BBC: ತುಮಕೂರು-ಬಳ್ಳಾರಿ ರಸ್ತೆ ಯೋಜನೆ ಅಪ್ಡೇಟ್: ಬಿಡ್ ಸಲ್ಲಿಸಿದ 2 ಕಂಪನಿಗಳು, ಶೀಘ್ರವೇ ಅಂತಿಮ

ಬೆಂಗಳೂರಿನ ವ್ಯಾಪ್ತಿಯಲ್ಲಿ ದೀರ್ಘ ಕಾಲದಿಂದ ವಿಳಂಬವಾಗುತ್ತಲೇ ಬಂದಿದ್ದ ಮತ್ತೊಂದು ರಸ್ತೆ ಮೂಲಸೌಕರ್ಯ ಯೋಜನೆಗೆ ವೇಗ ಸಿಕ್ಕಿದೆ. ಈಗಾಗಲೇ ಘೋಷಿಸಿದಂತೆ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC ಅಥವಾ ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆಯು ಮೂರು ಹಂತಗಳಲ್ಲಿ ಅನುಷ್ಠಾನಕ್ಕೆ ಸರ್ಕಾರ ತೀರ್ಮಾನಿಸಿದೆ. ತುಮಕೂರು-ಬಳ್ಳಾರಿ ರಸ್ತೆವರೆಗಿನ ಮೊದಲ ಹಂತದ ಯೋಜನೆಗೆ ಟೆಂಡರ್ ಆಹ್ವಾನಿಸಲಾಗಿದ್ದು, ಪ್ರಮುಖ ಕಂಪನಿಗಳು ಬಿಡ್ ಸಲ್ಲಿಸಿವೆ.

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಬಿಬಿಸಿ ಯೋಜನೆಯು ಬೆಂಗಳೂರಿನ ಮಹತ್ವದ ಮೂಲಸೌಕರ್ಯ ಯೋಜನೆಗಳಲ್ಲಿ ಪ್ರಮುಖವಾಗಿದೆ. ಬಿಬಿಸಿ ಮೊದಲ ಪ್ಯಾಕೇಜ್‌ ಸುಮಾರು 20 ಕಿಲೋ ಮೀಟರ್ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣವಾಗಲಿದೆ. ಸದರಿ ಪ್ಯಾಕೇಜ್-1ರ ತಾಂತ್ರಿಕ ಬಿಡ್‌ಗಳನ್ನು ಶುಕ್ರವಾರ ಅಧಿಕೃತವಾಗಿ ತೆರೆಯಲಾಯಿತು. ಇದರಲ್ಲಿ ಶಂಕರ್ ನಾರಾಯಣ್ ಕನ್‌ಸ್ಟ್ರಕ್ಷನ್ ಮತ್ತು ವಿಶ್ವ ಸಮುದ್ರ ಇಂಜಿನಿಯರಿಂಗ್ ಎಂಬ ಎರಡು ಕಂಪನಿಗಳು ಬಿಡ್ ಸಲ್ಲಿಸಿವೆ.

Bengaluru Business Corridor

ತಿಂಗಳಾಂತ್ಯಕ್ಕೆ ಟೆಂಡರ್ ಅಂತಿಮ

ಇವುಗಳ ಸಲ್ಲಿಸಿರುವ ಬಿಡ್ ಮೊತ್ತು, ತಾಂತ್ರಿಕ ಮೌಲ್ಯಮಾಪನ ನಡೆಸಲಾಗುತ್ತದೆ. ಮುಂದಿನ ಎರಡು ವಾರಗಳಲ್ಲಿ ಹಣಕಾಸು ಬಿಡ್‌ಗಳು ತೆರೆಯುವ ನಿರೀಕ್ಷೆಯಿದೆ. ಮೇ ಅಂತ್ಯಕ್ಕೆ ಯೋಜನೆ ಆರಂಭಕ್ಕೆ ಅಧಿಕೃತ ಪತ್ರ ಹಸ್ತಾಂತರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Sub Urban Rail: ಕನಕ ಕಾರಿಡಾರ್‌ನ ಹುಸ್ಕೂರ್ ನಿಲ್ದಾಣ ಕಾಮಗಾರಿ, ಗರ್ಡರ್ ಅಳವಡಿಕೆ ಯಶಸ್ವಿ
Bengaluru Sub Urban Rail: ಕನಕ ಕಾರಿಡಾರ್‌ನ ಹುಸ್ಕೂರ್ ನಿಲ್ದಾಣ ಕಾಮಗಾರಿ, ಗರ್ಡರ್ ಅಳವಡಿಕೆ ಯಶಸ್ವಿ

