ಮೀಸೆ ಚಿಗುರುವ ವಯಸ್ಸಿನಲ್ಲಿ ಟಿ-20 ಕ್ರಿಕೆಟ್‌ನಲ್ಲಿ 100 ಸಿಕ್ಸ್‌ ಸಿಡಿಸಿ ದಾಖಲೆ ಬರೆದ ವೈಭವ್ ಸೂರ್ಯವಂಶಿ

RR Vs GT IPL 2026: ಜೈಪುರದಲ್ಲಿ ಶನಿವಾರ (ಮೇ 9) ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 77 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ನಾಯಕ ಶುಭ್‌ಮನ್ ಗಿಲ್‌, ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ಹಾಗೂ ರಶೀದ್ ಖಾನ್, ಜೇಸನ್ ಹೋಲ್ಡರ್ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಜಿಟಿ ಈ ಗೆಲುವು ಸಾಧಸಿದೆ. ಮತ್ತೊಂದೆಡೆ ಸೋಲಿನ ನಡುವೆಯೂ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ 100 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ಬರೆದರು.

ಟಾಸ್‌ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಯಶಸ್ವಿ ಜೈಸ್ವಾಲ್‌ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಗುಜರಾತ್ ಟೈಟಾನ್ಸ್‌ ನಾಯಕ ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಭರ್ಜರಿ ಅರ್ಧಶತಕಗಳ ನಡವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 229 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ 230 ರನ್‌ಗಳ ಗುರಿ ಮುಟ್ಟುವಲ್ಲಿ ವಿಫಲವಾಗುವ ಮೂಲಕ ಆರ್‌ಆರ್‌ ಹೀನಾಯ ಸೋಲನುಭವಿಸಿತು.

GT Crush RR by 77 Runs as Shubman Gill Shines Vaibhav Suryavanshi Creates Historic T20 Record

ಮಿಂಚಿದ ಗಿಲ್‌, ಸಾಯಿ ಸುದರ್ಶನ್‌

ಜಿಟಿ ಪರ ಬ್ಯಾಟ್‌ ಬೀಸಿದ ನಾಯಕ ಶುಭ್‌ಮನ್ ಗಿಲ್‌ 44 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ 84 ರನ್‌ ಚಚ್ಚಿದರೆ, ಸಾಯಿ ಸುದರ್ಶನ್‌ 36 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 55 ರನ್‌ ಸಿಡಿಸಿ ಉತ್ತಮ ಆರಂಭ ನೀಡಿ ರನ್‌ ವೇಗ ಹೆಚ್ಚಿಸಿದರು. ವಾಷಿಂಗ್‌ಟನ್‌ ಸುಂದರ್ ಅಜೇಯ 37, ರಾಹುಲ್‌ ತೆವಾಟಿಯಾ ಅಜೇಯ 14 ರನ್‌ಗಳ ಕೊಡುಗೆ ನೀಡಿ ತಂಡದ ಮೊತ್ತವನ್ನು 229ಕ್ಕೆ ಏರಿಸಿದರು.

ತತ್ತರಿಸಿದ ಆರ್‌ಆರ್‌ ಬೌಲಿಂಗ್ ಪಡೆ

ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ (44 ಎಸೆತಗಳಲ್ಲಿ 84 ರನ್) ನೆರವಿನಿಂದ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆರ್‌ಆರ್ ಪರ ಬೌಲಿಂಗ್ ಮಾಡಿದ ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ ಹೆಚ್ಚು ರನ್‌ ನೀಡಿದ ದುಬಾರಿಯಾದರು. ಉಳಿದ ಬೌಲರ್‌ಗಳು ಸಹ ರನ್‌ ನಿಯಂತ್ರಿಸಲು ವಿಫಲರಾದರು.

