ಚೈತ್ರಾ ರವಿಶಂಕರ್ ಧ್ವನಿ ಮುದ್ರಿಕೆ ಬಿಡುಗಡೆ

Chaitra Ravishankar music album releasedಅಕ್ಲೆಂಡ್‌ನ ಸ್ಟಾರ್ ಶಿಪ್ ಆಸ್ಪತ್ರೆ ಗಂಭೀರ ರೋಗಪೀಡಿತ ಮಕ್ಕಳ ಚಿಕಿತ್ಸೆಗಾಗಿ ಸ್ಥಾಪಿಸಲಾದ ಒಂದು ಸಂಸ್ಥೆ. ಇಲ್ಲಿ ಚಿಕಿತ್ಸೆ ಪಡೆಯುವ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ನಿಧಿ ಸಂಗ್ರಹಿಸಲು ಕಳೆದ ಎರಡು ವರ್ಷಗಳಿಂದ ನಡೆಸಲಾಗುತ್ತಿರುವ ಹಳೆಯ ಜನಪ್ರಿಯ ಹಿಂದಿ ಸಿನಿಮಾ ಹಾಡುಗಳ ಕಾರ್ಯಕ್ರಮಒಲ್ಡ್ ಇಸ್ ಗೊಲ್ಡ್. ಇದನ್ನು ಆಯೋಜಿಸುತ್ತಿರುವವರು ಸ್ಥಳೀಯ ಮೊಹಮ್ಮದ್ ರಫಿ ಅಕಾಡಮಿ ಅಫ್ ಮ್ಯೂಸಿಕ್ ಹಿಂದೂಸ್ಥಾನಿ ಸಂಗೀತ ಶಾಲೆಯ ಅಮಿತ್ ಸೆನ್ ಗುಪ್ತ. ಅಮಿತ್ ಅವರ ಶಿಷ್ಯ ವೃಂದದಲ್ಲಿ ಕನ್ನಡಿಗರಾದ ಚೈತ್ರಾ ರವಿಶಂಕರ್ ಮತ್ತು ಅಖಿಲಾ ಸತೀಶ್ ಪುತ್ತಿಗೆ ಅವರು ಇರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

13ನೇ ಸೆಪ್ಟೆಂಬರ್ ಶನಿವಾರ ಅಕ್ಲೆಂಡ್‌ನ ಡೊರೊತಿ ವಿನ್ಸ್ಟನ್ ಸಭಾಂಗಣದಲ್ಲಿ ನಡೆದ ಒಲ್ಡ್ ಇಸ್ ಗೊಲ್ಡ್ ಭಾಗ-2 ಕಾರ್ಯಕ್ರಮ ದಿ. ಮೊಹಮ್ಮದೇ ರಫಿ ಹಾಡಿದ್ದ ಶಿರಡಿವಾಲೆ ಸಾಯಿಬಾಬ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಶ್ರೋತೃಗಳಿಗೆ ಸುಮಾರು ನಾಲ್ಕು ಗಂಟೆಗಳ ಕಾಲ ಹಿಂದಿ ಚಲನಚಿತ್ರ ಸಂಗೀತದ ಸುವರ್ಣ ಯುಗದ ಹಾಡುಗಳ ರಸದೌತಣ ನೀಡಿತು. ರಫಿ, ಮುಕೇಶ್, ಮನ್ನಾಡೇ, ಕಿಶೋರ್ ಕುಮಾರ್, ರಾಹುಲ್ ದೇವ್ ಬರ್ಮನ್, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಅವರುಗಳ ಗಾಯನದ ಸುಮಧುರ ಗೀತೆಗಳನ್ನು ಭಾವಪೂರ್ಣವಾಗಿ ಅಮಿತ್ ಮತ್ತು ತಂಡ ಹಾಡಿತು. ಹಾಡಿದ ಗಾಯಕ ಗಾಯಕಿಯರು ಮತ್ತು ವಾದ್ಯ ಸಂಗೀತದ ನೆರವು ನೀಡಿದ ಕಲಾವಿದರು ನಿಜಕ್ಕೂ ಅಭಿನಂದನಾರ್ಹರು.