ಬಿಬಿಸಿ ಯೋಜನೆ 2029ಕ್ಕೆ ಪೂರ್ಣ ನಿರೀಕ್ಷೆ

ಒಟ್ಟು 73 ಕಿಲೋ ಮೀಟರ್ ಉದ್ದ ಯೋಜನೆ ಇದಾಗಿದೆ. ಎಂಟು ಲೈನ್‌ಗಳ ರಸ್ತೆ ಮಾರ್ಗ ಇದಾಗಲಿದ್ದು, ಪ್ರವೇಶ-ನಿಯಂತ್ರಿತ ಈ ಕಾರಿಡಾರ್ ಅಂದಾಜು 26,786 ಕೋಟಿ ರೂ. ಎನ್ನಲಾಗಿದೆ. ಮೂರು ಪ್ಯಾಕೇಜ್‌ಗಳನ್ನು ಮುಂದಿನ 2029ಕ್ಕೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಭೂಸ್ವಾಧೀನ ಸಮಸ್ಯೆ, ಜಮೀನು ನೀಡಿದ ರೈತರಿಗೆ ಪರಿಹಾರ ವಿತರಣೆ ಸೇರಿ ಹಲವು ಸಮಸ್ಯೆಗಳಿಂದಾಗಿ ವರ್ಷಗಳಿಂದ ಯೋಜನೆ ಆರಂಬಿಸುವುದು ವಿಳಂಬವಾಗಿತ್ತು.

ಇದೇ ಯೋಜನೆಯು ಈ ಹಿಂದೆ "ಬೆಂಗಳೂರು ಪಿಆರ್‌ಆರ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್" ಆಗಿತ್ತು. ಅದೀಗ 2024ರಲ್ಲಿ "ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿಮಿಟೆಡ್" ಎಂದು ಮರುನಾಮಕರಣಗೊಳಿಸಲಾಗಿದೆ.

ಯೋಜನೆಯಿಂದ ಬೆಂಗಳೂರಿಗೆ ಭಾರೀ ಅನುಕೂಲ

'ಮಾದಾವರ ಸಮೀಪದ ತುಮಕೂರು ರಸ್ತೆಯಿಂದ ಆರಂಭವಾಗಿ ಕೊನಪ್ಪನ ಅಗ್ರಹಾರದ ಹೊಸೂರು ರಸ್ತೆಗೆ ನಗರದ ಉತ್ತರ ಮತ್ತು ಪೂರ್ವ ಭಾಗಗಳ ಮೂಲಕ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆ ಇದಾಗಿದೆ. ಈಗಾಗಲೇ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ ಮುಂದೆ ತುಮಕೂರು ರಸ್ತೆ ವರೆಗೆ ನೈಸ್ ರಸ್ತೆ ಇದೆ. ಬಿಬಿಸಿ ನಿರ್ಮಾಣವಾದರೆ ಎರಡು ಕಡೆ ವೃತ್ತಾಕಾರದ ದೊಡ್ಡ ರಸ್ತೆ ಬೆಂಗಳೂರಿಗರಿಗೆ ಸಿಕ್ಕಂತಾಗುತ್ತದೆ.

ಯೋಜನೆಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಭಾಗಿಸಲಾಗಿದ್ದು, ಸಿವಿಲ್ ಕಾಮಗಾರಿಗಳ ಟೆಂಡರ್‌ಗಳು 2026ರ ಆರಂಭದಲ್ಲಿ ಪ್ರಾರಂಭವಾಗಿದ್ದವು. ಪ್ಯಾಕೇಜ್ 1 ಪ್ರಸ್ತುತದಲ್ಲಿ ಕರೆಡೆ ಟೆಂಡರ್ ಅಂತಿಮ ಹಂತಕ್ಕೆ ಬಂದಿದೆ. ಮೂರು ಪ್ಯಾಕೇಜ್‌ಗಳ ವಿವರ ಇಲ್ಲಿದೆ.

Karnataka Weather: ವಾಯು ಚಂಡಮಾರುತ ಪ್ರಸರಣ, ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ
Karnataka Weather: ವಾಯು ಚಂಡಮಾರುತ ಪ್ರಸರಣ, ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

ಮೂರು ಪ್ಯಾಕೇಜ್ ಮಾಹಿತಿ

ಪ್ಯಾಕೇಜ್ 1: ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆವರೆಗೆ (19.8 ಕಿ.ಮೀ). ಅಂದಾಜು ವೆಚ್ಚದ ಸುಮಾರು 3,348 ಕೋಟಿ ರೂಪಾಯಿ

ಪ್ಯಾಕೇಜ್ 2: ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆವರೆಗೆ (18 ಕಿ.ಮೀ).

ಪ್ಯಾಕೇಜ್ 3: ಹಳೆ ಮದ್ರಾಸ್ ರಸ್ತೆಯಿಂದ ಹೊಸೂರು ರಸ್ತೆವರೆಗೆ (27.75 ಕಿ.ಮೀ).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+