ಪ್ರೆಸ್ ಸೆಕ್ರೆಟರಿ ಮಾಡಿದ ಎಡವಟ್ಟು: ಡೊನಾಲ್ಡ್ ಟ್ರಂಪ್ ಬ್ಯಾಂಕ್ ಮಾಹಿತಿ ಬಟಾ ಬಯಲು!

ವಾಷಿಂಗ್ಟನ್, ಮೇ 23: ವೈಟ್ ಹೌಸ್ ಪ್ರೆಸ್ ಬ್ರೀಫಿಂಗ್ ವೇಳೆ ಆಗುತ್ತಿರುವ ಎಡವಟ್ಟುಗಳು ಒಂದೊಂದಲ್ಲ.! ''ಡೆಡ್ಲಿ ಕೊರೊನಾ ವೈರಸ್ ಅನ್ನು ಕೊಲ್ಲಲು ಮನುಷ್ಯನ ದೇಹದೊಳಗೆ ಲೈಟ್, ಹೀಟ್ ಅಥವಾ ಡಿಸ್ ಇನ್ಫೆಕ್ಟೆಂಟ್ ಇನ್ಜೆಕ್ಟ್ ಮಾಡಬಹುದಾ?'' ಎಂದು ಪ್ರೆಸ್ ಬ್ರೀಫಿಂಗ್ ವೇಳೆ ಕೇಳಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯದ್ವಾತದ್ವಾ ಟ್ರೋಲ್ ಆಗಿದ್ದರು.

Recommended Video

      ನಟಿ ತಾರಾ ಅವರಿಗೆ ಹಿಂಜರಿಕೆ, ಸಂಕೋಚ ಆಗ್ತಿರೋದ್ಯಾಕೆ | Tara | Filmibeat Kannada

      ಇದೀಗ ಪ್ರೆಸ್ ಬ್ರೀಫಿಂಗ್ ವೇಳೆ ಮತ್ತೊಂದು ಎಡವಟ್ಟಾಗಿದೆ. ಈ ಬಾರಿ ಎಡವಟ್ಟು ಮಾಡಿರುವುದು ಡೊನಾಲ್ಡ್ ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ ಕೇಲೀಗ್ ಮೆಕ್ ಎನಾನಿ.

      ಡಿಪಾರ್ಟ್ಮೆಂಟ್ ಅಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ (ಎಚ್.ಎಚ್.ಎಸ್)ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಚೆಕ್ ಅನ್ನು ಮಾಧ್ಯಮಗಳ ಮುಂದೆ ತೋರಿಸಲು ಹೋದ ಕೇಲೀಗ್ ಮೆಕ್ ಎನಾನಿ.. ಡೊನಾಲ್ಡ್ ಟ್ರಂಪ್ ರವರ ಖಾಸಗಿ ಬ್ಯಾಂಕ್ ಮಾಹಿತಿಯನ್ನು ಬಟಾ ಬಯಲು ಮಾಡಿದ್ದಾರೆ.

      ಜಗಜ್ಜಾಹೀರಾದ ಡೊನಾಲ್ಡ್ ಟ್ರಂಪ್ ಬ್ಯಾಂಕ್ ಮಾಹಿತಿ

      ಜಗಜ್ಜಾಹೀರಾದ ಡೊನಾಲ್ಡ್ ಟ್ರಂಪ್ ಬ್ಯಾಂಕ್ ಮಾಹಿತಿ

      2020 ರ ತಮ್ಮ ಗಳಿಕೆಯಲ್ಲಿನ $100,000 ಅನ್ನು ಡಿಪಾರ್ಟ್ಮೆಂಟ್ ಅಫ್ ಹೆಲ್ತ್ ಅಂಡ್ ಹ್ಯೂಮನ್ ಸರ್ವೀಸಸ್ (ಎಚ್.ಎಚ್.ಎಸ್)ಗೆ ದೇಣಿಗೆ ನೀಡಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೆಕ್ ಕೊಟ್ಟಿದ್ದರು. ಆ ಚೆಕ್ ಅನ್ನು ಶುಕ್ರವಾರ ನಡೆದ ಪ್ರೆಸ್ ಬ್ರೀಫಿಂಗ್ ವೇಳೆ ಕ್ಯಾಮರಾಗಳ ಮುಂದೆ ಪ್ರೆಸ್ ಸೆಕ್ರೆಟರಿ ಕೇಲೀಗ್ ಮೆಕ್ ಎನಾನಿ ತೋರಿಸಿಬಿಟ್ಟರು. ಆ ಮೂಲಕ ಖಾಸಗಿಯಾಗಿರಬೇಕಿದ್ದ ಡೊನಾಲ್ಡ್ ಟ್ರಂಪ್ ರವರ ಬ್ಯಾಂಕ್ ಮಾಹಿತಿ ಜಗಜ್ಜಾಹೀರಾಯಿತು.

