ಸ್ವರ್ಣಸೇತು ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ

Swarnasetu magazine release function
ಆತ್ಮೀಯ ಕನ್ನಡ ಕೂಟದ ಸದಸ್ಯರೆ,

ನಾವೆಲ್ಲ ಕಾತರದಿಂದ ಎದುರುನೋಡುತ್ತಿದ್ದ ಶುಭಘಳಿಗೆ ಸ್ವರ್ಣಸೇತು ಸಂಚಿಕೆ ಬಿಡುಗಡೆಯ ಸಮಾರಂಭ ಹತ್ತಿರ ಬಂದಿದೆ. ಈ ಸಂತಸದ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಬಹಳ ಹೆಮ್ಮೆಯಾಗುತ್ತಿದೆ. ವರ್ಷದ ಆರಂಭದಿಂದ ಶ್ರಮವಹಿಸಿ ದುಡಿದ ಪ್ರತಿಫಲ - ಈ ಒಂದು ವಾರ್ಷಿಕ ಸಂಚಿಕೆ. ಹಾದಿಯಲ್ಲಿ ಎಷ್ಟೇ ಕಷ್ಟಗಳು ಬಂದರೂ, ಕಡೆಗೆ ರೂಪುಗೊಂಡಿರುವ ಸಂಚಿಕೆಯನ್ನು ನೋಡಿದಾಗ ಅನಿಸುವುದು ಮೂರಕ್ಷರದ ತೃಪ್ತಿಯ ಪದ "ಸಾರ್ಥಕ". ಈ ಸಂಚಿಕೆಯನ್ನು ಹೊರತರಲು ಸಮಿತಿಯ ಜೊತೆ ಅನೇಕಾನೇಕ ಕೈಗಳು ಸತತವಾಗಿ ಸೇರಿ ಕೆಲಸ ಮಾಡಿವೆ. ಸಹಕಾರ ನೀಡಿದ ಎಲ್ಲರಿಗೂ ಸಮಿತಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ, ಸಮಾರಂಭಕ್ಕೆ ಆದರದ ಸುಸ್ವಾಗತವನ್ನು ಬಯಸುತ್ತಿದ್ದೇವೆ.

ಸ್ವರ್ಣಸೇತು ಸಮಿತಿಯು ಬಿಡುಗಡೆಯ ಸಮಾರಂಭವನ್ನು ಜನವರಿ 11ರಂದು ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಲಾಸ್ ಅಲ್ಟೋಸ್ ಸಾರ್ವಜನಿಕ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದೆ. ನೀವೆಲ್ಲ ತಪ್ಪದೇ ಸ್ವಲ್ಪ ಮುಂಚಿತವಾಗಿ 1:45 ಗಂಟೆಗೆ ಬಂದು, ಕಾರ್ಯಕ್ರಮದಲ್ಲಿ ಭಾಗವಹಿಸಿ, "ಸ್ವರ್ಣಸೇತು-2008" ಸಂಚಿಕೆಯನ್ನು ಆದರದಿಂದ ಬರಮಾಡಿಕೊಳ್ಳಿ ಎಂದು ನಮ್ಮ ಸವಿನಯ ಕೋರಿಕೆ. ಕನ್ನಡ ಕಾವ್ಯಗಳ ಗಾಯನ, ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನೊಳಗೊಂಡ ರಸಪ್ರಶ್ನೆ ಮತ್ತು ಮುಖ್ಯ ಅತಿಥಿಗಳಾದ -ವಿದ್ವಾನ್ ಪ್ರಣತಾರ್ಥಿ ಹರನ್ ಅವರ - ಸವಿಮಾತು ಎಲ್ಲ ನಿಮಗಾಗಿ ಕಾದಿರಿಸಲಾಗಿದೆ.

ವಿಳಾಸ ಮತ್ತು ಕಾರ್ಯಕ್ರಮದ ವಿವರಗಳು

ಕಾರ್ಯಕ್ರಮ : "ಸ್ವರ್ಣಸೇತು" ಸಂಚಿಕೆ ಬಿಡುಗಡೆ ಸಮಾರಂಭ
ಸ್ಥಳ : ಲಾಸ್ ಅಲ್ಟೋಸ್ ಸಾರ್ವಜನಿಕ ಗ್ರಂಥಾಲಯ
ವಿಳಾಸ : 13, ಸ್ಯಾನ ಎಂಟೋನಿಯೋ ರೋಡ್, ಲಾಸ್ ಅಲ್ಟೋಸ್, ಕ್ಯಾಲಿಫೋರ್ನಿಯ 94022.
ದಿನಾಂಕ ಮತ್ತು ವೇಳೆ : ಭಾನುವಾರ 11 ರಂದು ಮಧ್ಯಾನ್ಹ 2:00 ಗಂಟೆಗೆ

ಸಿರಿಗನ್ನಡಂ ಗೆಲ್ಗೆ

ಸ್ವರ್ಣಸೇತು ಸಮಿತಿ 2008

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+