ರಾಜಸ್ಥಾನ್ ರಾಯಲ್ಸ್‌ ಪರ ಬೌಲಿಂಗ್ ಮಾಡಿದ ತುಷಾರ್ ದೇಶಪಾಂಡೆ 4 ಓವರ್‌ ಎಸೆದು ಯಾವುದೇ ವಿಕೆಟ್‌ ಇಲ್ಲದೆ 52 ರನ್‌ ಬಿಟ್ಟುಕೊಟ್ಟರೆ, ಜೋಪ್ರಾ ಆರ್ಚರ್ 3 ಓವರ್‌ ಎಸೆದು ಶೂನ್ಯ ವಿಕೆಟ್‌ಗೆ 46 ರನ್‌ ನೀಡಿದರು. ಉಳಿದಂತೆ ಬ್ರಿಜೇಶ್ ಶರ್ಮಾ 4 ಓವರ್‌ ಎಸೆದು 47 ರನ್‌ ನೀಡಿ 2 ವಿಕೆಟ್‌ ಕಿತ್ತರು, ಯಶ್‌ ರಾಜ್ ಪೂಂಜಾ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಪಡೆದರು.

ಸೋಲಿನ ನಡುವೆಯೂ ದಾಖಲೆ ಬರೆದ ವೈಭವ್

ಜಿಟಿ ನೀಡಿದ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 16.3 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ತಂಡದ ನಾಯಕತ್ವವನ್ನು ಹಂಗಾಮಿ ನಾಯಕ ಯಶಸ್ವಿ ಜೈಸ್ವಾಲ್ ವಹಿಸಿದ್ದರು. ರಾಜಸ್ಥಾನ್ ತಂಡದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಕೇವಲ 16 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್‌ಗಳ ಸಹಿತ 36 ರನ್ ಬಾರಿಸಿದರು. ಈ ಮೂಲಕ ಅವರು ಟಿ20 ಇತಿಹಾಸದಲ್ಲೇ ಅತಿ ವೇಗವಾಗಿ 100 ಸಿಕ್ಸರ್‌ಗಳನ್ನು ಸಿಡಿಸಿದ ದಾಖಲೆ ನಿರ್ಮಿಸಿದರು. ಆದರೆ ಅವರು ಔಟಾದ ಬೆನ್ನಲ್ಲೇ ರಾಯಲ್ಸ್ ಬ್ಯಾಟಿಂಗ್‌ಗೆ ಭಾರಿ ಹೊಡೆತ ಬಿದ್ದಿದ್ದು, ಸಾಲು ವಿಕೆಟ್‌ಗಳು ಉರುಳಿದವು.

ಗುಜರಾತ್ ಟೈಟಾನ್ಸ್‌ ಪರ ರಶೀದ್ ಖಾನ್ 4 ವಿಕೆಟ್ ಪಡೆದು ಮಿಂಚಿದರೆ, ಜೇಸನ್ ಹೋಲ್ಡರ್ 3, ಕಗಿಸೊ ರಬಾಡ 2 ಮತ್ತು ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು. ಇದು ಗುಜರಾತ್ ಟೈಟಾನ್ಸ್ ತಂಡಕ್ಕೆ ಸತತ ನಾಲ್ಕನೇ ಗೆಲುವಾಗಿದ್ದು, ಈ ಮೂಲಕ 14 ಪಾಂಯಿಂಟ್ಸ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ತಂಡವು ಎರಡನೇ ಸ್ಥಾನಕ್ಕೇರಿದೆ. ಆದರೆ ಇದೆಲ್ಲರದ ನಡುವೆ ಗಮನ ಸೆಳೆದಿದ್ದು ಮಾತ್ರ 15 ವರ್ಷದ ವೈಭವ್ ಸೂರ್ಯವಂಶಿ ಟಿ-20 ಕ್ರಿಕೆಟ್‌ನಲ್ಲಿ ಶತಕ ಸಿಕ್ಸರ್‌ಗಳನ್ನು ಪೂರೈಸಿದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+