ಸ್ಥಳೀಯ ಸಂಸ್ಥೆ ಚುನಾವಣೆ : ಅತ್ತೆಗೆ ಸೋಲಿನ ರುಚಿ ತೋರಿಸಿದ ಸೊಸೆ!

ಯಾದಗಿರಿ, ಮೇ 31 : ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 63 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಹಲವು ಕುತೂಹಲದ ವಿಷಯಗಳಿವೆ. ಯಾದಗಿರಿಯಲ್ಲಿ ಅತ್ತೆಯನ್ನು ಸೊಸೆ ಸೋಲಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆ ಚುನಾವಣೆಯಲ್ಲಿ ಅತ್ತೆ ಕಾಂಗ್ರೆಸ್‌ನಿಂದ, ಸೊಸೆ ಬಿಜೆಪಿಯಿಂದ ಕಣದಲ್ಲಿದ್ದರು. ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಸೊಸೆ ಗೆಲುವು ಸಾಧಿಸಿದ್ದಾರೆ.

ನಗರಸಭೆಯ ವಾರ್ಡ್‌ ನಂಬರ್ 28ರಲ್ಲಿ ಹನುಮವ್ವ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಅವರ ವಿರುದ್ದ ಬಿಜೆಪಿಯಿಂದ ಹನುಮವ್ವ ಸೊಸೆ ರಾಧಿಕಾ ಶಾಂತಪ್ಪ ಕಟ್ಟಿಮನಿ ಅಭ್ಯರ್ಥಿಯಾಗಿದ್ದರು.

Daughter in law defeated mother in law in urban local bodies election

ಚುನಾವಣೆಯಲ್ಲಿ ರಾಧಿಕಾ ಶಾಂತಪ್ಪ ಕಟ್ಟಿಮನಿ 390 ಮತಗಳನ್ನು ಪಡೆದರೆ, ಅತ್ತೆ ಹನುಮವ್ವ 255 ಮತಗಳನ್ನು ಪಡೆದರು. 135 ಮತಗಳ ಅಂತರದಿಂದ ಅತ್ತೆಯನ್ನು ಸೊಸೆ ಸೋಲಿಸಿದ್ದಾರೆ.

ವಿದ್ಯಾರ್ಥಿನಿ ಈಗ ಪುರಸಭೆ ಸದಸ್ಯೆ : ಕೋಲಾರ ಜಿಲ್ಲೆಯ ಮಾಲೂರು ಪುರಸಭೆಯಲ್ಲಿ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿಯೊಬ್ಬರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿದ್ದ ಸುಮಿತ್ರ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ 373 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+