ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17ರಂದು ಅಮೇರಿಕ ಬಾನುಲಿಯಲ್ಲಿ ಕನ್ನಡ ಕಾರ್ಯಕ್ರಮ

By Staff
|
Google Oneindia Kannada News

Madhu Krishnamurthy
ಕಳೆದ 2 ವರುಷಗಳಿಂದ ಕ್ಯಾಲಿಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಪ್ರದೇಶದಲ್ಲಿ Stanford KZSU 90.1 itsdiff radio ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಬಂದಿದೆ. ಡಾ. ರಾಜಕುಮಾರ್, ಪುಟ್ಟಣ್ಣ ಕಣಗಾಲ್, ಕರ್ನಾಟಕ ಇತಿಹಾಸದ ಬಗ್ಗೆ ಒಂದು ವಿಹಂಗಮ ನೋಟ, ಪಿ. ಬಿ. ಶ್ರೀನಿವಾಸ್, ನಾಗಭರಣ, ಡಾ. ಕಾಪ್ಸೆ ಅವರೊಂದಿಗೆ ಸಂದರ್ಶನ ಹಾಗು ಶಾಸ್ತ್ರೀಯ ಸಂಗೀತ, ಭಾವ ಗೀತೆ ಮತ್ತು ಗಮಕವಾಚನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ.

ಈಗ ಡಿಸೆಂಬರ್ 17ರಂದು ಕನ್ನಡನಾಡಿನ ಊರು ಹಾಗು ಇತರ ತಾಣಗಳನ್ನು ನೆನಪಿಸುವ ಕನ್ನಡ ಗೀತೆಗಳನ್ನೊಳಗೊಂಡ ಕಾರ್ಯಕ್ರಮ 'ನೋಡು ಬಾ ನೋಡು ಬಾ ನಮ್ಮೂರ' ಪ್ರಸಾರ ಮಾಡಲಿದೆ. ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ನೀವೂ ದೂರವಾಣಿಯ ಮೂಲಕ ಕಾಲ್ ಮಾಡಿ ವಿಶ್ವಕನ್ನಡಿಗರೊಂದಿಗೆ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು. ದೂರವಾಣಿ ಸಂಖ್ಯೆಯನ್ನು ಪ್ರಸಾರದ ಸಮಯದಲ್ಲಿ ನೀಡಲಾಗುವುದು.

ತನ್ನ ಐವತ್ತೆರಡನೆಯ ರಾಜ್ಯೋತ್ಸವವನ್ನು ಆಚರಿಸಿದ "ಸುಂದರ ನದಿ ವನಗಳ ನಾಡಾದ" ಕರ್ನಾಟಕ ಐತಿಹಾಸಿಕ ಸ್ಥಳಗಳಿಗೆ, ರಮ್ಯ ನೈಸರ್ಗಿಕ ತಾಣಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆ. ಅಂತಹ ಜಾಗಗಳನ್ನು ನೀವು ನೋಡಿ ಆನಂದಿಸಿರಬಹುದು ಅಥವ ನೀವು ಅಲ್ಲಿಯೇ ಹುಟ್ಟಿ ಬೆಳೆದಿರಲೂ ಬಹುದು. ಅಷ್ಟೇಕೆ ನೀವು ಹುಟ್ಟಿ ಬೆಳೆದ ಊರು ಯಾವುದಾದರೂ ಅದರ ಬಗ್ಗೆ ನಿಮಗೆ ಆತ್ಮೀಯ ಭಾವನೆ ಇರುವುದು ಸಹಜವೆ. ವಿಶ್ವದ ಬೇರೆ ಬೇರೆ ಜಾಗಗಳಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ನಿಮ್ಮ ಅನುಭವ ಮತ್ತು ನೆನಪುಗಳನ್ನು ಹಂಚಿಕೊಳ್ಳಲು ಇದು ಒಂದು ಅವಕಾಶ.

ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ

ಕಾರ್ಯಕ್ರಮ : ನೋಡು ಬಾ ನೋಡು ಬಾ ನಮ್ಮೂರ
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://www.itsdiff.com (ವಿಶ್ವದ ಯಾವುದೇ ಭಾಗದಿಂದ ಕಾರ್ಯಕ್ರಮವನ್ನು ಕೇಳಬಹುದು. ಅಂತರ್ಜಾಲ ತಾಣದ ಎಡ ಮೇಲ್ತುದಿಯಲ್ಲಿ ಹಳದಿ ಬಣ್ಣದಲ್ಲಿ ಬರೆದಿರುವ ವಿವರವನ್ನು ಗಮನಿಸಿ.)
ದಿನಾಂಕ : 2008 ಡಿಸೆಂಬರ್ 17 ಬುಧವಾರ
ಸಮಯ : ಬೆಳಗ್ಗೆ 7.30ರಿಂದ 8.30ರವರೆಗೆ. (ಕ್ಯಾಲಿಫೋರ್ನಿಯ ಸಮಯ) [7.30 AM to 8.30 AM PST in California]
ನಡೆಸಿಕೊಡುವವರು : ಮಧು ಕೃಷ್ಣಮೂರ್ತಿ

ಭಾರತೀಯ ಕಾಲಮಾನ : ಬುದವಾರ ರಾತ್ರಿ 9.00ರಿಂದ 10.00

ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.itsdiff.com/Kannada.html

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X