ಸಿನಿಮಾ ನೋಡಿ ಕೆಲಸ ಬಿಟ್ಟ ಮಹಿಳೆ, ಮುಂದೆ ಆಗಿದ್ದೇನು?

ಸಿನಿಮಾ, ಸೀರಿಯಲ್‌ಗಳನ್ನೇಲ್ಲ ನೋಡಿ ಅಲ್ಲಿಯ ಯಾವುದೋ ಒಂದು ಪಾತ್ರವನ್ನು ಮೆಚ್ಚಿಕೊಂಡು, ಅದರಿಂದ ಪ್ರಭಾವಿತರಾಗುವ ಜನ ತಮ್ಮ ಜೀವನವನ್ನೇ ಬದಲಾಯಿಸಿಕೊಳ್ಳುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇ ಇದೆ. ಹಾಗೆಯೇ ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಬಹು ಬೇಗನೇ ವೈರಲ್ ಆಗುತ್ತವೆ. ಏಕೆಂದರೆ ಇಂತಹ ಘಟನೆಗಳು ನಮ್ಮದೇ ಜೀವನದ ಕಥೆಯಂತೆ ಭಾಸವಾಗುತ್ತವೆ. ಇದೀಗ ಇಂಥದ್ದೇ ಒಂದು ಘಟನೆ ಎಕ್ಸ್ ಖಾತೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹರ್ಷ ಎಂಬುವವರು ಹಂಚಿಕೊಂಡಿರುವ ಪೋಸ್ಟ್ ಒಂದರಲ್ಲಿ, ಮಹಿಳೆಯೊಬ್ಬರು ಸಿನಿಮಾವೊಂದರಿಂದ ಪ್ರೇರೇಪಿತರಾಗಿ ತಮ್ಮ ಕೈತುಂಬಾ ಸಂಬಳ ತರುತ್ತಿದ್ದ ಕಾರ್ಪೊರೇಟ್ ಕೆಲಸವನ್ನು ಬಿಟ್ಟಿದ್ದರು. ಆದರೆ, ನಂತರ ಎದುರಾದ ಆರ್ಥಿಕ ಸಂಕಷ್ಟದಿಂದಾಗಿ ಅವರು ಈಗ ಮತ್ತೆ ಉದ್ಯೋಗದ ಹುಡುಕಾಟದಲ್ಲಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

Woman Quits Job

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಹರ್ಷ, ಎರಡು ವರ್ಷಗಳ ಗ್ಯಾಪ್ ನಂತರ ಸಂದರ್ಶನಕ್ಕೆ ಹಾಜರಾಗುತ್ತಿದ್ದ 30ರ ಹರೆಯದ ಮಹಿಳೆಯೊಬ್ಬರನ್ನು ಭೇಟಿಯಾದ ಬಗ್ಗೆ ವಿವರಿಸಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್ ಮೂಲಕ ಕೆಲಸ ಗಿಟ್ಟಿಸಿಕೊಂಡಿದ್ದ ಆಕೆ, ಸತತ ಆರು ವರ್ಷಗಳ ಕಾಲ ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ್ದರು. ಆದರೆ, ಒಮ್ಮೆ 'ತಮಾಷಾ' ಸಿನಿಮಾ ನೋಡಿದ ನಂತರ ಅವರ ಜೀವನದ ದಿಕ್ಕೇ ಬದಲಾಯಿತು. ಆ ಸಿನಿಮಾದಿಂದ ಪ್ರಭಾವಿತರಾದ ಅವರು, ತಾನೊಬ್ಬ ಕಲಾವಿದೆಯಾಗಬೇಕು, ಪೂರ್ಣ ಪ್ರಮಾಣದಲ್ಲಿ ಚಿತ್ರಕಲೆಯಲ್ಲಿಯೇ ತೊಡಗಿಕೊಳ್ಳಬೇಕು ಎಂದು ನಿರ್ಧರಿಸಿ ಕೆಲಸಕ್ಕೆ ರಾಜೀನಾಮೆ ನೀಡಿದರು. ಬಳಿಕ ಕಲಾ ವಿಭಾಗದಲ್ಲಿ ಡಿಪ್ಲೊಮಾ ಕೂಡ ಪೂರ್ಣಗೊಳಿಸಿದರು ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಸ್ಫೂರ್ತಿ, ಬದಲಾದ ಬದುಕು

2015ರಲ್ಲಿ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಮೂಡಿಬಂದಿದ್ದ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ತಮಾಷಾ' ಸಿನಿಮಾ, ಮನುಷ್ಯನ ಅಸ್ತಿತ್ವ, ದಿನನಿತ್ಯದ ಜಂಜಾಟ ಹಾಗೂ ಪ್ಯಾಷನ್ ಮತ್ತು ಸಮಾಜದ ನಿರೀಕ್ಷೆಗಳ ನಡುವಿನ ಹೋರಾಟದ ಸುತ್ತ ಸುತ್ತುತ್ತದೆ. ಈ ಕಥಾಹಂದರ ಆ ಮಹಿಳೆಯ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ, ವೃತ್ತಿಜೀವನವನ್ನೇ ತೊರೆದು ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಲಾಕೃತಿಗಳ ಪ್ರದರ್ಶನ ಹಾಗೂ ಪೇಂಟಿಂಗ್ ಮಾರಾಟದ ಮೂಲಕ ತಮ್ಮ ಕನಸಿನ ವೃತ್ತಿಯನ್ನು ಕಟ್ಟಿಕೊಳ್ಳಲು ಯತ್ನಿಸಿದರು.

