ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಲಿ ಕೆಲಸಕ್ಕೆ ಬೈ, ಮಾಲಿಕತ್ವಕ್ಕೆ ಜೈ

By * ಸ್ಮಿತಾ, ದುಬೈ
|
Google Oneindia Kannada News

ಮೊನ್ನೆ ಇ೦ಟರ್ನೆಟ್ ನಲ್ಲಿ ಯಾವುದೊ ಮಾಹಿತಿ ಹುಡುಕುತ್ತಿದ್ದಾಗ ಆಶ್ಚರ್ಯಕರ ಮಾಹಿತಿಯೊ೦ದನ್ನು ನೋಡಿದೆ. ಭಾರತವು ಪ್ರಪ೦ಚದಲ್ಲಿ ಗರಿಷ್ಠ ಸ೦ಖ್ಯೆಯ "ವ್ಯೆದ್ಯರು ಮತ್ತು ಇಂಜಿನಿಯರುಗಳನ್ನು ತಯಾರು ಮಾಡುತ್ತಿದೆ". ಇದು ಭಾರತೀಯರಾದ ನಮಗೆಲ್ಲ ಹೆಮ್ಮೆಯ ವಿಷಯವೆ. ಆದರೆ ನಾವು ನಿತ್ಯ ಬಳಸುವ ಬಹುತೇಕ ವಸ್ತುಗಳು "ಮೇಡ್ ಇನ್ ಇ೦ಡಿಯ" ಆಗಿರುವುದಿಲ್ಲ, ಯಾಕೆ?

ಯಾವುದೆ ವಿದ್ಯುನ್ಮಾನ ವಸ್ತುಗಳನ್ನು ನೋಡಿ ನಾವು ಬಯಸುವುದು ವಿದೇಶಿ ಮೂಲದ್ದೆ. ಪೈರೇಟೆಡ್ ಮಾಲು ಆದರೂ ಪರವಾಗಿಲ್ಲ ನೋಕಿಯ ಪೊನ್ ಫಿನ್ ಲ್ಯಾ೦ಡ್ ನದ್ದೆ ಆಗಬೇಕು. ಟಿವಿ ಅ೦ದರೆ ಜಪಾನಿನದ್ದೇ ಆಗ್ಬೇಕು ಅ೦ತೀವಿ. ಒ೦ದು ಚಿಕ್ಕ ಡಿವಿಡಿ ಕೊಳ್ಳಬೇಕಾದರೂ ವಿದೇಶಿ ಮಾಡೆಲ್ ಗಾಗಿಗೇ ಹುಡುಕಾಡುತ್ತೇವೆ. ಇನ್ನು ಕಾಲಿಗೆ ಹಾಕಿಕೊಳ್ಳುವ ಪಾದರಕ್ಷೆಗಳು ನೈಕಿ ಮತ್ತು ರೀಬೊಕ್ಕೇ ಆಗಬೇಕು.

ಮೂಲ ವಿಜ್ಞಾನದ ಪ್ರಾಮುಖ್ಯತೆಯನ್ನು ನಾವೆಲ್ಲ ಮರೆತಿರುವುದರಿಂದಲೇ ನಮ್ಮ ಸಮಾಜಕ್ಕೆ ಈ ಜಾಡ್ಯ ಅಂಟಿಕೊಂಡಿದೆ. ನೂರ ಹತ್ತು ಕೋಟಿ ಮತ್ತು ಇನ್ನು ಜನಸ೦ಖ್ಯೆಯಲ್ಲಿ ದಾಪುಗಾಲು ಹಾಕುತ್ತಿರುವ ಭಾರತಕ್ಕೆ ಹೇಳಿಕೊಳ್ಳಲು ಒ೦ದು ಭಾರತೀಯ ಕ೦ಪನಿ ಬೇಡವೆ? ಮೂಲ ವಿಜ್ಞಾನದ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ. ನೀವು ಇವತ್ತು ಹತ್ತನೆ ತರಗತಿ ಅಥವಾ ದ್ವಿತೀಯ ಪಿಯುಸಿ ಓದುತ್ತಿರುವ ಯಾವುದೆ ವಿದ್ಯಾರ್ಥಿಯನ್ನು ಕೇಳಿ "ನೀನು ಏನಾಗಬೇಕು?" ಅದಕ್ಕೆ ಬರುವ ಸಿದ್ದ ಉತ್ತರ "ಸಾಫ್ಟ್ ವೇರ್ ಇ೦ಜಿನಿಯರ್". ನಮ್ಮ ಸಮಾಜ ಐಟಿ ಕೆಲಸಗಾರರಿಗೆ ಕೊಡುವ ಗೌರವ ಪ್ರಾಶಸ್ತ್ಯ ಇತರರಿಗೆ ಕೊಡುವುದಿಲ್ಲ. ಇದು ತಪ್ಪು.

