ಕೊರೊನಾ ಮಾಹಿತಿಗಾಗಿ ಮತ್ತೆ ಮೊಬೈಲ್ ಆ್ಯಪ್ ಆರಂಭಿಸಿದ WHO

ವಾಷಿಂಗ್ಟನ್, ಡಿಸೆಂಬರ್ 25: ವಿಶ್ವ ಆರೋಗ್ಯ ಸಂಸ್ಥೆಯು ಜನರ ಹಿತದೃಷ್ಟಿಯಿಂದ ಕೊರೊನಾ ಕುರಿತ ಸಂಪೂರ್ಣ ಮಾಹಿತಿ ನೀಡುವ ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.

ಈ ಅಪ್ಲಿಕೇಶನ್ ಹೆಸರು ಡಬ್ಲ್ಯುಎಚ್ಓ ಕೋವಿಡ್-19 ಅಪ್ ಡೇಟ್ಸ್(WHO COVID-19 Updates). ಈ ಅಪ್ಲಿಕೇಶನ್ ಕೊರೊನಾ ವೈರಸ್ ಕುರಿತು ಸಂಪೂರ್ಣ ವಿಶ್ವಾಸಾರ್ಹ ಮಾಹಿತಿ ಒಳಗೊಂಡಿರಲಿದೆ. ಆದರೆ, ಇದು ಸಂಪರ್ಕ ಪತ್ತೆ ಹಚ್ಚುವಿಕೆಯಂತಹ ವಿಶೇಷತೆ ಹೊಂದಿಲ್ಲ.

ಕೊರೊನಾ ವೈರಸ್ ಹರಡುವಿಕೆಯ ಬಗ್ಗೆ ತಿಳಿಯಲು, ದೇಶ ಹಾಗೂ ವಿಶ್ವದಾದ್ಯಂತ ನೊಂದಾಯಿತ ಪ್ರಕರಣಗಳ ಸಂಖ್ಯೆಯನ್ನು ಕಾಲ-ಕಾಲಕ್ಕೆ ಮುಖಪುಟದಲ್ಲಿ ಕಾಣಿಸಿಕೊಳ್ಳಲಿದೆ.

WHO Launches Mobile App For COVID-19 Updates Again

ಆರೋಗ್ಯ ವಿಷಯದಲ್ಲಿ ಅನುಸರಿಸಬೇಕಾದ ಸೂಚನೆಗಳನ್ನು ಒಳಗೊಂಡಿರಲಿದೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್-19 ಪ್ರತಿಕ್ರಿಯೆ ನಿಧಿಗೆ ದೇಣಿಗೆ ನೀಡಲು ಬಯಸುವವರು ಈ ಆ್ಯಪ್ ಮೂಲಕ ದೇಣಿಗೆ ನೀಡಬಹುದು.

ಈ ವರ್ಷದ ಏಪ್ರಿಲ್ ನಲ್ಲಿಯೇ ಕೊರೊನಾ ವೈರಸ್ ಅಪ್ಲಿಕೇಶನ್ ಪರಿಚಯಿಸಿತಾದರೂ, ಸಾರ್ವಜನಿಕರಿಗೆ ಲಭ್ಯವಿಲ್ಲದ ಕಾರಣ ಆ್ಯಪ್ ಸ್ಟೋರ್ ಗಳು ಅದನ್ನು ತೆಗೆದುಹಾಕಿದ್ದವು.

ಡಬ್ಲ್ಯುಎಚ್ಓ ಕೋವಿಡ್-19 ಅಪ್ ಡೇಟ್ಸ್ ಅಪ್ಲಿಕೇಶನ್ ತಾಜಾ ಸ್ಥಳೀಯ ಮಾಹಿತಿ ಆಧಾರದ ಮೇಲೆ ನೈಜ-ಸಮಯದ ಅಧಿಸೂಚನೆಗಳನ್ನು ಒದಗಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+