ಇಂದು ಪ್ರಧಾನಿ ಮೋದಿ ಕರ್ನಾಟಕ, ತೆಲಂಗಾಣ ಭೇಟಿ; ಬಹುಕೋಟಿ ಯೋಜನೆಗಳಿಗೆ ಚಾಲನೆ, ಪ್ರಮುಖಾಂಶಗಳು ಇಲ್ಲಿವೆ

PM Narendra Modi: ಮೂರು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇಟಿ ಭಾರಿಸಿದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಭಾನುವಾರ (ಮೇ 10) ಕರ್ನಾಟಕ ಮತ್ತು ತೆಲಂಗಾಣಕ್ಕೆ ಭೇಟಿ ನೀಡಲಿದ್ದಾರೆ. ಅವರಿಗಾಗಿ ಎರಡು ಕಡೆಗಳಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಬಹುಕೋಟಿ ಮೌಲ್ಯದ ಯೋಜನೆಗಳಿಗೆ ಅವರು ಹರಿಸು ನಿಶಾನೆ ತೋರಿಸಲಿದ್ದಾರೆ. ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಅವರನ್ನು ಅಭಿನಂದಿಸಲಿದೆ. ಇಂದಿ ಪ್ರಧಾನಿ ಭೇಟಿಯ ಸಂಕ್ಷಿಪ್ತ ಮಾಹಿತಿ, ಪ್ರಮುಖಾಂಶಗಳು ಇಲ್ಲಿವೆ.

ಪ್ರಧಾನಿ ಭೇಟಿಯ ಪ್ರಮುಖಾಂಶಗಳು

* ಬೆಂಗಳೂರಿನ ಎಚ್‌ಎಎಲ್ ಆವರಣದಲ್ಲಿ 9.45ಕ್ಕೆ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ. ಸಾವಿರಾರು ಜನ ಸೇರುವ ಸಾಧ್ಯತೆ ಇದೆ. ಕರ್ನಾಟಕ ಬಿಜೆಪಿಯಿಂದ ಅವರನ್ನು ಅಭಿನಂದಿಸಲಾಗುತ್ತದೆ.

PM Modi

* ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆರ್ಟ್ ಆಫ್ ಲಿವಿಂಗ್‌ನ 45ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಬೆಂಗಳೂರು ಭೇಟಿ: ನಾಳೆ HAL ಸುತ್ತ ಸಂಚಾರ-ಪಾರ್ಕಿಂಗ್ ನಿರ್ಬಂಧ, ಮಾರ್ಗ ಬದಲಾವಣೆ
ಪ್ರಧಾನಿ ಮೋದಿ ಬೆಂಗಳೂರು ಭೇಟಿ: ನಾಳೆ HAL ಸುತ್ತ ಸಂಚಾರ-ಪಾರ್ಕಿಂಗ್ ನಿರ್ಬಂಧ, ಮಾರ್ಗ ಬದಲಾವಣೆ

* ಪ್ರಧಾನಮಂತ್ರಿಯವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಇದು ಆಂತರಿಕ ಶಾಂತಿ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಒಂದು ಮೀಸಲಾದ ಧ್ಯಾನ ಮಂದಿರವಾಗಿದೆ.

* ಮಾನಸಿಕ ಯೋಗಕ್ಷೇಮ, ಗ್ರಾಮೀಣಾಭಿವೃದ್ಧಿ, ಪ್ರಕೃತಿ ಸಂರಕ್ಷಣೆ ಮತ್ತು ಸಾಮಾಜಿಕ ಪರಿವರ್ತನೆಯ ಮೇಲೆ ಕೇಂದ್ರೀಕರಿಸಿದ ವರ್ಷವೀಡಿ ನಡೆಯುವ ಕಾರ್ಯಕ್ರಮಗಳನ್ನು ಒಳಗೊಂಡ ಆರ್ಟ್ ಆಫ್ ಲಿವಿಂಗ್‌ನ ರಾಷ್ಟ್ರವ್ಯಾಪಿ ಸೇವಾ ಉಪಕ್ರಮಗಳಿಗೂ ಸಹ ಅವರು ಚಾಲನೆ ನೀಡಲಿದ್ದಾರೆ.