ತಲಾ ನಾಲ್ಕು ಹಾಡು ಹಾಡಲು ಅವಕಾಶ ಪಡೆದ ಚೈತ್ರ ಮತ್ತು ಅಖಿಲಾ ತಮ್ಮ ಮಧುರ ಕಂಠ ಹಾಗೂ ಪ್ರಭುದ್ಧ ಗಾಯನದಿಂದ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮ ನಿರೂಪಣೆ ನಡೆಸುತ್ತಿದ್ದ ಖ್ಯಾತ ದೂರದರ್ಶನ ಹಾಗೂ ರೇಡಿಯೊ ನಿರೂಪಕಿ ರೂಪ ಸಚ್‌ದೇವ್ ಅವರು ಚೈತ್ರಾ ಅವರ ಬಗ್ಗೆ, ನಿಜಕ್ಕೂ ಇವಳ ಕಂಠದಲ್ಲಿ ಮಾತೆ ಸರಸ್ವತಿ ನೆಲೆಸಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧ್ವನಿಮುದ್ರಿಕೆ ಬಿಡುಗಡೆ : ಚೈತ್ರಾ ರವಿಶಂಕರ್ ಈಗಾಗಲೇ ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ್ದು ನ್ಯೂಜಿಲೆಂಡ್ ಕನ್ನಡ ಕೂಟ, ಭಜನ್ ಸತ್ಸಂಗ ಮುಂತಾದ ಹಲವಾರು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಾಡಿ ಭಾರತೀಯ ಸಂಗೀತ ಪ್ರಿಯರಿಗೆ ಚಿರಪರಿಚಿತರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಮಿತ್ ಸೆನ್ ಗುಪ್ತ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾರೆ. ಚೈತ್ರಾ ಅವರು ಸಂತ ಸುರ್ ದಾಸ್, ಕಬೀರ್‌ದಾಸ್, ಗುರು ನಾನಕ್, ತುಳಸಿ ದಾಸ್, ಮೀರಾಬಾಯಿ ಇವರುಗಳ ಒಟ್ಟು ಹತ್ತು ಕೃತಿಗಳನ್ನು ಹಾಡಿರುವ ರಾಮ್ ರತನ್ ಧನ್ ಪಾಯೊ ಧ್ವನಿ ಮುದ್ರಿಕೆಯನ್ನು ಕಾರ್ಯಕ್ರಮದ ನಡುವೆ ಬಿಡುಗಡೆ ಮಾಡಲಾಯಿತು.

ತಮಗೆ ಸಂಗೀತ ಕಲಿಸಿದ ಅಮಿತ್ ಸೆನ್ ಗುಪ್ತಾ, ಯಾಮಿನಿ ರಮೇಶ್ ಮತ್ತು ವಿದ್ವಾನ್ ಎಂ. ಡಿ. ದಿವಾಕರ್ ಅವರನ್ನು ವಂದಿಸಿದ ಚೈತ್ರಾ ಅವರು ತಮ್ಮ ತಾಯಿ ಉಷಾ ಹಾಗೂ ತಂದೆ ರವಿಶಂಕರ್ ಅವರು ನೀಡುತ್ತಿರುವ ಪ್ರೋತ್ಸಾಹವೇ ನನ್ನನ್ನು ಬೆಳೆಸುತ್ತಿದೆ ಎಂದರು. ಈವರೆಗೆ ಸಿನಿಮಾ ಹಾಡುಗಳು ಮತ್ತು ಸುಗಮ ಸಂಗೀತ ಹಾಡುತ್ತಿದ್ದ ಚೈತ್ರಾ ಒಬ್ಬ ಪ್ರಭುದ್ದ ಶಾಸ್ತ್ರೀಯ ಸಂಗೀತ ಗಾಯಕಿಯಾಗಿ ಬೆಳೆದಿರುವುದನ್ನು ರಾಮ್ ರತನ್ ಧನ್ ಪಾಯೊ ಧ್ವನಿ ಮುದ್ರಿಕೆ ಧೃಡಪಡಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+