Get Updates
Get notified of breaking news, exclusive insights, and must-see stories!

ಅಮೆರಿಕ ಅಧ್ಯಕ್ಷರಿಗೆ ವಿಷ ಪತ್ರ ಕಳುಹಿಸಿದ್ದ ಮಹಿಳೆ ಅಂದರ್..!

ವಾಷಿಂಗ್ಟನ್, ಸೆ. 22: ಅಮೆರಿಕ ಅಧ್ಯಕ್ಷರಿಗೆ ವಿಷ ಲೇಪಿತ ಪತ್ರ ಕಳುಹಿಸಿದ್ದ ಮಹಿಳೆಯನ್ನು ಕೆನಡಾ ಹಾಗೂ ಅಮೆರಿಕ ಗಡಿಯಲ್ಲಿ ಬಂಧಿಸಲಾಗಿದೆ. ಆದರೆ ಆಕೆಯ ಹೆಸರನ್ನು ಗೌಪ್ಯವಾಗಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಕಳೆದ ವಾರ 'ರೈಸಿನ್' ಎಂಬ ಕಾರ್ಕೋಟಕ ವಿಷ ಲೇಪಿತ ಪತ್ರವೊಂದನ್ನು ವೈಟ್‌ಹೌಸ್‌ಗೆ ಕಳುಹಿಸಲಾಗಿತ್ತು. ಅಮೆರಿಕ ಅಧ್ಯಕ್ಷ ಟ್ರಂಪ್ ಹೆಸರಿನಲ್ಲಿ ಬಂದಿದ್ದ ಅನುಮಾನಾಸ್ಪದ ಪತ್ರವನ್ನು ಶ್ವೇತಭವನದ ಅಧಿಕಾರಿಗಳು ಗಮನಿಸಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ನಡೆಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದು, ಕಾರ್ಕೋಟಕ ವಿಷ 'ರೈಸಿನ್' ಅನ್ನು ಪತ್ರಕ್ಕೆ ಮೆತ್ತಿರುವುದು ಪತ್ತೆಯಾಗಿತ್ತು.

ಇನ್ನು ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಘಟನೆ ಸಂಚಲನ ಸೃಷ್ಟಿಸಿದೆ. ಕೂಡಲೇ ಅಲರ್ಟ್ ಆಗಿದ್ದ ಅಮೆರಿಕ ಗುಪ್ತದಳದ ಅಧಿಕಾರಿಗಳು, ಅಮೆರಿಕ ಅಂಚೆ ಇಲಾಖೆಯ ಸಹಕಾರದೊಂದಿಗೆ ವಿಷ ಲೇಪಿತ ಪತ್ರವನ್ನು ಕಳುಹಿಸಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಪತ್ರವನ್ನು ಗಮನಿಸಿದ್ದ ಅಧಿಕಾರಿಗಳು ಇದು ಕೆನಡಾದಿಂದ ಬಂದಿದೆ ಎಂದು ಮೊದಲೇ ಅನುಮಾನಿಸಿದ್ದರು.

ಅಧಿಕಾರಿಗಳ ಅನುಮಾನ ಈಗ ನಿಜವಾಗಿದ್ದು, ವಿಷ ಪತ್ರ ಕಳುಹಿಸಿರೋದು ಕೆನಡಾ ಮೂಲದ ಮಹಿಳೆ ಎಂಬುದು ಕನ್ಫರ್ಮ್ ಆಗಿದೆ. ಕೆನಡಾದಿಂದ ಅಮೆರಿಕಕ್ಕೆ ಬರುವಾಗ ಆರೋಪಿ ಮಹಿಳೆಯನ್ನು ಅಮೆರಿಕದ ಅಧಿಕಾರಿಗಳು ಗಡಿಯಲ್ಲಿ ಅರೆಸ್ಟ್ ಮಾಡಿದ್ದಾರೆ.