* ನಂತರ ಪ್ರಧಾನಮಂತ್ರಿ ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಮಧ್ಯಾಹ್ನ 3 ಗಂಟೆಗೆ ಸುಮಾರು 9,400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ.

* ಮಧ್ಯಾಹ್ನ 3:45 ರ ಸುಮಾರಿಗೆ ಪ್ರಧಾನಮಂತ್ರಿ ಹೈದರಾಬಾದ್‌ನಲ್ಲಿರುವ ಸಿಂಧು ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

* ಹೈದರಾಬಾದ್ ನಲ್ಲಿ ಪ್ರಧಾನಮಂತ್ರಿಯವರು ಸುಮಾರು 9,400 ಕೋಟಿ ರೂಪಾಯಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಒಟ್ಟಾರೆ ಸಂಪರ್ಕ ಬಲವರ್ಧನೆ, ಸರಕು ಸಾಗಾಣೆ ದಕ್ಷತೆಯ ಸುಧಾರಣೆ, ಸುರಕ್ಷತೆ ಹೆಚ್ಚಿಸುವುದು, ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವ ಗುರಿ ಹೊಂದಿವೆ.

* ಹೈದರಾಬಾದ್-ಪಣಜಿ ಆರ್ಥಿಕ ಕಾರಿಡಾರ್‌ನಲ್ಲಿ ಗುಡೇಬೆಳ್ಳೂರಿನಿಂದ ಮೆಹಬೂಬ್‌ನಗರವರೆಗಿನ ರಾಷ್ಟ್ರೀಯ ಹೆದ್ದಾರಿ-167 ರ ಚತುಷ್ಪಥ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಒಟ್ಟು ಯೋಜನಾ ವೆಚ್ಚ 3,175 ಕೋಟಿ ರೂಪಾಯಿಗೂ ಅಧಿಕ. ಈ ಯೋಜನೆಯು ಸುಗನ, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.

* ಈ ಹೆದ್ದಾರಿಯು ತೆಲಂಗಾಣ ಮತ್ತು ಕರ್ನಾಟಕ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಎರಡೂ ರಾಜ್ಯಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಅನುಕೂಲವಾಗುತ್ತದೆ.

* ಹೈದರಾಬಾದ್-ನಾಗ್ಪುರ ಕೈಗಾರಿಕಾ ಕಾರಿಡಾರ್ (ಎಚ್ ಎನ್ ಐಸಿ) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ಕೈಗಾರಿಕಾ ಪ್ರದೇಶದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 3,245 ಎಕರೆ ಪ್ರದೇಶದಲ್ಲಿ ಒಟ್ಟು 2,350 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ.

* ಪ್ರಧಾನಮಂತ್ರಿ ವಾರಂಗಲ್‌ನಲ್ಲಿ ಪಿಎಂ ಮಿತ್ರ ಪಾರ್ಕ್ ಅನ್ನು ಉದ್ಘಾಟಿಸಲಿದ್ದಾರೆ. ಅದನ್ನು ಕಾಕತೀಯ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಎಂದೂ ಕರೆಯುತ್ತಾರೆ. ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

* ಪ್ರಧಾನಿ ಮೋದಿ ಸುಮಾರು 1,535 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವುಗಳಲ್ಲಿ 118 ಕಿ.ಮೀ. ವ್ಯಾಪ್ತಿಯ ಕಾಜಿಪೇಟೆ-ವಿಜಯವಾಡ ಮಲ್ಟಿ-ಟ್ರ್ಯಾಕಿಂಗ್ ಯೋಜನೆಯ ಬಹು ವಿಭಾಗಗಳು ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+