ನಾವಿಕ ಕನ್ನಡ ಸಮ್ಮೇಳನ ವಿಡಿಯೋ
ಉತ್ತರ
ಅಮೆರಿಕಾದಲ್ಲಿ ಬೆಳೆಯುತ್ತಿರುವ ಇನ್ನೊಂದು ಕನ್ನಡ ವೃಕ್ಷದ ಹೆಸರು ನಾವಿಕ. ನಾವಿಕ ಅಂದರೆ ನಾರ್ಥ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೋಷನ್ ಸಂಕ್ಷಿಪ್ತ ರೂಪ. ಈ ಸಂಸ್ಥೆ ಜನ್ನ ತಾಳಿ ಕೆಲವೇ ತಿಂಗಳುಗಳಾಗಿವೆ. ತನ್ನ ಕಾರ್ಯ ಚಟುವಟಿಕೆ ಹಾಗೂ ಧ್ಯೇಯೋದ್ದೇಶಗಳನ್ನು ಕನ್ನಡ ಜಗತ್ತಿಗೆ ತೆರೆದಿಡುವ ಉದ್ದೇಶದಿಂದ ಮೊಟ್ಟ ಮೊದಲ 'ನಾವಿಕ ಪ್ರಥಮ ಕನ್ನಡ ಶಿಖರ ಸಮಾವೇಶ' ಹಮ್ಮಿಕೊಂಡಿದ್ದು ಮೂರು ದಿವಸಗಳ ಕನ್ನಡ ಹಬ್ಬ ಇದೇ ಜುಲೈ ತಿಂಗಳ 2ರಿಂದ 4ನೇ ತಾರೀಕಿನವರೆಗೆ ನಡೆಯುತ್ತದೆ. id="toptextpromo">ಸಮ್ಮೇಳನ
ನಡೆಯುವುದು ಲಾಸ್ ಏಂಜಲಿಸ್ ನಗರದಲ್ಲಿರುವ ಪಾಸಡೊನ ಸಭಾಂಗಣದಲ್ಲಿ. ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಗಮಿಸುತ್ತಿದ್ದು ಸ್ಥಳೀಯ ಲಾಸ್ ಏಂಜಲಿಸ್ ನ ರಾಜ್ಯಪಾಲ ಆರ್ನಾಲ್ಡ್ ಶ್ವಾಜನಗರ್ ಅವರನ್ನೂ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ನಾವಿಕ ಪತ್ರಿಕಾ ಪ್ರಕಟಣೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ನಾವಿಕ
ಸಂಸ್ಥೆ ತನ್ನ ಅಂತರ್ಜಾಲ ತಾಣವನ್ನು ಸಿದ್ಧಪಡಿಸುತ್ತಿದೆ. ನಿರ್ಮಾಣ ಹಂತದಲ್ಲಿರುವ ಈ ತಾಣವನ್ನು ವೀಕ್ಷಿಸಲು ಅಪೇಕ್ಷಿಸುವವರು www.navika.org ಕ್ಲಿಕ್ಕಿಸಬಹುದು. ಜತೆಗೆ, ನಾವಿಕ ಪದಾಧಿಕಾರಿಗಳು ಸಿದ್ಧಪಡಿಸಿರುವ ಸಮ್ಮೇಳನ ಪ್ರಚಾರ ವಿಡಿಯೋ ನೋಡಬಹುದು.











Click it and Unblock the Notifications