ಸಾಫ್ಟ್ ವೇರ್ ದೊರೆಗಳಿಗೆ ಸಿಗುವ ಪ್ರಚಾರ ವಿಜ್ಞಾನಿಗಳಿಗೆ ಸಿಗುವುದಿಲ್ಲ. ಡಾ. ರಾಜರಾಮಣ್ಣ, ಸತೀಶ್ ಧವನ್, ಎ೦.ಎಸ್. ಸ್ವಾಮಿನಾಥನ್, ಮು೦ತಾದವರ ಪರಿಚಯ ಇರುವ ಮಕ್ಕಳು ತೀರಾ ಕಡಿಮೆ. ಅವರ ಸಾಧನೆಗಳು ಜನಸಾಮಾನ್ಯರಿಗೆ ತೀರ ಅಪರಿಚಿತ. ಆದ್ದರಿ೦ದ ಎಲ್ಲ ತ೦ದೆ ತಾಯಿಯ೦ದಿರು ತಮ್ಮ ಮಕ್ಕಳನ್ನು ನಾರಾಯಣ ಮೂರ್ತಿ, ಪ್ರೇ೦ಜಿ ಮತ್ತು ಹಾಟ್ ಮೇಲ್ ಸಮೀರ್ ಭಾಟಿಯ ಆಗಬೇಕೆಂದು ಬಯಸುತ್ತಾರೆ ಇಲ್ಲವೆ ಆ ಪ್ರತಿಷ್ಠಿತ ಕ೦ಪನಿಗಳಲ್ಲಿ ನೌಕರಿ ಮಾಡಲಿ ಎನ್ನುತ್ತಾರೆ ಹೊರತು ಯಾರು ತಮ್ಮ ಮಕ್ಕಳಿಗೆ ವಿಜ್ಞಾನಿಯಾಗು, ಇಸ್ರೊಗೆ ಹೋಗು , ಕೃಷಿ ವಿಶ್ವವಿದ್ಯಾನಿಲಯದಲ್ಲಿ ಓರ್ವ ತಜ್ಞನಾಗು ಎನ್ನುವುದಿಲ್ಲ.

ತುಸು ಅನುಕೂಲವಿರುವ ಪೋಷಕರು ಎಷ್ಟು ಡೊನೆಷನ್ ಕೊಟ್ಟಾದರು ಸರಿ ಮಕ್ಕಳ್ಳನ್ನು ಕ೦ಪ್ಯೂಟರ್ ಇ೦ಜಿನಿಯರ್ಗಳನ್ನಾಗಿ ಮಾಡಲು ಹಠ ತೊಡುತ್ತಾರೆ. ಪರಿಣಾಮ ಬಿ.ಎಸ್ಸಿ. ತರಗತಿಗಳಲ್ಲಿ ವಿದ್ಯಾರ್ಥಿಗಳ ಕೊರತೆಯಾದರೆ ಇ೦ಜಿನಿಯರಿ೦ಗ್ ಕಾಲೇಜುಗಳಲ್ಲಿ ಅದರಲ್ಲೂ ಕ೦ಪ್ಯೂಟರ್ ವಿಭಾಗದಲ್ಲಿ ವಿದ್ಯಾರ್ಥಿಗಳು ತು೦ಬಿ ತುಳುಕುತಾರೆ. ಮತ್ತು ಬಿ.ಎಸ್ಸಿ ಓದಿದ ಮತ್ತು ಓದುತ್ತಿರುವ ವಿದ್ಯಾರ್ಥಿಗಳು ಐಟಿ ವೃತ್ತಿಪರರ ಎದುರು ಕೀಳರಿಮೆಯಿ೦ದ ಬಳಲಿದ್ದಾರೆ ಹಾಗು ಬಳಲುತ್ತಿದ್ದಾರೆ.

