Actress Trisha: ವಿಜಯ್ ಸಿಎಂ ಪದಗ್ರಹಣದಲ್ಲಿ ನಟಿ ತ್ರಿಶಾ ಹೈಲೈಟ್: ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ

ಚೆನ್ನೈ: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಸಿ.ಜೋಸೆಫ್ ವಿಜಯ್ (TVK Vijay Oath) ಅವರು ಪ್ರಯಾಸದಾಯಕ ಬಹುಮತ ಸಾಬೀತಿನ ಬಳಿಕ ಪದ್ರಹಣಕ್ಕೆ ಅಣಿಯಾಗಿದ್ದಾರೆ. ಚೆನ್ನೈನ ನೆಹರು ಮೈದಾನದಲ್ಲಿ ಅದ್ಧೂರಿ ವೇದಿಕೆ ಕಾರ್ಯಕ್ರಮದಲ್ಲಿ ವಿಜಯ್ ಸಿಎಂ ಆಗಿ ಅಧಿಕಾರಿ ಸ್ವೀಕರಿಸಲಿದ್ದಾರೆ. ವಿಜಯ್ ಅವರ ಅತ್ಯಾಪ್ತ ಸ್ನೇಹಿತೆ ನಟಿ ತ್ರಿಶಾ ಕೃಷ್ಣನ್ ಅವರು ಕಾರ್ಯಕ್ರಮಕ್ಕೆ ಆಗ್ರಮಿಸಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಪದಗ್ರಹಣ ಸಮಾರಂಭದಲ್ಲಿ ನಟಿ ಮಿಂಚಿದ್ದು, ಸಮಾಜಿಕ ಜಾಲತಾಣದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಸುಮಾರು ಆರು ದಶಕಗಳ ಬಳಿಕ ರಾಜ್ಯದಲ್ಲಿ ಡಿಎಂಕೆ, ಎಐಡಿಎಂಕೆ ಆಡಳಿತವನ್ನು ಅಂತ್ಯಗೊಳಿಸಿರುವ ಟಿವಿಕೆ ಪಕ್ಷಕ್ಕೆ ಅನಿಶ್ಚಿತತೆ ತಲೆದೂರಿತ್ತು. ಕೊನೆಗೆ ಸಂಭಾವ್ಯ ಮಿತ್ರ ಪಕ್ಷಗಳ ಜೊತೆಗೆ ಕೈ ಜೋಡಿಸಿ ಬಹುಮತ ಸಾಬೀತುಪಡಿಸುತ್ತಿದ್ದಂತೆ ಇಂದು ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇಂದಿನಿಂದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡನ್ನು ಅಧಿಕಾರ ವಹಿಸಿಕೊಂಡು ಮುನ್ನಡೆಸಲಿದೆ.

Trisha Krishnan

ಮೊದಲಿನಿಂದಲೂ ವಿಜಯ್ ಹಾಗೂ ತ್ರಿಶಾ ಮಧ್ಯೆ ಸ್ನೇಹ ಮಾತ್ರವಲ್ಲದೇ ಬೇರೆ ಏನೋ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತ್ರಿಶಾರಿಂದಲೇ ವಿಜಯ್ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂದು ಹೇಳಲಾಗಿತ್ತು. ಇದೆಲ್ಲದ್ದಕ್ಕೆ ತಲೆ ಕೆಡಿಸಿಕೊಳ್ಳದೇ ತ್ರಿಶಾ ಇದೀಗ ಸ್ನೇಹಿತ ವಿಜಯ್ ಅವರ ಸಿಎಂ ಪಟ್ಟಾಭೀಷೇಕಕ್ಕೆ ಆಗಮಿಸಿದ್ದಾರೆ. ರೇಷ್ಮೆ ಸೀರೆಯಲ್ಲಿ, ಸಾಂಪ್ರದಾಯಿಕ ಲುಕ್‌ನಲ್ಲಿ ಮಿಂಚಿದ ವಿಡಿಯೋಗಳು/ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

TVK ಶಾಸಕರ ಸಂಖ್ಯೆ 116, ಬಹುಮತಕ್ಕೆ 2 ಸೀಟು ಬಾಕಿ; ವಿಜಯ್ ಪ್ರದಗ್ರಹಣಕ್ಕೆ ನೆಹರು ಮೈದಾನದಲ್ಲಿ ಸಿದ್ಧತೆ
TVK ಶಾಸಕರ ಸಂಖ್ಯೆ 116, ಬಹುಮತಕ್ಕೆ 2 ಸೀಟು ಬಾಕಿ; ವಿಜಯ್ ಪ್ರದಗ್ರಹಣಕ್ಕೆ ನೆಹರು ಮೈದಾನದಲ್ಲಿ ಸಿದ್ಧತೆ