      ಕ್ಯಾಮರಾ ಮುಂದೆ ಸಂಪೂರ್ಣ ಮಾಹಿತಿ

      ಕ್ಯಾಮರಾ ಮುಂದೆ ಸಂಪೂರ್ಣ ಮಾಹಿತಿ

      ಪ್ರೆಸ್ ಸೆಕ್ರೆಟರಿ ಕೇಲೀಗ್ ಮೆಕ್ ಎನಾನಿ ತೋರಿಸಿದ.. ಕ್ಯಾಮರಾಗಳು ಸೆರೆಹಿಡಿದ ಚೆಕ್ ನಲ್ಲಿ ಡೊನಾಲ್ಡ್ ಟ್ರಂಪ್ ರವರ ಬ್ಯಾಂಕ್ ಅಕೌಂಟ್ ಕುರಿತಾದ ಸಂಪೂರ್ಣ ಮಾಹಿತಿ, ಖಾಸಗಿ ವಿಳಾಸ ಮತ್ತು ಸಹಿ ಕೂಡ ಇತ್ತು.

      ಹ್ಯಾಕಿಂಗ್ ಅಪಾಯ

      ಹ್ಯಾಕಿಂಗ್ ಅಪಾಯ

      ಡೊನಾಲ್ಡ್ ಟ್ರಂಪ್ ಅವರ ಬ್ಯಾಂಕ್ ಮಾಹಿತಿ ಹೊರಬಿದ್ದಿರುವುದರಿಂದ 'ಹ್ಯಾಕಿಂಗ್' ಅಪಾಯ ಕಾಡುತ್ತಿದೆ. ''ಖಾಸಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಉತ್ತಮ ಅಭ್ಯಾಸವಲ್ಲ'' ಎಂದು ಐಡೆಂಟಿಟಿ ಥೆಫ್ಟ್ ರಿಸೋರ್ಸ್ ಸೆಂಟರ್ ನ ಚೀಫ್ ಎಕ್ಸಿಕ್ಯೂಟಿವ್ ಇವಾ ವೆಲಾಸ್ಕ್ವೆಜ್ ತಿಳಿಸಿದ್ದಾರೆ.

      ನಾಚಿಕೆಗೇಡಿನ ವಿಚಾರ

      ನಾಚಿಕೆಗೇಡಿನ ವಿಚಾರ

      ಮಾರಣಾಂತಿಕ ಕೊರೊನಾ ವೈರಸ್ ಗೆ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಎಚ್.ಎಚ್.ಎಸ್ ಗೆ ಡೊನಾಲ್ಡ್ ಟ್ರಂಪ್ ದೇಣಿಗೆ ನೀಡಿದ್ದಾರೆ. ''ಅಧ್ಯಕ್ಷ ಟ್ರಂಪ್ ನೀಡಿರುವ ದೇಣಿಗೆಯಿಂದ ವೈರಸ್ ಗೆ ಹೊಸ ಚಿಕಿತ್ಸೆ ಕಂಡುಹಿಡಿಯಲು ನೆರವಾಗುತ್ತದೆ. ಆದರೆ ಮಾಧ್ಯಮಗಳು ಅದನ್ನು ಬಿಟ್ಟು ಚೆಕ್ ಕುರಿತು ಸುದ್ದಿ ಮಾಡುತ್ತಿರುವುದು ನಾಚಿಕೆಗೇಡಿನ ವಿಚಾರ'' ಅಂತ ವೈಟ್ ಹೌಸ್ ವಕ್ತಾರ ಜುಡ್ ಡೀರೆ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+