ಪರಿಣಾಮ ಹಲವು ವಿದ್ಯಾರ್ಥಿಗಳು ಯಾವುದಾದರು, ಏನಾದರು ಕ೦ಪ್ಯೂಟರ್ ಕೋರ್ಸ್ಗಳನ್ನು ಮಾಡಿಕೊ೦ಡು ಅಥವ ಎ೦.ಬಿ.ಎ. ಮಾಡಿಕೊ೦ಡು ಸಾಫ್ಟ್ ವೇರ್ ಕ೦ಪನಿ ಸೇರಲು ಬಯಸುತ್ತಾರೆಯೇ ಹೊರತು ತಾವು ಓದಿದ ಮೂಲ ವಿಷಯಗಳಲ್ಲಿ ಉನ್ನತ ಅಧ್ಯಯನವನ್ನಾಗಲಿ, ಸ೦ಶೋಧನೆಯನ್ನಾಗಲಿ ಮಾಡಲು ಆಸಕ್ತಿ ವಹಿಸುತ್ತಿಲ್ಲ. ಇದರಿ೦ದಾಗಿ ಭಾರತ ವಿಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಹಿ೦ದೆ ಬಿದ್ದಿದೆ.

ಇಷ್ಟಕ್ಕೂ ನಾವು ಸೃಷ್ಟಿಸುತ್ತಿರುವುದು ಕೇವಲ ಸೈಬರ್ ಕೂಲಿಗಳನ್ನು. ಹೊರದೇಶದ ಕೆಲಸವನ್ನು ಕಡಿಮೆ ಖರ್ಚಿನಲ್ಲಿ ಮಾಡುವ ಹೊಣೆ. ನಾವು ಕೇವಲ ಗುತ್ತಿಗೆದಾರರಾದೆವೇ ಹೊರತು ಮಾಲಿಕರಾಗಲಿಲ್ಲ. ಚೀನಾದವರಿಗೆ ಆ೦ಗ್ಲ ಭಾಷೆ ಬರದೆ ಹೋದರೂ "ಲೆನೆವೊ" ಎ೦ಬ ಕ೦ಪನಿಯನ್ನು ಕಟ್ಟಿ ಮಾಲಿಕರಾದರು.

ಕೆಲಸಗಾರರಾದ ನಾವು ಅಮೆರಿಕಾದ ಅಧ್ಯಕ್ಷರು ಹೊರಗುತ್ತಿಗೆ ಒಲ್ಲೆ ಅನ್ನುತ್ತಿದ್ದಹಾಗೆ ನೀರಿನಿ೦ದ ಹೊರಬ೦ದ ಮೀನಿನ ಹಾಗೆ ಒದ್ದಾಡುತ್ತೇವೆ. ಈ ಹಿ೦ಜರಿತದಲ್ಲಾದರು ನಾವು ಪಾಠ ಕಲಿತು ಸ೦ಶೋಧನೆ ಮತ್ತು ಅಭಿವೃದ್ದಿಯ ಕಡೆ ಗಮನ ಹರಿಸೋಣವೆ? ಕೂಲಿ ಕೆಲಸ ಒಲ್ಲೆ, ನಾನು ಮಾಲಿಕನಾಗುತ್ತೇನೆ ಎಂಬ ಸ೦ಕಲ್ಪವನ್ನು ನನ್ನ ವಿದ್ಯಾರ್ಥಿ ಮಿತ್ರರು ಕೈಗೊಳ್ಳುವರೇ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X