ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

www.hellokannadiga.com

By Staff
|
Google Oneindia Kannada News

ವಿದೇಶದಲ್ಲಿ ಒಳ್ಳೆಯ ಉದ್ಯೋಗ ಸಿಕ್ಕಿದೆ ಎಂದು ಕರ್ನಾಟಕದಿಂದಾಚೆಗೆ ಬಂದುಬಿಟ್ಟಿದ್ದೀರಿ. ಮನೆ, ಊರು, ಕನ್ನಡದ ನೆನಪುಗಳು ಕಾಡುತ್ತಲೇ ಇರುತ್ತವೆ.

ದಿನವೂ ಕಚೇರಿಗೆ ಬರುತ್ತೀರಿ. ಕೆಲಸದ ಮಧ್ಯೆ ಸಹೋದ್ಯೋಗಿಯಾಂದಿಗೆ ಕುಶಲ ಸಮಾಚಾರ ಮಾತಾಡುತ್ತೀರಿ. ಒಂದಷ್ಟು ಮಂದಿ ಕನ್ನಡಿಗರ ಪರಿಚಯವೂ ಆಗಿದೆ ಅಂತಿಟ್ಟುಕೊಳ್ಳಿ. ನಿಮ್ಮ ಪಕ್ಕದ ಡಿಪಾರ್ಟ್‌ಮೆಂಟಿನಲ್ಲೇ ಒಬ್ಬ ಕನ್ನಡಿಗರಿರಬಹುದು. ಅಥವಾ ನೀವು ವಾಸಮಾಡುತ್ತಿರುವ ಅಪಾರ್ಟ್‌ಮೆಂಟಿನಲ್ಲೇ ನಿಮ್ಮ ಹಳೆಯ ದೋಸ್ತ್‌ ಇದ್ದಿರಬಹುದು. ಆದರೆ ಅವರೂ ಕನ್ನಡಿಗರು ಅಂತ ಹೇಗೆ ಗೊತ್ತಾಗುತ್ತದೆ...? ಇಲ್ಲಿದೆ ನಿಮಗೊಂದು ಕೈಪಿಡಿ-
http://www.hellokannadiga.com ಅಥವಾ ಹೊರನಾಡ ಸಂಗಾತಿ ಎಂಬ ಪುಸ್ತಕ!

ಸಬೀರ್‌ ಭಾಟಿಯಾ ಕನ್ನಡದವರಂತೆ!

ಹೊರನಾಡ ಸಂಗಾತಿ ಪುಸ್ತಕ ಯೆಲ್ಲೋ ಪೇಜಸ್‌ ಮಾದರಿಯಲ್ಲಿದೆ. ಈ ವಾರ್ಷಿಕ ಸಂಚಿಕೆಯಲ್ಲಿ ಕರ್ನಾಟಕದ ಹೊರಗೆ ವಾಸಿಸುವ ಎಲ್ಲ ಕನ್ನಡಿಗರ ಬಗ್ಗೆ ಮಾಹಿತಿ ಇದೆ. ಕನ್ನಡ ಸಂಘಟನೆಗಳು ಮತ್ತು ಅವುಗಳ ಸಾಧನೆಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡಿಗರ ವಿವರಗಳು ಈ ಪುಸ್ತಕದಲ್ಲಿವೆ. ಈ ಮಾಹಿತಿಗಳನ್ನು ವೆಬ್‌ಸೈಟ್‌ಗೆ ಅಳವಡಿಸುವ ಕಾರ್ಯ ಶುರುವಾಗಿದ್ದು, ಈಗಾಗಲೇ ಡೈರೆಕ್ಟರಿ ಮಾದರಿಯಲ್ಲಿ ಕನ್ನಡಿಗರ ಮಾಹಿತಿ ಲಭ್ಯವಿದೆ.

ಹೊರನಾಡ ಸಂಗಾತಿ ಪುಸ್ತಕದ ಪುಟ ತೆರೆದರೆ ನಿಮಗೆ ಅಚ್ಚರಿಗಳ ಮೇಲೆ ಅಚ್ಚರಿ. ಹಾಟ್‌ ಮೇಯ್ಲ್‌ ಮೂಲಕ ಈ -ಮೇಯ್ಲ್‌ ಕ್ರಾಂತಿಯನ್ನಾರಂಭಿಸಿದ ಸಬೀರ್‌ ಭಾಟಿಯಾ ಬೆಂಗಳೂರು ಹುಡುಗನಂತೆ. ರಿkುೕ ಪ್ರೀಮಿಯರ್‌ ಮ್ಯಾಗರಿkುನ್‌ ಸಂಪಾದಕರೂ ಕರ್ನಾಟಕದವರು...ಅಮೆರಿಕದ ವೈದ್ಯರಲ್ಲಿ ಶೇ 38ರಷ್ಟು ಮಂದಿ ಕನ್ನಡ ನೆಲವದವರಾದರೆ, ಶೇ 12 ರಷ್ಟು ಮಂದಿ ವಿಜ್ಞಾನಿಗಳು ಭಾರತೀಯರು! ಇಂತಹ ಅಂಕಿ ಅಂಶಗಳನ್ನೂ ಹೊರನಾಡ ಸಂಗಾತಿ ಬಿಚ್ಚಿಡುತ್ತದೆ.

ಮುಂಬಯಿಯ ನಾರಾಯಣಪ್ರಸಾದ್‌ ನೇತೃತ್ವದ ಕೊಡೆಕ್ಸ್‌ ಇಂಡಿಯಾ ಈ ಪುಸ್ತಕವನ್ನು ಪ್ರಕಟಿಸಿದೆ. ಈ ಬೃಹತ್‌ ಮಾಹಿತಿ ಪುಸ್ತಕಕ್ಕಾಗಿ ಕೊಡೆಕ್ಸ್‌ ನೆಟ್‌ವರ್ಕ್‌ನ್ನು ಸಂಪರ್ಕಿಸಿ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X