• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಬಾನುಲಿಯಲ್ಲಿ ಡಾ. ಗುರುಲಿಂಗ ಕಾಪಸೆ

By Staff
|

Dr. Gurulinga Kapseಖ್ಯಾತ ಸಾಹಿತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಗುರುಲಿಂಗ ಕಾಪಸೆ ಅವರೊಂದಿಗೆ ಕನ್ನಡದಲ್ಲಿ ನಡೆಸಿದ ಸಂದರ್ಶನ ಸ್ಯಾನ್‌ಫ್ರಾನ್ಸಿಸ್ಕೊದ ಎಫ್ ಎಂ ರೇಡಿಯೊದಲ್ಲಿ ಆಗಸ್ಟ್ 6ರಂದು ಬೆಳಿಗ್ಗೆ ಬಿತ್ತರವಾಗಲಿದೆ. ಕನ್ನಡದ ಕವಿಗಳು, ಕವಿತೆಗಳು ಮತ್ತು ಭಾವಗೀತೆಗಳ ಬಗ್ಗೆ ವಿಚಾರ ವಿನಿಮಯ ಮಾಡುವುದು ಇದರ ಉದ್ದೇಶ. ಕೇಳಲು ಮರೆಯದಿರಿ.

ಕಾರ್ಯಕ್ರಮದ ವಿವರ ಕೆಳಗಿನಂತಿದೆ:

ಬಾನುಲಿ ಕೇಂದ್ರ: ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಬೇ ಏರಿಯ]
ಇಂಟರ್ನೆಟ್ ಮೂಲಕ: http://www.itsdiff.com
ದಿನಾಂಕ: ಆಗಸ್ಟ್ 6 2008, ಬುಧವಾರ
ಸಮಯ: ಬೆಳಗ್ಗೆ 7.30ರಿಂದ 8.30ರವರೆಗೆ. (ಕ್ಯಾಲಿಫೋರ್ನಿಯ ಸಮಯ) [7.30 AM to 8.30 AM PST]
ನಿರ್ವಾಹಕರು: ಮಧು ಕೃಷ್ಣಮೂರ್ತಿ

ಈ ಕಾರ್ಯಕ್ರಮವನ್ನು ನೀವು ಅಂತರ್ಜಾಲದ ಮೂಲಕ ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು. ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಕರೆ ಮಾಡಿ ನೀವೂ ಸಹ ಭಾಗವಹಿಸಿ. ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು : http://www.itsdiff.com/Kannada.html

ಗುರುಲಿಂಗ ಕಾಪಸೆಯವರ ಬಗ್ಗೆ

ಜೀವನ ಪರಿಚಯ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಸಂಪಾದನೆ ವಿಭಾಗದಲ್ಲಿ ಅಪಾರ ಸಾಹಿತ್ಯ ಕೃಷಿ ಮಾಡಿರುವ ಡಾ. ಗುರುಲಿಂಗ ಕಾಪಸೆಯವರು ಅಕ್ಷರಯೋಗಿ. ಅವರು ಜನಿಸಿದ್ದು ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಲೋಣಿ ಗ್ರಾಮದಲ್ಲಿ 1928ರ ಏಪ್ರಿಲ್ 2ರಂದು.

ಡಾ. ಗುರುಲಿಂಗ ಕಾಪಸೆಯುವರದು ಸಾಹಿತ್ಯ ದುಡಿಮೆಯ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಕಾಲದ ಅವಿರತ ದುಡಿಮೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎ ಮತ್ತು ಬಂಗಾರದ ಪದಕದ ಸಹಿತ ಸ್ನಾತಕೋತ್ತರ ಪದವಿ ಗಳಿಸಿರುವ ಕಾಪಸೆಯವರು ಇದೇ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಪಿ.ಎಚ್ ಡಿ ಕೂಡ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಬೆಳಗಾವಿಯ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಮೇಷ್ಟ್ರು, ಪ್ರೊಫೆಸರಾಗಿ ವಿದ್ಯಾರ್ಥಿಗಳ ಜ್ಞಾನದಾಹವನ್ನು ಇಂಗಿಸಿದ್ದಾರೆ. ಇಲ್ಲಿಯೇ ಅವರು ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಬೆಂಗಳೂರಿನೊಂದಿಗೆ ನಂಟಸ್ತನ ಕಾಪಸೆಯವರು ಹೊಂದಿದ್ದಾರೆ.

ಕಾಪಸೆಯವರು ಒಟ್ಟು 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಸಂಪಾದಿಸಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದ 300ಕ್ಕೂ ಹೆಚ್ಚಿನ ಲೇಖನಗಳು ಇಲ್ಲಿಯವರೆಗೆ ಪ್ರಕಟವಾಗಿವೆ. ಮಧುರಚೆನ್ನ, ಬೇಂದ್ರೆ-ಮಧುರಚೆನ್ನ ಸಖ್ಯಯೋಗ, ಸಾಹಿತ್ಯ ಪ್ರಬಂಧ, ಅಕ್ಕಮಹಾದೇವಿ, ಬಸವೇಶ್ವರ, ಶ್ರೀ ಅರವಿಂದರು ಮತ್ತು ತಪೋವನದ ತಪಸ್ವಿ ಕಾಪಸೆಯವರ ಪ್ರಮುಖ ಕೃತಿಗಳು. ಪಾರಮಾರ್ಥ ಗೀತಾಪ್ರವಚನ, ಭವ್ಯಮಾನವ ಕಾವ್ಯದರ್ಶನ, ಚಾಮರಸ, ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ), ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ ಮತ್ತು ಚೆಂಬೆಳಕು ಅವರ ಪ್ರಮುಖ ಸಂಪಾದಿತ ಕೃತಿಗಳು. ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ) ಮತ್ತು ಬಸವೇಶ್ವರಾಂಚಿ ವಚನ (ಕನ್ನಡದಿಂದ ಮರಾಠಿಗೆ) ಅನುವಾದಗೊಂಡ ಕೃತಿಗಳು.

ಅನೇಕ ಪ್ರಶಸ್ತಿಗಳು ಕೂಡ ಅವರನ್ನು ಹುಡುಕಿಕೊಂಡು ಬಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮತ್ತು ಫೆಲೋಷಿಪ್, ಮಾಳವಾಡ ಪ್ರಶಸ್ತಿ, ಆನಂದಕಂದ ಪ್ರಶಸ್ತಿ, ವರದರಾಜ ಆದ್ಯ ಪ್ರಶಸ್ತಿಗಳಿಗೆ ಕಾಪಸೆಯವರು ಭಾಜನರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X