ಕೊರೊನಾ ಸೋಂಕಿನ ಕುರಿತು ಯುವಜನತೆಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ವಾಷಿಂಗ್ಟನ್, ಆಗಸ್ಟ್ 20: ಯುವ ಜನತೆಗೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಕುರಿತು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
Recommended Video
20,30,40 ವರ್ಷದವರಿಗೆ ಕೊರೊನಾ ಸೋಂಕು ತಮಗೆ ತಗುಲಿದೆ ಎಂಬ ಮಾಹಿತಿಯೇ ಇರುವುದಿಲ್ಲ. ಸಾಕಷ್ಟು ಮಂದಿಗೆ ಲಕ್ಷಣಗಳು ಕಾಣಿಸುವುದೇ ಇಲ್ಲ, ಇನ್ನೂ ಕೆಲವಷ್ಟು ಮಂದಿಗೆ ಸ್ವಲ್ಪ ಪ್ರಮಾಣದ ಲಕ್ಷಣಗಳು ಕಂಡುಬರುತ್ತವೆ. ಇದರಿಂದ ಬೇರೆಯವರಿಗೂ ಅಪಾಯ ಹೆಚ್ಚು.
ವಿಶ್ವ ಆರೋಗ್ಯ ಸಂಸ್ಥೆಯ ರೀಜನಲ್ ಡೈರೆಕ್ಟರ್ ಟಕೇಶಿ ಕಸಾಯ್ ಮಾತನಾಡಿ, ದುರ್ಬಲರಲ್ಲಿ ಕಾಯಿಲೆಯನ್ನು ಹೆಚ್ಚಿಸುತ್ತದೆ. ವೃದ್ಧರು, ದೀರ್ಘಕಾಲದ ರೋಗವನ್ನು ಹೊಂದಿರುವವರು, ಜನನಿಬಿಡ ಪ್ರದೇಶಗಳಲ್ಲಿ ವಾಸಿಸುವವರಿಗೆ ತೊಂದರೆ ಹೆಚ್ಚು.
ವೈರಸ್ ಸಮುದಾಯಕ್ಕೆ ಹರಡದಂತೆ ತಡೆಯಲು ದುಪ್ಪಟ್ಟು ಶ್ರಮ ಬೇಕಾಗುತ್ತದೆ. ಅನೇಕ ದೇಶಗಳು ಈಗಾಗಲೇ ಹೊಸ ಹೊಸ ಕ್ರಮಗಳನ್ನು ಅನುಸರಿಸುತ್ತಿವೆ. ಈ ಕ್ರಮಗಳು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಭವಿಷ್ಯದಲ್ಲಿ ನಾವು ಅದನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ತೋರಿಸುತ್ತದೆ.

ಯುವಕರ ಮೇಲೆ ಯಾಕೆ ಅಷ್ಟು ಪರಿಣಾಮವನ್ನು ಬೀರುವುದಿಲ್ಲ
ಕೊರೊನಾ ವೈರಸ್ ಅನಾರೋಗ್ಯವನ್ನು ಉಂಟು ಮಾಡುತ್ತದೆ, ಆದರೆ ಅದು ಕೆಲವೇ ಮಂದಿಗಳಷ್ಟೆ, ಯುವಜನತೆ ಮೇಲೆ ಯಾಕೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎನ್ನುವದರ ಬಗ್ಗೆ ವಿಜ್ಞಾನಿಗಳು ಆಲೋಚಿಸುತ್ತಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಹಲವು ಬಾರಿ ಕೈಯನ್ನು ತೊಳೆಯಿರಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕಫ, ಜ್ವರ, ಉಸಿರಾಟದ ಸಮಸ್ಯೆಯಿದ್ದರೆ ತಪ್ಪದೆ ಪರೀಕ್ಷೆ ಮಾಡಿಸಿಕೊಳ್ಳಿ.

7 ಲಕ್ಷಕ್ಕೂ ಹೆಚ್ಚು ಮಂದಿ ಸಾವು
ಇಡೀ ವಿಶ್ವದಾದ್ಯಂತ 22 ಮಿಲಿಯನ್ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 774,600 ಮಂದಿ ಸಾವನ್ನಪ್ಪಿದ್ದಾರೆ.ಫೆಬ್ರವರಿಯಿಂದ ಇಲ್ಲಿಯವರೆಗೆ 6 ಮಿಲಿಯನ್ ಮಂದಿ ಸೋಂಕಿಗೆ ತುತ್ತಾಗಿದ್ದಾರೆ.

ಯುವಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ
ಅಮೆರಿಕದಲ್ಲಿ ಯುವಜನತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ.ಹೀಗಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಮೆರಿಕಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಅರ್ಧದಷ್ಟು ಮಂದಿ 35 ವರ್ಷದ ಒಳಗಿನವರಾಗಿದ್ದಾರೆ. ಅದರಲ್ಲೂ ಫ್ಲೋರಿಡಾ ಮತ್ತು ಟೆಕ್ಸಾಸ್‌ನಲ್ಲಿ ಸಂಖ್ಯೆ ಹೆಚ್ಚಿದೆ.

ಕೊರೊನಾ ಸೋಂಕನ್ನು ಹಗುರವಾಗಿ ತೆಗೆದುಕೊಳ್ಳಬೇಡಿ
ಡಾ. ಆಂಥೊನಿ ಫಾಸಿ ಮಾತನಾಡಿ, ಯುವಕರಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಸೋಂಕನ್ನು ಯಾರೂ ಕೂಡ ಹಗುರವಾಗಿ ತೆಗೆದುಕೊಳ್ಳಬೇಡಿ, ನಿಮಗೆ ನಿಮ್ಮ ಜವಾಬ್ದಾರಿ ಇದೆ ಹಾಗೆಯೇ ಸಮಾಜವನ್ನು ಆರೋಗ್ಯವಾಗಿಡುವ ಜವಾಬ್ದಾರಿ ಕೂಡ ನಿಮ್ಮ ಮೇಲಿದೆ. ಒಂದು ಸಣ್ಣ ವೈರಸ್ ಇಷ್ಟೊಂದು ಬಗೆಯ ಲಕ್ಷಣಗಳನ್ನು ಹೊಂದಿರುವುದು ನೋಡಿದ್ದು ಇದೇ ಮೊಲ ಬಾರಿ. ಇಲ್ಲಿಯವರೆಗೆ ಸಾಕಷ್ಟು ಮಂದಿ ಯಾವುದೇ ಲಕ್ಷಣಗಳನ್ನು ಹೊಂದಿಲ್ಲ. ಸಣ್ಣ ಲಕ್ಷಣಗಳು ಕಂಡು ಬಂದವರು ಮನೆಯಲ್ಲಿಯೇ ಇದ್ದರು.












Click it and Unblock the Notifications