ಬೇ ಏರಿಯಾದಲ್ಲಿ ಮಾ.15ರಂದು ಕರ್ಣಾಟಕ ದಿನ

ಕನ್ನಡ ನಾಡಿನ ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ಪರಂಪರೆಯ ಇಣುಕುನೋಟದ ಜೊತೆ ವಿಶೇಷ ತಿನಿಸುಗಳ ರಸದೂಟವನ್ನು ಒಳಗೊಂಡಿರುವ ಮೋಜಿನ ಹಬ್ಬವನ್ನು ಮಾರ್ಚ್ ಹದಿನೈದರಂದು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟವು ಅಲ್ಲಿ ಆಯೋಜಿಸಿದೆ. ಅಂದು ವಿವಿಧ ಮನರಂಜನಾ ಕಾರ್ಯಕ್ರಮಗಳ ಜೊತೆ, ಮಕ್ಕಳಿಗಾಗಿ ಕರ್ನಾಟಕದ ಭಾಷೆ ಮತ್ತು ಸಂಸ್ಕೃತಿಯನ್ನು ಕುರಿತಂತೆ ಪ್ರಬಂಧ ಸ್ಪರ್ಧೆ ಮತ್ತು ಪೋಸ್ಟರ್ ಸ್ಪರ್ಧೆಗಳನ್ನೂ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ವಿವರ
ಕಾರ್ಯಕ್ರಮ : ಕರ್ನಾಟಕ ದಿನ
ದಿನಾಂಕ ಮತ್ತು ಸಮಯ : ಭಾನುವಾರ, ಮಾರ್ಚ್ 15, 2009. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ
ಸ್ಥಳ : ICC Milpitas, 525 Los Coches St, Milpitas, CA 95035
ದಯವಿಟ್ಟು ನಿಮ್ಮ ಕನ್ನಡ-ಸ್ನೇಹಿತರಿಗೆ ಈ ವಿಷಯ ಮುಟ್ಟಿಸುವಲ್ಲಿ ನೆರವಾಗಿ. ನಿಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ. ಪ್ರವೇಶ ಉಚಿತ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : [email protected]
ವೆಬ್ ಸೈಟ್ ವಿಳಾಸ : www.kknc.org












Click it and Unblock the Notifications