ರಾಯರ ಅನುಗ್ರಹ ಯಾಚಿಸಿದ ಅಮೆರಿಕನ್ನಡಿಗರು

ಶ್ರೀಹರಿವಾಯುಗುರುಗಳ ಪಾದಪೂಜೆಯ ಜತೆಗೆ ಇತರ ಸಾಂಪ್ರದಾಯಿಕ ಪೂಜಾದಿಗಳನ್ನು ಪೇಜಾವರ ಶ್ರೀಗಳ ಶಿಷ್ಯೋತ್ತಮರಲ್ಲೊಬ್ಬರಾದ ಹರೀಶ್ ಬೈಪಡ್ಡಿತ್ತಾಯ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದವರು. ಹರೀಶ್ ಮತ್ತು ಗೋಪಿನಾಥ ಗಲಗಲಿ ಅವರಿಂದ ಈ ಸಂದರ್ಭದಲ್ಲಿ ಪ್ರವಚನ ಏರ್ಪಡಿಸಲಾಗಿತ್ತು. ನಿಷ್ಕಲ್ಮಷ ಮನಸ್ಸಿನಿಂದ ರಾಯರ ಸ್ಮರಣೆ ಮಾಡುವ ಭಕ್ತರಿಗೆ ಐಹಿಕ ಮತ್ತು ಪಾರಮಾರ್ಥಿಕ ಫಲಗಳು ಪ್ರಾಪ್ತವಾಗುವುವು ಎಂದು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತ ವಿದ್ವಾನ್ ಗೋಪೀನಾಥ ಗಲಗಲಿ ಅವರು ನುಡಿದರು.
ಪ್ರವಚನಗಳ ನಂತರ ರಾಯಚೂರು ಶೇಷಗಿರಿ ದಾಸ್ ಅವರಿಂದ ಹರಿದಾಸ ಕೀರ್ತನೆಗಳನ್ನು ಆಧರಿಸಿದ ಭಕ್ತಿನಾಮ ಸಂಕೀರ್ತನ ನಡೆಯಿತು. ಪಕ್ಕವಾದ್ಯದಲ್ಲಿ ಸ್ಥಳೀಯರೇ ಆದ ರಾಮನ್ (ವೇಣುವಾದನ) ಮತ್ತು ಸಾಮ್ರಾಟ್ (ತಬಲ) ಭಕ್ತಿ ಸಂಗೀತಕ್ಕೆ ಮಾಧುರ್ಯ ತುಂಬಿದರು. ಮಧ್ವರ ತತ್ವ ಮೀಮಾಂಸೆಗಳನ್ನು ಅಮೆರಿಕಾದಲ್ಲಿ ಪಸರಿಸಲು ಸದಾ ಉತ್ಸುಕರಾಗಿರುವ ಪೂರ್ವ ಕರಾವಳಿಯ ಜಯಕೃಷ್ಣ ನೆಲಮಂಗಲ, ನರಹರಿ ಮತ್ತು ವಾಸು ಮೂರ್ತಿ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಪೂಜೆಯ ನಂತರ ಗಲಗಲಿ ಅವರು ಭಕ್ತಗಣಕ್ಕೆ ಫಲ ಮಂತ್ರಾಕ್ಷತೆ ವಿತರಿಸಿದರು.
ಬಹುತೇಕ ಕಾವೇರಿ ಕನ್ನಡ ಸಂಘದ ಸದಸ್ಯ ಕುಟುಂಬಗಳೇ ಪಾಲ್ಗೊಂಡಿದ್ದ ಸಮುದಾಯ ಕಾರ್ಯಕ್ರಮದಲ್ಲಿ ಕಾವೇರಿಯ ಅಧ್ಯಕ್ಷ ಗುರು ನಾಗರಾಜ್, ಸದಸ್ಯರಾದ ವಿಜಯೇಂದ್ರ, ಫಲ್ಗುಣ, ಅನಿಲ್ ಕುಮಾರ್, ರಾಮಮೂರ್ತಿ, ರಾಘವೇಂದ್ರ, ಅಕ್ಕದ ಸದಸ್ಯ ಸಂಜಯ್ ರಾವ್ ಮತ್ತು ಕಾವೇರಿಯ ಮಾಜಿ ಅಧ್ಯಕ್ಷೆ ಮೀನಾ ರಾವ್, ಶ್ರೀವತ್ಸ ಜೋಶಿ, ಸಹನಾ ಜೋಶಿ, ಕೃಷ್ಣಮೂರ್ತಿ ಜೋಯಿಸ್ ಮುಂತಾದವರು ಪಾಲ್ಗೊಂಡಿದ್ದರು. ದೇವಸ್ಥಾನಕ್ಕೆ ದಾರಿ.
ಇದೇ ವೇದಿಕೆಯಿಂದ ಮಾತನಾಡಿದ ಕಾವೇರಿಯ ಸಕ್ರಿಯ ಸದಸ್ಯೆ ಶರ್ಮಿಳಾ ಮೂರ್ತಿ ಬರಲಿರುವ ಕಾವೇರಿ ಕಾರ್ಯಕ್ರಮಗಳನ್ನು ಪ್ರಕಟಿಸಿದರು. ಸೆ. 18ರಂದು ಕಾವೇರಿ ಆಶ್ರಯದಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಮೆಕ್ ಲೀನ್ ನಲ್ಲಿರುವ ಲ್ಯಾಂಗ್ಲೀ ಪ್ರೌಢಶಾಲೆಯಲ್ಲಿ ಅಂದು ಸಂಜೆ 4ರಿಂದ 8ರವರೆಗೆ ಏರ್ಪಡಿಸಲಾಗಿರುವ ಸಿದ್ಧಿ ವಿನಾಯಕ ಉತ್ಸವದಲ್ಲಿ ಹಿರಿಯರಿಗೆ ಮತ್ತು ಕಿರಿಯರಿಗೆ ಒಪ್ಪುವ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಕನ್ನಡ ಕಲಿಯೋಣ ಮಕ್ಕಳ ಪ್ರಾರ್ಥನೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಭಾತ್ ಕಲಾವಿದರಿಂದ ಕಿಂದರ ಜೋಗಿ ಮತ್ತು ಮಹಿಷಾಸುರ ಮರ್ದಿನಿ ನೃತ್ಯರೂಪಕಗಳ ಪ್ರದರ್ಶನ ಇರುತ್ತದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷ ಗುರು ನಾಗರಾಜ್ ಅವರನ್ನು [email protected] ವಿಳಾಸದ ಮುಖಾಂತರ ಸಂಪರ್ಕಿಸಬಹದು ಎಂದು ಶರ್ಮಿಳಾ ಹೇಳಿದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications