ಜ.25ರಂದು ಅಮೆರಿಕೆಯಲ್ಲಿ ಭಾರತ ಗಣ ರಾಜ್ಯೋತ್ಸವ

Lalit Mansingh, Indian Ambassador in USಈ ಬಾರಿ ಅಮೆರಿಕಾದಲ್ಲಿ ನಡೆಯಲಿರುವ ಭಾರತದ ಭಾರೀ ಗಣರಾಜ್ಯೋತ್ಸವದಲ್ಲಿ ಕಾವೇರಿ ಕನ್ನಡ ಸಂಘದ ಹವಿಸ್ಸೂ ಉಂಟು. 53ನೇ ಗಣ ರಾಜ್ಯೋತ್ಸವದ ಆಚರಣೆ ಜನವರಿ 25ನೇ ತಾರೀಕು (ಶನಿವಾರ) ಸಂಜೆ 5 ಗಂಟೆಗೆ ಇಲೀನಾರ್‌ ರೂಸ್‌ವೆಲ್ಟ್‌ ಹೈಸ್ಕೂಲ್‌ ಸಭಾಂಗಣ, ಗ್ರೀನ್‌ಬೆಲ್ಟ್‌, ಎಂಡಿಯಲ್ಲಿ ನಡೆಯಲಿದೆ.

ಭಾರೀ ಉತ್ಸವದ ಸಾಂಸ್ಕೃತಿಕ ರಂಗಿನಲ್ಲಿ ಕಾವೇರಿಗರದ್ದೂ ಬಣ್ಣವಿದೆ. ಉತ್ಸವದ ವೇಳೆ ಕಾವೇರಿ ಕನ್ನಡ ಸಂಘ ಕೊಡುತ್ತಿರುವ ಕಾರ್ಯಕ್ರಮಗಳು ಇಂತಿವೆ-

  • ‘ತಾರೆಗಳ ತೋಟದಿಂದ ಚಂದಿರ ಬಂದ’- ಹಾಡಿಗೆ 5 ರಿಂದ 9 ವರ್ಷ ವಯಸ್ಸಿನ ಮಕ್ಕಳು ಹೆಜ್ಜೆ ಹಾಕಲಿದ್ದಾರೆ.
  • 11ರಿಂದ 16 ವರ್ಷ ವಯೋಮಾನದ ಯುವಕರು ಫ್ಯೂಷನ್‌ ನೃತ್ಯ ಪ್ರಸ್ತುತ ಪಡಿಸಲಿದ್ದಾರೆ.
ಅಮೆರಿಕೆಯಲ್ಲಿರುವ ಭಾರತೀಯ ಸಮುದಾಯ ಆಯೋಜಿಸಿರುವ ಗಣ ರಾಜ್ಯೋತ್ಸವದಲ್ಲಿ ಅನೇಕ ಕನ್ನಡ ಸಂಘಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ. ಅಮೆರಿಕೆಯಲ್ಲಿರುವ ಭಾರತದ ರಾಯಭಾರಿ ಲಲಿತ್‌ ಮಾನ್‌ಸಿಂಗ್‌ ಅಂದು ಸಂಜೆ 5 ಗಂಟೆಗೆ ಭಾರತದ ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ನಂತರ ರಾತ್ರಿ ಎಂಟು ಗಂಟೆವರೆಗೆ ಸ್ಥಳೀಯ ಮತ್ತು ಭಾರತೀಯ ಕಲಾವಿದರಿಂದ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.

ರಾತ್ರಿ 8ರಿಂದ 9.30 ಗಂಟೆ ಊಟದ ಸಮಯ. ಎಲ್ಲರೂ ಒಟ್ಟಾಗಿ ಕಲೆತು, ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಪುಷ್ಕಳ ಭೋಜನ ಸ-ವಿ-ಯಬಹುದು. ಅಂದಹಾಗೆ, ಕಾರ್ಯಕ್ರಮಕ್ಕೆ ಹಾಜರಾಗುವವರು ತಲೆಗೆ 5 ಡಾಲರ್‌ ದೇಣಿಗೆ ಕೊಡಬೇಕು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪುಕ್ಕಟೆ ಪ್ರವೇಶ.

ಶ್ವೇತ ಭವನದ ದಿಗ್ಗಜರು, ಅಮೆರಿಕೆಯ ನೀತಿ ನಿರೂಪಕರು , ಭಾರತ ಹಾಗೂ ಅಮೆರಿಕಾದ ಅನೇಕ ಗಣ್ಯರು ಗಣ ರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಗಣ ರಾಜ್ಯೋತ್ಸವ ನಡೆಯುವ ಜಾಗೆಯ ಪೂರ್ಣ ವಿಳಾಸ- Eleanor Roosevelt High School, 7601 Hanover Parkway, Greenbelt, Maryland- 20770. Tel: (301) 513 5400

ಯಾವುದಕ್ಕೂ ಈ ಕೆಳಗಿನವರ ಪೈಕಿ ನಿಮ್ಮ ಹತ್ತಿರದವರಿಗೆ ಫೋನಾಯಿಸಿ-

Mr. Shreekanta Nayak (301) 306 1995 Dr. Adapa V. Prasad (410) 531 2933
Dr. Ram Singh (703) 758 0232 Dr. Ravi Harapanhalli (301) 438 0642
Mr. Anil Sharma (703) 690 3558 Dr. Thomas Ninan (301) 384 2783
Mr. Narain K. Mathur (301) 893 9300 Mr. Sanjay Sahoo (240) 631 0859
Mr. Amarjit Singh Gill (301) 384 8208 Mr. A.S. Giri (703) 222 6032
Dr. Harihar Singh (301) 428 0428 Dr. Om Sharma (301) 262 7239
Dr. Sambu Banik (301) 530 7529 Mr. Phillip Pa Zuala (301) 408 8389
Dr. Harbhajan Ajarawat (301) 299 5342 Mr. S.N. Gupta (301) 294 7544
Mrs. Ann Pillai (301) 935 5321 Dr. Satish Misra (301) 340 2983
Mr. Anadi Naik (410) 442 2539 Dr. Mathew Thomas (301) 526 8723
Dr. Rahat Khan (301) 668 4762 Dr. Pradeep Ganguly (301) 860 1144
Dr. Nirmal Saini (301) 469 8349 Dr. Yogendra Gupta (301) 428 1783
Dr. Manoj Dharamsi (703) 620 9837 Mr. Kayamboo Ramalingam (410) 683 6923
Mr. Satish Korppe (703) 619 1320 Dr. Venkat Rao Mulpuri (703) 690 2888
Dr. Jay Joshi (301) 424 2538 Dr. Zafar Iqbal (301) 540 7636
Mr. Ashwani Aurora (301) 340 9564 Mr. Rahul Srivatsava (703) 598 7693
Mr. Mukund Agashe (240) 453 0580 Mr. Harish Hiremath (301) 360 9951

ಇ- ಮೇಲ್‌ : [email protected]

(ಇನ್ಫೋ ವಾರ್ತೆ)

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+