• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಗೆ ನೋಡಿದರೆ, ಅಮೀಬಾ ‘ಸನ್ಯಾಸಿ’ಯೇನಲ್ಲ?

By ರಾಜಾರಾಮ್ ಕಾವಳೆ
|

ಈ ಸೃಷ್ಟಿಯು ದೇವರಕ್ರಿಯೆಯೇ ಅಥವ ನಾಸ್ತಿಕಕ್ರಿಯೆಯೇ ಎಂಬ ವಾದ ವಿವಾದಗಳಿಗೆ ಹೋಗದೆ ಇದನ್ನು ಯೋಚನೆಮಾಡೋಣ. ಅಂದರೆ, creation theory ಮತ್ತು evolutionary theory ಈ ಎರಡನ್ನೂ ಅನುಸರಿಸಿ ನೋಡಿದರೆ ನಮಗೆ ದೇವರ ಅಥವ ಪ್ರಕೃತಿಯ ಜಾಣ್ಮೆ ತಿಳಿಯುತ್ತದೆ. ಲೈಂಗಿಕ ಭಾವನೆಯು ಹಲವಾರು ಭಾವನೆಗಳಲ್ಲೊಂದು. ನಮಗೆಲ್ಲರಿಗೂ ತಿಳಿದಂತೆ, ನಮ್ಮ ಹಿರಿಯರು ನಮ್ಮ ಮನೋಭಾವನೆಗಳನ್ನು ಹೀಗೆ ವಿಂಗಡಿಸಿದ್ದಾರೆ. ಅವುಗಳಾವುವೆಂದರೆ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ. ಈ ಮನೋವಿಕಾಸಗಳನ್ನು ಅನುಭವಿಸಬೇಕಾಗಿದ್ದರೆ, ನಮಗೆ ಅಹಂಭಾವನೆಯು ಅಗತ್ಯ. ಈ ‘ಅಹಂ’ ಕಾರವೇ ಈ ಎಲ್ಲಾ ಭಾವನೆಗಳನ್ನು ಅನುಭವಿಸುವುದು.

ಅಂದರೆ ಈ ಅಹಂಕಾರವು ಎಲ್ಲಾ ಜೀವಿಗಳಿಗೆ ಇದೆಯೇ ಎಂಬ ಇನ್ನೊಂದು ಪ್ರಶ್ನೆ ಬರುತ್ತದೆ. ಮಾನವರಿಗೆಲ್ಲಾ ಈ ‘ಅಹಂ’ ಕಾರವು feeling of self ಇದೆ ಎಂದು ಎಲ್ಲರಿಗೂ ಗೊತ್ತು. ಕೆಲವರಿಗೆ ಈ ಅಹಂಕಾರ ಜಾಸ್ತಿ ಇರಬಹುದು ಎಂಬ ವಿಚಾರ ಬೇರೆ! ಅಮೀಬಾ ತರಹ ಏಕಕಣ ಜೀವಿಗಳಿಗೆ (unicellular Organisms) ಈ ಅಹಂಭಾವನೆಯು ಗೂಢವಾಗಿರಬಹುದು ಅಂದರೆ ಅವ್ಯಕ್ತವಾಗಿರಬಹುದು (latent or unmanifest). ಆದರೆ ಏಕಕಣ ಜೀವಿಗಳು ಅವುಗಳ ಏಳಿಗೆಯಲ್ಲಿ ಬಹುಕಣಜೀವಿಗಳಾಗಿ ಮಾರ್ಪಾಟಾದಾಗ, ಅವುಗಳಿಗೆ ಈ ಅಹಂಕಾರವು ವ್ಯಕ್ತವಾಗಬಹುದು. ಅಮೀಬಾದ ಮುಂದಿನ ಹಂತದಲ್ಲಿರುವ ಹೈಡ್ರಾ ಎಂಬ ಜೀವಿಯು ಬಹುಕಣದ ಜೀವಿಯಾಗಿದೆ. ಈ ಹೈಡ್ರಾದಲ್ಲಿ ಅನೇಕ ಏಕಕಣಗಳು ಒಂದೇ ಪದರದಲ್ಲಿ ರಚಿತವಾಗಿರುತ್ತವೆ. ಈ ಬಹುಕಣದ ಜೀವಿಯು ತನ್ನ ಆಹಾರದೆಡೆಗೆ ಮುಂದಕ್ಕೆ ಚಲಿಸುತ್ತದೆ. ಅಮೀಬಾ ತರಹ ಯದ್ವಾತದ್ವವಾಗಿ ಚಲಿಸದೆ, ಒಂದು ಶಿಸ್ತಿನಿಂದ ಹೈಡ್ರಾ ತನ್ನ ಆಹಾರದೆಡೆಗೆ ಚಲಿಸುತ್ತದೆ. ಅಂದರೆ ಇದಕ್ಕೆ ಒಂದು ಮನೋಧ್ಯೇಯವಿರುತ್ತದೆ. ಅಂದರೆ ಅದರ ಅಹಂಭಾವ ಅಮೀಬಾಗಿಂತ ಸ್ವಲ್ಪ ಹೆಚ್ಚಿನ ಹಂತದಲ್ಲಿ ವ್ಯಕ್ತವಾಗಿರುತ್ತದೆ.