ಅಭಿಮಾನಿಗಳು ಒಂದೆಡೆ ವಿಜಯ್ ಅಧಿಕಾರ ಹಿಡಿದು ಮುಂದೇನು ಮಾಡುತ್ತಾರೆ ಎಂಬುದರ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೂ ಕೆಲವರು ತ್ರಿಶಾ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಟಿವಿಕೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ವಿಜಯ್ ಅವರೊಂದಿಗೆ ತ್ರಿಶಾ ಸಹ ರಾಜಕೀಯಕ್ಕೆ ಬರುತ್ತಾರೆ ಎಂದೆಲ್ಲ ಮಾತು ಕೇಳಿ ಬಂದವು. ಇವರಿಬ್ಬರ ಒಂದಷ್ಟು ಹಳೇಯ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ವಿಜಯ್ ಸಿಎಂ ಆಗುವುದಕ್ಕೆ ಸಾಕ್ಷಿಯಾಗಲು ತ್ರಿಶಾ ನೆಹರು ಮೈದಾನಕ್ಕೆ ಆಗಮಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಕಾರ್ಯಕ್ರಮದ ಹೈಲೈಟ್ ತ್ರಿಶಾ ಲುಕ್ ಹೇಗಿದೆ?

ರೇಷ್ಮೆ ಸೀರೆಯಲ್ಲಿ ವೇದಿಕೆ ಮುಂದೆ ಬಂದ ನಟಿ ತ್ರಿಶಾ ಲವಲವಿಕೆಯಿಂದ ತಮ್ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಂತೆ ಓಡಾಡಿಕೊಂಡಿದ್ದರು. ಆಪ್ತರೊಂದಿಗೆ ನಗುಮೊಗದಿಂದ ವ್ಯವಹರಿಸಿದರು. ತ್ರಿಶಾ ಕಾಂಜೀವರಂ ಡ್ರಾಪ್ ಶೈಲಿಯಲ್ಲಿ ಕಾಣುವ ಬಟ್ಟೆಯನ್ನು ಧರಿಸಿದ್ದರು. ಈ ಸೀರೆಯು ಚಿನ್ನದ ದಾರದಿಂದ ನೇಯ್ದ ಮೋಟಿಫ್‌ಗಳು ಮತ್ತು ಅಂಚುಗಳನ್ನು ಒಳಗೊಂಡಿದ್ದುನಟಿ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು.

ಸೀರೆಗೆ ವಿರುದ್ಧವಾಗಿ ಚಿನ್ನದ ದಾರದಿಂದ ನೇಯ್ದ ಕ್ರೀಮ್-ಹ್ಯೂಡ್ ಬ್ಲೌಸ್ ಧರಿಸಿದ್ದ ತ್ರಿಶಾ ವಜ್ರ-ಖಚಿತ ಹಾರ ಮತ್ತು ಮಧ್ಯದಲ್ಲಿ ಮಾಣಿಕ್ಯಗಳನ್ನು ಹೊಂದಿರುವ ಕಿವಿಯೋಲೆ, ಸೌಂದರ್ಯಕ್ಕೆ ಸರಿಹೊಂದುವ ಇನ್ನಿತರ ಆಭರಣ ಧರಿಸಿ ಕಾರ್ಯಕ್ರಮ ಆಗಮಿಸಿದ್ದರು. ಒಟ್ಟಾರೆ ಭಾರತೀಯ ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದರು. ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ತಮ್ಮ ಅಭಿಮಾನಿಗಳತ್ತ ತ್ರಿಶಾ ಕೈ ಬೀಸಿದರು. ಪದಗ್ರಹಣಕ್ಕೆ ಬಂದಿದ್ದ ವಿಜಯ್ ಆಪ್ತರು, ಅತಿಥಿಗಳಲ್ಲಿ ತ್ರಿಶಾ ಅವರೇ ಹೈಲೈಟ್ ಆಗಿದ್ದು ಕಂಡು ಬಂತು.

ತಮಿಳುನಾಡು ರಾಜಕೀಯ ಹೈಡ್ರಾಮಾ; ಟಿವಿಕೆಗೆ ಬಹುಮತ ಸಾಬೀತು ಸವಾಲು, 25 ಶಾಸಕರು ರೆಸಾರ್ಟ್‌ಗೆ ಶಿಫ್ಟ್
ತಮಿಳುನಾಡು ರಾಜಕೀಯ ಹೈಡ್ರಾಮಾ; ಟಿವಿಕೆಗೆ ಬಹುಮತ ಸಾಬೀತು ಸವಾಲು, 25 ಶಾಸಕರು ರೆಸಾರ್ಟ್‌ಗೆ ಶಿಫ್ಟ್

ತಮಿಳುನಾಡು ಫಲಿತಾಂಶ ದಿನ ಮೇ 4ರಂದು ರಂದು ತ್ರಿಶಾ ಕೃಷ್ಣನ್ ಅವರು ತಮ್ಮ 43 ನೇ ಹುಟ್ಟುಹಬ್ಬವನ್ನು ತಿರುಪತಿ ದೇವಸ್ಥಾನದಲ್ಲಿ ಆಚರಿಸಿಕೊಂಡರು. ಅದೇ ದಿನ ಟಿವಿಕೆ ಜಯಭೇರಿ ಭಾರಿಸಿದ್ದರಿಂದ ತಿರುಪತಿಯಿಂದ ನೇರವಾಗಿ ವಿಜಯ್ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+