ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಾನುಲಿಯಲ್ಲಿ ನಾಗಾಭರಣ ಸಂದರ್ಶನ

By Staff
|
Google Oneindia Kannada News

TS Nagabharana in USAಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ ಮತ್ತು ರಂಗಕಲಾವಿದ ಟಿ.ಎಸ್. ನಾಗಾಭರಣ ಅವರೊಂದಿಗೆ ನಡೆಸಲಾದ ಸಂದರ್ಶನವನ್ನು ಸ್ಟಾನ್‌ಫರ್ಡ್ KZSU 90.1 ಎಫ್ಎಮ್ ಚಾನಲ್ ನಲ್ಲಿ ಅಕ್ಟೋಬರ್ 8ರಂದು ಬುಧವಾರ ಬೆಳಿಗ್ಗೆ ಪ್ರಸಾರ ಮಾಡಲಾಗುತ್ತಿದೆ. ನಾಗಾಭರಣ ಸೆಪ್ಟೆಂಬರ್ 27ರಂದು ಕ್ಯಾಲಿಫೋರ್ನಿಯಾ ಬೇ ಏರಿಯಗೆ ಭೇಟಿ ನೀಡಿದಾಗ ಸಂದರ್ಶನ ನೀಡಿದರು. ಈ ಧ್ವನಿ ಮುದ್ರಿಕೆಯನ್ನು ಹಾಗು ಅವರ ಚಿತ್ರಗಳಿಂದ ಆಯ್ದ ಕೆಲ ಹಾಡುಗಳನ್ನು ಬಿತ್ತರಿಸಲಾಗುವುದು.

ನಾಗಾಭರಣ ಅವರು ಶಿಕಾಗೋದಲ್ಲಿ ನಡೆದ 5ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಅಮೆರಿಕಾದಲ್ಲಿ ಕಲಾವಿದರಿಗೆ ರಂಗತರಬೇತಿ ನೀಡುತ್ತ ಜೋಕುಮಾರಸ್ವಾಮಿ ನಾಟಕ ಪ್ರದರ್ಶನವನ್ನು ಎಲ್ಲೆಡೆ ನೀಡುತ್ತಿದ್ದಾರೆ.

ಕಾರ್ಯಕ್ರಮದ ವಿವರ

ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲಿಫೋರ್ನಿಯ ಬೇ ಏರಿಯ]
ಇಂಟರ್ನೆಟ್ ಮೂಲಕ : http://www.itsdiff.com
ದಿನಾಂಕ : 2008 ಅಕ್ಟೋಬರ್ 8 ಬುಧವಾರ
ಸಮಯ : ಬೆಳಗ್ಗೆ 7.30ರಿಂದ 8.30ರವರೆಗೆ (ಕ್ಯಾಲಿಫೋರ್ನಿಯ ಸಮಯ)
ಸಂದರ್ಶಕರು : ಮಧು ಕೃಷ್ಣಮೂರ್ತಿ

ಈ ಕಾರ್ಯಕ್ರಮವನ್ನು ನೀವು ಅಂತರ್ಜಾಲದ ಮೂಲಕ ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು. ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಕರೆ ಮಾಡಿ ನೀವೂ ಸಹ ಭಾಗವಹಿಸಿ. ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು: http://www.itsdiff.com/Kannada.html

ನಾಗಾಭರಣ ಕಿರುಪರಿಚಯ : ಟಿ.ಎಸ್. ನಾಗಾಭರಣ ಕನ್ನಡ ಕಲಾಪ್ರಪಂಚದಲ್ಲಿ ಒಬ್ಬ ಬಹುಮುಖ ಪ್ರತಿಭೆಯ ಕಲಾವಿದರು. ಕನ್ನಡ ಚಲನಚಿತ್ರ, ನಾಟಕ ಹಾಗು ಟೀವಿ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಹಾಗು ಯಶಸ್ವಿಯಾಗಿ ಭಾಗವಹಿಸುತ್ತಿದ್ದಾರೆ. ಪ್ರಖ್ಯಾತ ನಾಟಕ ತಂಡಗಳಾದ ಬೆನೆಕ ಮತ್ತು ರಂಗಸಂಪದ ಇವುಗಳಲ್ಲಿ ನಟನೆ, ನಿರ್ದೇಶನ ಮತ್ತು ಹಿಮ್ಮೇಳಗಳಲ್ಲಿ ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಸಧ್ಯಕ್ಕೆ ಬೆನಕ ತಂಡದ ಮುಖ್ಯಸ್ತರಾಗಿದ್ದಾರೆ. ಕಳೆದ 28 ವರ್ಷಗಳಲ್ಲಿ 32 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಎಂಟು ಚಿತ್ರಗಳು ರಾಷ್ಟ್ರ ಪ್ರಶಸ್ತಿ ಮತ್ತು ಹದಿನಾಲ್ಕು ಚಿತ್ರಗಳು ರಾಜ್ಯ ಹಾಗು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ. ಕನ್ನಡ ಚಲನಚಿತ್ರಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರೂ ರಂಗಭೂಮಿಯನ್ನು ಮರೆತಿಲ್ಲದಿರುವುದು ಭರಣ ಅವರ ಹೆಗ್ಗಳಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X