ಅಮೆರಿಕಾದಲ್ಲಿ ವಧು-ವರ ಸಮಾವೇಶ

Single parents matrimony meet Navika Los Angeles
ಸ್ಯಾನ್ ಡಿಮಸ್, ಮೇ.31 :ವಿವಾಹವಾಗುವ ಅಪೇಕ್ಷೆ ಹೊಂದಿರುವ ಒಂಟಿಗಳ ಪ್ರಯೋಜನಕ್ಕಾಗಿ ನಾವಿಕ ವಿಶ್ವ ಕನ್ನಡ ಸಮ್ಮೇಳನದ ಆಯೋಜಕರು 'ಕನ್ನಡ ವಧು ಕನ್ನಡ ವರ ಮುಖಾಮುಖಿ' ವೇದಿಕೆ ನಿರ್ಮಿಸಿದ್ದಾರೆ. ಇದೇ ಜುಲೈನಲ್ಲಿ ಲಾಸ್ ಏಂಜಲಿಸ್ ನಗರದಲ್ಲಿ ಜರುಗುವ ಕನ್ನಡ ಸಮ್ಮೇಳನ ಸಭಾಂಗಣದಲ್ಲಿ ವಧೂ-ವರ ಮುಖಾಮುಖಿ ವ್ಯವಸ್ಥೆ ಕಲ್ಪಿಸಲಾಗಿದೆ.

ಆಸಕ್ತ ಒಂಟಿ ಜೀವಿಗಳು ಮತ್ತು ಅವರ ಪೋಷಕರು ಈ ವೇದಿಕೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ನಾವಿಕ ಪತ್ರಿಕಾ ಪ್ರಕಟಣೆ ತಿಳಿಸಿದೆ. ಎರಡು ಸ್ತರಗಳಲ್ಲಿ ಮುಖಾಮುಖಿ ಕಾರ್ಯಕ್ರಮ ನಡೆಯಲಿದ್ದು ತಂದೆ ತಾಯಿ ಫೋಷಕರ ಸಮ್ಮಿಳನ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ಇದ್ದರೆ ವಧೂವರರ ನೇರ ಮುಖಾಮುಖಿ ಅದೇ ದಿವಸ ಮಧ್ಯಾನ್ಹ 2 ರಿಂದ 5 ಗಂಟೆಯವರೆಗೆ ನಡೆಯಲಿದೆ.

ವಿಳಾಸ : Pasadena Convention Center,300 East Green Street, Pasadena, CA 91101-2308

ಮೇಲೆ ತಿಳಿಸಿದ ಪಸಡೋನ ಸಭಾಂಗಣದಲ್ಲಿ ಜುಲೈ 4 ಭಾನುವಾರ ಈ ಕಾರ್ಯಕ್ರಮ ವ್ಯವಸ್ಥೆ ಆಗಿರುತ್ತದೆ. ಬಾಳ ಸಂಗಾತಿಗಾಗಿ ಹುಡುಕಾಟ ನಡೆಸಿರುವ ಗಂಡು ಹೆಣ್ಣುಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ನಾವಿಕ ಮತ್ತು ಕನ್ನಡ ಮೆಟ್ರಿಮೊನಿ ಜಂಟಿಯಾಗಿ ಆಯೋಜಿಸಿರುವ
ಸಮ್ಮಿಳನದಲ್ಲಿ ಭಾಗವಹಿಸಲಿಚ್ಛಿಸುವವರು 50 ಡಾಲರುಗಳ ಪ್ರವೇಶ ಶುಲ್ಕ ನೀಡಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು.

ಕನ್ನಡ ಮೆಟ್ರಿಮೊನಿ ಐಡಿ ಮೂಲಕ ನಿಮ್ಮ ಹೆಸರು ಬರೆಸಲು ಅಗತ್ಯವಾದ ಬಾಗಿಲು ಈ ಕೊಂಡಿಯಲ್ಲಿ ಇದೆ. ನೋಡಿ. ಶೀರ್ಘ ಕಲ್ಯಾಣ ಮಸ್ತುಃ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+