ಇದೇ ವಾದವನ್ನು ಮುಂದುವರಿಸಿ ನಮ್ಮ ಮಾನವ ಜೀವಿಗೆ ಅನುವಹಿಸಿದರೆ, ನಮ್ಮ ಅಹಂಭಾವವು ಅತ್ಯಂತ ಉನ್ನತ ರೀತಿಯಲ್ಲಿ ಮಾರ್ಪಾಡಾಗಿರುವಂತೆ ಕಾಣಿಸುತ್ತದೆ. ನಮ್ಮ ಅಂಗಾಂಗಳನ್ನು ಒಂದೊಂದಾಗಿ ತೆಗೆದುಕೊಂಡರೆ, ಅವುಗಳಿಗೂ ಈ ಸ್ವಾತಂತ್ರ್ಯದ ಅಹಂಕಾರಗಳು ಇವೆಯೇ ಎಂಬ ವಿಚಾರವು ಬರುತ್ತದೆ. ಅದನ್ನು ನಾವು ಸ್ವಯಂಭಾವ ವೆಂದು ಕರೆಯಬಹುದೇ?. ಅಂದರೆ ನಮ್ಮ ಕಾಲುಗಳು ತಮ್ಮದೇ ಆದ ವ್ಯಕಿತ್ವವನ್ನು ಸೂಚಿಸುವುದೇ? ನಮ್ಮ ಕೈಗಳು ಒಂದನ್ನು ಹೇಳಿದರೆ ಕಾಲುಗಳು ಕೇಳುವುದೇ. ಇನ್ನು ಬಾಯಿ, ಮೆದುಳು ಹೇಳಿದ್ದನ್ನು ಕೇಳದೆ ತನ್ನದೇ ಮಾತನ್ನು ಹೇಳಿದರೆ? ಕಿವಿಯು ಕೇಳುವುದನ್ನು ಬಿಟ್ಟು ಮಾತಾಡಲು ಶುರು ಮಾಡಿದರೆ? ಆದರೆ ನಿಜವಾಗಿ ನೋಡಿದರೆ ನಮ್ಮ ಅಂಗಾಂಗಳನ್ನೆಲ್ಲಾ ಮೆದುಳು ತನ್ನ ಪೂರ್ಣ ಹತೋಟಿಗೆ ತೆಗೆದುಕೊಂಡಿರುವುದುದೆಂದು ತಿಳಿಯುತ್ತದೆ. ಅಂದರೆ ನಮ್ಮ ಅಹಂಭಾವ ಮತ್ತು ಇತರ ಭಾವನೆಗಳೆಲ್ಲಾ ನಮ್ಮ ಮೆದುಳೇ ಅನುಭವಿಸುವುದು ಎಂದು ಅರ್ಥವಾಗುತ್ತದೆ.

