ಅಡಿಲೇಡ್ ಕನ್ನಡ ಸಂಘದ ರಾಜ್ಯೋತ್ಸವ

Adelaid Kannada Sangha
ಸುಮಾರು ಹದಿನೇಳು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಕನ್ನಡ ಭಾಷೆಯ ಸೊಗಡನ್ನು ಪಸರಿಸಿರುವ ಅಡಿಲೇಡ್ ಕನ್ನಡ ಸಂಘ ನವೆಂಬರ್ 13, ಶನಿವಾರದಂದು ಅಡಿಲೇಡ್ ನಲ್ಲಿ 2010ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದೆ.

ಸ್ಲೊವೇನಿಯನ್ ಕ್ಲಬ್ ನಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮದ ಭಾಗವಾಗಿ ರಸ ಸಂಜೆಯನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮವನ್ನು ಎಎನ್ಝಡ್ ಪ್ರಾಯೋಜಿಸುತ್ತಿದೆ. ರಂಜನೆಗಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷ ಮೇಜರ್ (ನಿ) ವಿಕ್ರಂ ಮದನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅಡಿಲೇಡ್ ನಲ್ಲಿರುವ 300 ಸದಸ್ಯರು ರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಚಿಕ್ಕಮಕ್ಕಳಿಂದ ದೊಡ್ಡವರೆಲ್ಲರೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಂಘದ ಸದಸ್ಯರಿಗೆ ಉಚಿತ ಪ್ರವೇಶವಿದೆ. ಸದಸ್ಯತ್ವ ಇಲ್ಲದವರು ಸದಸ್ಯರಾಗಬೇಕಾಗಿ ಆಯೋಜಕರು ವಿನಂತಿಸಿಕೊಂಡಿದ್ದಾರೆ. ವಾರ್ಷಿಕ ಶುಲ್ಕ ಈ ರೀತಿಯಿದೆ : ವಿದ್ಯಾರ್ಥಿಗೆ 10 ಡಾಲರ್, ಇತರರಿಗೆ 15 ಡಾಲರ್ ಮತ್ತು ಕುಟುಂಬಕ್ಕೆ 20 ಡಾಲರ್.

ಸ್ಥಳದ ವಿವರ : ಸ್ಲೊವೇನಿಯನ್ ಕ್ಲಬ್, ನಂ. 11, ಲಾಸೆಲ್ ಸ್ಟ್ರೀಟ್, ಡಡ್ಲೆ ಪಾರ್ಕ್, ಅಡಿಲೇಡ್, ಎಸ್ಎ 5008. ಭಾಗವಹಿಸಲು ಇಚ್ಛಿಸುವವರು [email protected] ವಿಳಾಸಕ್ಕೆ ಈಮೇಲ್ ಕಳಿಸಬೇಕಾಗಿ ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ವೀಕ್ಷಿಸಿ : www.kannada.com.au

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಉಮೇಶ್ ನಾಗಸಂದ್ರ (ಅಡಿಲೇಡ್ ಕನ್ನಡ ಕೂಟದ ಉಪಾಧ್ಯಕ್ಷ)
0401 034 456

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+