚಿಕ್ಕ ಹಾಗು ಚೊಕ್ಕ ಕನ್ನಡ ಕಾರ್ಯಕ್ರಮಕ್ಕೆ ಪೋಷಕರೊಂದಿಗೆ ಇಂಡಿಯಾದಿಂದ ಆಗಮಿಸಿದ್ದ ಅಜ್ಜ-ಅಜ್ಜಿಯರು ಮಕ್ಕಳ-ಮೊಮ್ಮಕ್ಕಳ ಕನ್ನಡದ ಕಲಿಕೆ, ಅಭಿಮಾನ ನೋಡಿ ಸಂತೋಷಪಟ್ಟರು. ಅಕ್ಷರ ಕಲಿಸಿದ ಅನಿತಾ ಜೋಯಿಸ್ ಹಾಗು ತಂಡದವರಿಗೆ ಏನೋ ಒಂದು ರೀತಿಯ ಸಂತೃಪ್ತಿ, ಸಮಾಧಾನ.

ಹೀಗೆಯೇ ಈ ಕನ್ನಡ ಶಾಲೆ ಮುಂದೆಯೂ ಯಶಸ್ವಿಯಾಗಿ ನಡೆಯಲಿ ... ಕನ್ನಡದ ಕಂಪನ್ನು ಎಲ್ಲೆಡೆ ಹರಡಲಿ ಎಂದು ಆಶಿಸುವ... ಕನ್ನಡಿಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+