ಸ್ಟಾನ್‌ಫರ್ಡ್ ಎಫ್ಎಂನಲ್ಲಿ ರತ್ನಮಾಲಾ ಪ್ರಕಾಶ್

Singer Ratnamala Prakash
ರಾಯರು ಬಂದರು ಮಾವನ ಮನೆಗೆ, ಕಂಡೆನಾ ಗೋವಿಂದನಾ, ಮತ್ತದೇ ಬೇಸರ ಮತ್ತದೇ ಸಂಜೆ.... ಮುಂತಾದ ಭಾವಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ವಿಶ್ವದಾದ್ಯಂತ ಕನ್ನಡಿಗರ ಮನದಲ್ಲಿ ಭಾವದ ಬೆಸುಗೆ ಹಾಕಿರುವ ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಮಾತು ಮತ್ತು ಹಾಡುಗಳನ್ನು ಕೇಳುವ ಸುಯೋಗ ವಿಶ್ವಕನ್ನಡಿಗರಿಗೆ ಲಭಿಸಲಿದೆ.

ಇದೇ ಬುಧವಾರ, ಡಿಸೆಂಬರ್ 16ರಂದು ಸ್ಟಾನ್‌ಫರ್ಡ್ KZSU 90.1 ಎಫ್ಎಮ್ ಚಾನಲ್ ನಲ್ಲಿ ರತ್ನಮಾಲಾ ಪ್ರಕಾಶ್ ಅವರ ಸಂದರ್ಶನವನ್ನು ನೇರವಾಗಿ ಕೇಳಬಹುದು. ರೇಡಿಯೋ ಜಾಕಿ ಆಗಿರುವ ಮಧು ಕೃಷ್ಣಮೂರ್ತಿ ಸಂದರ್ಶನ ನಡೆಸಲಿದ್ದಾರೆ.

ಕಾರ್ಯಕ್ರಮದ ವಿವರ

ರತ್ನಮಾಲಾ ಪ್ರಕಾಶ್ ಅವರ ನೇರ ಸಂದರ್ಶನ
ದಿನಾಂಕ : 16.12.2009, ಬುಧವಾರ
ಸಮಯ : ಬೆಳಗ್ಗೆ 7.00ರಿಂದ 7.40ರವರೆಗೆ (ಕ್ಯಾಲಿಫೋರ್ನಿಯ ಸಮಯ)
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಬೇ ಏರಿಯ]
ಇಂಟರ್ನೆಟ್ ಮೂಲಕ : http://www.itsdiff.com
ಸಂದರ್ಶಕರು : ಮಧು ಕೃಷ್ಣಮೂರ್ತಿ

ಈ ಕಾರ್ಯಕ್ರಮವನ್ನು ನೀವು ಅಂತರ್ಜಾಲದ ಮೂಲಕ ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು. ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಕರೆ ಮಾಡಿ ನೀವೂ ಸಹ ಭಾಗವಹಿಸಿ. ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.itsdiff.com/Kannada.html

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+