ಹಾಗೆಂದರೆ ನಮ್ಮ ಎಲ್ಲಾ ಮನೋಭಾವನೆಗಳೂ ನಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತವೆ ಎಂದು ತಿಳಿಯುತ್ತದೆ. ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ ಗಳೆಲ್ಲವೂ ಹಲವು ಬಗೆಯ ಮನೋವಿಕಾಸಗಳು. ಲೈಂಗಿಕಭಾವನೆಯೂ ನಮ್ಮ ಮನಸ್ಸಿನಲ್ಲಾಗುವ ಮೋಹಭಾವನೆಗೆ ಸೇರಿರುತ್ತದೆ. ಸಿಗ್ಮಂಡ್‌ ಫ್ರಾಯ್‌ಡ್‌ (Sigmond Freud) ಎಂಬ ಮನೋವಿಜ್ಞಾನಿಯ ಪ್ರಕಾರ, ಈ ಪ್ರಾಥಮಿಕ ಅಹಂಭಾವವನ್ನು ‘ಇದ್‌’ (Id) ಎಂದೂ ಅಹಂಕಾರವನ್ನು ‘ಈಗೋ’ ಎಂದೂ ಮತ್ತು ನಾಗರೀಕ ಮತ್ತು ಜ್ಞಾನವಂತವಾದ ಅಹಂಭಾವಕ್ಕೆ ‘ಸೂಪರ್‌ ಈಗೋ’ ಎಂತಲೂ ಕರೆದಿದ್ದಾನೆ. ಆತನ ಪ್ರಕಾರ ಪ್ರಪಂಚದ ಎಲ್ಲಾ ಜೀವಿಗಳೂ ತಮ್ಮ ತಮ್ಮ ಜೀವನದ ಮತ್ತು ಬಾಳಿನ ಏಳಿಗೆಗಳಿಗೆ ತಮ್ಮ ತಮ್ಮ ಈ ಅಹಂಕಾರದ ಅಥವ ಅದರಿಂದ ಉದ್ಭವಿಸಿದ ಆಶಾಕಾಂಕ್ಷೆಗಳನ್ನು ಉಪಯೋಗಿಸುತ್ತವೆ. ಇದನ್ನು ಸಿಗ್ಮಂಡ್‌ ಫ್ರಾಯ್‌ಡ್‌ ‘ಲಿಬಿಡೋ’(Libido)ಎಂದು ಕರೆದಿದ್ದಾನೆ.

ಅಂದರೆ ಈ ಲೈಂಗಿಕಭಾವನೆ ಮಾನವ ಮೃಗ ಪಕ್ಷಿಗಳಿಗೊಂದೇ ಇರುವುದಿಲ್ಲ. ಇತರ ಜೀವಿಗಳಿಗೂ ಇರುತ್ತವೆ. ಅಮೀಬಾಗಳಿಗೂ ಇರುತ್ತದೆ, ಆದರೆ ಅದು ಅದರ ಬದಕು ಬಾಳಿನ ಆಕಾಂಕ್ಷೆಯಾಗಿರುತ್ತದೆ. ಅಮೀಬಾವು ತನ್ನ ಸಂತತಿಯು ಮುಂದುವರೆಯುವುದಕ್ಕೆ ಇಬ್ಭಾಗವಾಗುವುದೂ ಒಂದು ಆಕಾಂಕ್ಷೆಯಲ್ಲವೇ? ಅಂದರೆ ಅದೂ ಒಂದು ತರಹ ಲೈಂಗಿಕತೆಯಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rajaram Kavale takes a look at the theory of creation and evolution in the backdrop of sex among ameba as described by chandrama
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more