ಒಬಾಮಾ ಇದ್ದಾಗಲೂ ವಿಷ ಪತ್ರ ಬಂದಿತ್ತು

ಒಬಾಮಾ ಇದ್ದಾಗಲೂ ವಿಷ ಪತ್ರ ಬಂದಿತ್ತು

ಅಮೆರಿಕದ ಶಕ್ತಿಸೌಧ ಹಾಗೂ ಅಲ್ಲಿನ ಆಡಳಿತ ಯಂತ್ರದ ಜೀವನಾಡಿ ವೈಟ್‌ಹೌಸ್‌ಗೆ ಈ ರೀತಿ ವಿಷ ಪತ್ರ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಬರಾಕ್ ಒಬಾಮಾ ಅಧಿಕಾರದಲ್ಲಿ ಇದ್ದಾಗಲೂ ಇದೇ ರೀತಿ ವಿಷ ಲೇಪನ ಮಾಡಿದ್ದ ಪತ್ರ ಅಂಚೆ ಮೂಲಕ ಬಂದಿತ್ತು. 2014ರಲ್ಲಿ ಅಂದಿನ ಅಧ್ಯಕ್ಷ ಒಬಾಮಾ ಹೆಸರಿನಲ್ಲಿ 'ರೈಸಿನ್' ವಿಷಲೇಪಿತ ಪತ್ರಗಳನ್ನು ರವಾನಿಸಿದ್ದ ಆರೋಪದಡಿ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು.

ಅಪರಾಧಿಗೆ 25 ವರ್ಷ ಶಿಕ್ಷೆಯಾಗಿತ್ತು

ಅಪರಾಧಿಗೆ 25 ವರ್ಷ ಶಿಕ್ಷೆಯಾಗಿತ್ತು

2014ರಲ್ಲಿ ಬರಾಕ್ ಒಬಾಮಾ ಮತ್ತು ಇತರ ಅಧಿಕಾರಿಗಳಿಗೆ 'ರೈಸಿನ್' ವಿಷ ಲೇಪಿತ ಪತ್ರ ಕಳುಹಿಸಿದ್ದ ತಪ್ಪಿಗಾಗಿ ಮಿಸ್ಸಿಸ್ಸಿಪ್ಪಿ ಮೂಲದ ವ್ಯಕ್ತಿಯೊಬ್ಬಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ಸದ್ಯದ ಪ್ರಕರಣದಲ್ಲಿ ಇನ್ನಷ್ಟು ಕಠಿಣ ಶಿಕ್ಷೆಯನ್ನು ಟ್ರಂಪ್ ಬೆಂಬಲಿಗರು ನಿರೀಕ್ಷಿಸಿದ್ದಾರೆ. ಬಂಧಿತ ಮಹಿಳೆ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ, ಈ ಕೃತ್ಯಕ್ಕೆ ಸಂಚು ಹೂಡಿದ್ದಾದರೂ ಹೇಗೆ. ಮತ್ತು ವಿಷ ಪತ್ರ ಕಳುಹಿಸಲು ಕಾರಣ ಏನು ಎಂಬ ವಿಚಾರಗಳನ್ನೆಲ್ಲಾ ಅಧಿಕಾರಿಗಳು ಬಾಯಿಬಿಡಿಸುತ್ತಿದ್ದಾರೆ.

72 ಗಂಟೆ ಬದುಕಬಹುದು ಅಷ್ಟೇ..!

72 ಗಂಟೆ ಬದುಕಬಹುದು ಅಷ್ಟೇ..!