ಆರಂಭದಲ್ಲಿ ಈ ಕೆಲಸ ಅವರಿಗೆ ಬಹಳ ಖುಷಿ ಹಾಗೂ ನೆಮ್ಮದಿ ನೀಡಿತ್ತು. ಆದರೆ, ದಿನ ಕಳೆದಂತೆ ಅವರ ಆರ್ಥಿಕ ಪರಿಸ್ಥಿತಿ ಹದಗೆಡತೊಡಗಿತು. ಅವರ ಜೀವನಶೈಲಿಯನ್ನು ನಿಭಾಯಿಸಲು ಚಿತ್ರಕಲೆಯಿಂದ ಬರುತ್ತಿದ್ದ ಆದಾಯ ಸಾಕಾಗಲಿಲ್ಲ. ಪ್ಯಾಷನ್‌ನಿಂದ ಶುರುವಾದ ಈ ಪಯಣ ಆರ್ಥಿಕವಾಗಿ ಬಹಳ ಕಷ್ಟಕರವಾಯಿತು. ಕೊನೆಗೆ ವಾಸ್ತವ ಅರಿವಾದ ನಂತರ, ಆರ್ಥಿಕ ಭದ್ರತೆಗಾಗಿ ಅವರು ಮತ್ತೆ ಕಾರ್ಪೊರೇಟ್ ಕಂಪನಿಗಳ ಸಂದರ್ಶನಗಳಿಗೆ ಹಾಜರಾಗಲು ಆರಂಭಿಸಿದ್ದಾರೆ.

ಅವರು ಪ್ರಯತ್ನ ಪಡಲಿಲ್ಲ ಎಂಬ ಯಾವುದೇ ಪಶ್ಚಾತ್ತಾಪ ಅವರಿಗಿಲ್ಲ. ಆದರೆ, 30ನೇ ವಯಸ್ಸಿನಲ್ಲಿ ಮತ್ತೆ ಕಾರ್ಪೊರೇಟ್ ಜಗತ್ತಿಗೆ ಮರಳುವುದು ಖಂಡಿತಾ ಸುಲಭವಲ್ಲ ಎಂದು ಹರ್ಷ ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ನೆಟ್ಟಿಗರ ಪರ-ವಿರೋಧ ಚರ್ಚೆ

ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. "ಯಾವುದೇ ಪ್ಯಾಷನ್ ಆದರೂ ಅದರಿಂದ ಬರುವ ಆದಾಯವನ್ನು ಅಳೆಯುವುದು ಬಹಳ ಮುಖ್ಯ. 'ಇಕಿಗೈ' (Ikigai) ಪರಿಕಲ್ಪನೆಯಂತೆ ಕೌಶಲ್ಯ, ಆಸಕ್ತಿ ಮತ್ತು ಆರ್ಥಿಕ ಭದ್ರತೆ ಮೂರೂ ಒಟ್ಟಿಗೆ ಸಾಗಬೇಕು" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಸೃಜನಶೀಲ ವೃತ್ತಿಗಳಲ್ಲಿ ಯಶಸ್ಸು ಸಾಧಿಸಲು ಹಲವು ವರ್ಷಗಳ ಸತತ ಪ್ರಯತ್ನ ಬೇಕು. ಕೇವಲ ಎರಡು ವರ್ಷಗಳಲ್ಲಿ ಫೈನ್ ಆರ್ಟ್ಸ್‌ನಂತಹ ಕ್ಷೇತ್ರವನ್ನು ನಿರ್ಣಯಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಇನ್ನು ಕೆಲವರು ಕೋವಿಡ್ ಸಮಯದಲ್ಲಿ ಕೆಲಸ ಬಿಟ್ಟು ಫೋಟೋಗ್ರಾಫರ್ ಆಗಿ ಯಶಸ್ವಿಯಾದ ತಮ್ಮದೇ ಕಥೆಗಳನ್ನು ಹಂಚಿಕೊಂಡಿದ್ದಾರೆ.

ಯಾವುದು ಸರಿ, ಯಾವುದು ತಪ್ಪು ಎಂದು ಹೇಳುವುದು ತಮ್ಮ ಉದ್ದೇಶವಾಗಿರಲಿಲ್ಲ, ಬದಲಿಗೆ ಇಂತಹ ನಿರ್ಧಾರಗಳಿಂದ ಎದುರಾಗಬಹುದಾದ ಎರಡೂ ಸಾಧ್ಯತೆಗಳನ್ನು ತೋರಿಸುವುದಷ್ಟೇ ತಮ್ಮ ಉದ್ದೇಶ ಎಂದು ಹರ್ಷ ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ ಈ ಘಟನೆಯು ಇಂದಿನ ಯುವ ವೃತ್ತಿಪರರು ಎದುರಿಸುತ್ತಿರುವ ಅತಿದೊಡ್ಡ ಗೊಂದಲವನ್ನು ಮುನ್ನೆಲೆಗೆ ತಂದಿದೆ. ಆಸಕ್ತಿಯ ಕ್ಷೇತ್ರ ಹಾಗೂ ಆರ್ಥಿಕ ಭದ್ರತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಇಂದಿನ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿದೆ ಎಂಬುದನ್ನು ಇದು ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+