ರೈಸಿನ್ ಅದೆಷ್ಟು ಕಾರ್ಕೋಟಕ ವಿಷ ಎಂದರೆ, ಒಬ್ಬ ವ್ಯಕ್ತಿಯ ಆಯಸ್ಸನ್ನು 72 ಗಂಟೆಗಳಲ್ಲೇ ಮುಗಿಸಿಬಿಡುವ ಶಕ್ತಿ ಹೊಂದಿದೆ. ಕ್ಯಾಸ್ಟರ್ ಸೀಡ್ಸ್‌ನಿಂದ ಈ ವಿಷ ತಯಾರಿಸಲಾಗುತ್ತದೆ. ಪುಡಿ, ಟ್ಯಾಬ್ಲೆಟ್ ಅಥವಾ ಲಿಕ್ವಿಡ್ ರೂಪದಲ್ಲಿ ರೈಸಿನ್ ವಿಷ ಬಳಸುತ್ತಾರೆ. ಒಬ್ಬ ವ್ಯಕ್ತಿಯನ್ನು ಕೊಲ್ಲಲು 500 ಮಿಲಿ ಗ್ರಾಂನಷ್ಟು ರೈಸಿನ್ ವಿಷ ಸಾಕು. ಈ ವಿಷದ ಸಂಪರ್ಕಕ್ಕೆ ಬಂದ ವ್ಯಕ್ತಿ 36 ರಿಂದ 72 ಗಂಟೆಗಳ ಒಳಗೆ ಸಾವಿನ ಮನೆ ಸೇರುತ್ತಾನೆ. ಈ ಹಿಂದೆಯೂ ಅಮೆರಿಕದಲ್ಲಿ ಇದೇ 'ರೈಸಿನ್' ವಿಷ ಬಳಸಿ ಪತ್ರಗಳನ್ನ ಅಂಚೆ ಮೂಲಕ ರವಾನಿಸಿದ್ದ ಘಟನೆಗಳು ನಡೆದಿದ್ದವು. 2018ರಲ್ಲಿ ವಿಲಿಯಂ ಕ್ಲೈಡ್ ಅಲೆನ್ ಎಂಬ ಕಿರಾತಕ, ಟ್ರಂಪ್ ಹಾಗೂ ಎಫ್‌ಬಿಐ ನಿರ್ದೇಶಕ ಸ್ಟೋಫರ್ ವ್ರೇ ಸೇರಿದಂತೆ ಮತ್ತಿತರ ಅಧಿಕಾರಿಗಳ ಹೆಸರಲ್ಲಿ ವಿಷ ಪತ್ರ ರವಾನಿಸುವ ಬೆದರಿಕೆ ಹಾಕಿದ್ದ.

Recommended Video

    Congress ನಾ ಮಹತ್ವದ ಹುದ್ದೆ ಈ ನಾಯಕರ ಪಾಲು!!! | Oneindia Kannada
    ಜೈವಿಕ ಅಸ್ತ್ರವಾಗಿ ಬಳಕೆ..?

    ಜೈವಿಕ ಅಸ್ತ್ರವಾಗಿ ಬಳಕೆ..?

    ಈಗಾಗಲೇ ಹಲವು ವಿನಾಶಕಾರಿ ಅಸ್ತ್ರಗಳು ಮಾನವ ಜಗತ್ತನ್ನು ನಲುಗಿಸಿವೆ. ಇದೇ ರೀತಿ 'ರೈಸಿನ್' ಕೂಡ ಜೈವಿಕ ಅಸ್ತ್ರವಾಗಿ ಬಳಕೆಯಾಗುತ್ತಿರುವ ಕುರಿತು ಅನುಮಾನಗಳು ಮೂಡಿವೆ. ಇದೀಗ ವೈಟ್‌ಹೌಸ್‌ನಲ್ಲಿ ನಡೆದಿರುವ ಘಟನೆಯನ್ನ ಗಮನಿಸಿದರೆ, 'ರೈಸಿನ್' ವಿಷವನ್ನು ಜೈವಿಕ ಅಸ್ತ್ರವಾಗಿ ಅಸ್ತ್ರವಾಗಿ ಬಳಸುತ್ತಿರುವ ಬಗ್ಗೆ ಗುಮಾನಿ ಮೂಡಿದೆ. ಹೀಗಾಗಿಯೇ ಅಮೆರಿಕದ ಗುಪ್ತಚರದಳ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಇದಕ್ಕಾಗಿ ಅಂಚೆ ಇಲಾಖೆಯ ಸಹಕಾರ ಕೋರಿದ್ದು, ವಿಷ ಲೇಪಿತ ಪತ್ರ ರವಾನಿಸಿರುವ ಕ್ರಿಮಿನಲ್ ಜಾಡು ಹಿಡಿಯಲು ಬಲೆ ಬೀಸಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+