ಭಾರತವು ಜಾಗತಿಕ ಶಕ್ತಿಯಾಗುತ್ತಿರುವುದನ್ನು ಸ್ವಾಗತಿಸುತ್ತೇವೆ ಎಂದ ಅಮೆರಿಕ

ವಾಷಿಂಗ್ಟನ್,ಫೆಬ್ರವರಿ 10: ಭಾರತವು ಜಾಗತಿಕ ಶಕ್ತಿಯಾಗುತ್ತಿರುವುದನ್ನು ಸ್ವಾಗತಿಸುತ್ತೇವೆ ಎಂದು ಅಮೆರಿಕ ಹೇಳಿದೆ. ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ಭಾರತ ಅತ್ಯಂತ ಪ್ರಮುಖ ಸಹಭಾಗಿತ್ವ ರಾಷ್ಟ್ರವಾಗಿದೆ. ಮುಂಚೂಣಿಯ ಜಾಗತಿಕ ಪ್ರಬಲ ರಾಷ್ಟ್ರವಾಗಿ ಭಾರತ ಬೆಳೆಯುವುದನ್ನು ನೋಡಲು ನಾವು ಬಯಸುತ್ತೇವೆ.

ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಪೂರೈಕೆ ಒದಗಿಸುವ ದೇಶವಾಗಿದೆ ಎಂದು ಅಮೆರಿಕ ಸರ್ಕಾರದ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ಭಾರತ ಪ್ರಮುಖ ಸಹಭಾಗಿತ್ವ ರಾಷ್ಟ್ರವಾಗಿದ್ದು, ಜಾಗತಿಕ ಮಟ್ಟದಲ್ಲಿ ಅದು ಪ್ರಬಲ ರಾಷ್ಟ್ರವಾಗಿ ಬೆಳೆಯುವುದನ್ನು ನೋಡಲು ಬಯಸುತ್ತೇವೆ ಎಂದು ಅಮೆರಿಕ ಹೇಳಿದೆ.

ಸೂಕ್ಷ್ಮವಾಗಿ ಪರಿಸ್ಥಿತಿ ಗಮನಿಸುತ್ತಿದ್ದೇವೆ

ಸೂಕ್ಷ್ಮವಾಗಿ ಪರಿಸ್ಥಿತಿ ಗಮನಿಸುತ್ತಿದ್ದೇವೆ

ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಾರತ ಮತ್ತು ಚೀನಾ ಸರ್ಕಾರಗಳ ನಡುವೆ ನಡೆಯುತ್ತಿರುವ ಮಾತುಕತೆ ತಿಳಿಯುತ್ತಿದ್ದು, ನೇರ ಸಂವಾದ ಮತ್ತು ಆ ಗಡಿ ವಿವಾದಗಳ ಶಾಂತಿಯುತ ಪರಿಹಾರವನ್ನು ಬೆಂಬಲಿಸುತ್ತಲೇ ಇದ್ದೇವೆ ಎಂದು ಭಾರತ-ಚೀನಾ ಗಡಿ ವಿವಾದ ಬಗ್ಗೆ ಮಾತನಾಡಿದರು.

ಭಾರತಕ್ಕೆ ಸಹಕಾರ

ಭಾರತಕ್ಕೆ ಸಹಕಾರ

ರಕ್ಷಣಾ, ಪ್ರಸರಣ ರಹಿತ, ಇಂಡೋ-ಪೆಸಿಫಿಕ್‌ನಲ್ಲಿ ಪ್ರಾದೇಶಿಕ ಸಹಕಾರ, ಭಯೋತ್ಪಾದನೆ ನಿಗ್ರಹ, ಶಾಂತಿಪಾಲನೆ, ಪರಿಸರ, ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಕೃಷಿ, ಬಾಹ್ಯಾಕಾಶ ಮತ್ತು ಸಾಗರಗಳು ಸೇರಿದಂತೆ ವ್ಯಾಪಕವಾದ ರಾಜತಾಂತ್ರಿಕ ಮತ್ತು ಭದ್ರತಾ ವಿಷಯಗಳಿಗೆ ನಾವು ಭಾರತದ ಜೊತೆಗೆ ಸಹಕರಿಸುತ್ತೇವೆ ಎಂದು ಹೇಳಿದರು.

ಯುಎಸ್-ಭಾರತ ಸಮಗ್ರ ಕಾರ್ಯತಂತ್ರ

ಯುಎಸ್-ಭಾರತ ಸಮಗ್ರ ಕಾರ್ಯತಂತ್ರ

ಕಾರ್ಯದರ್ಶಿ ಬ್ಲಿಂಕೆನ್ ಇಂದು ತಮ್ಮ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ. ಯುಎಸ್-ಇಂಡಿಯಾ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ವಿಶಾಲ ಮತ್ತು ಬಹುಮುಖಿಯಾಗಿದೆ. ಅನೇಕ ರಂಗಗಳಲ್ಲಿ ಸಹಕಾರವನ್ನು ಮುಂದುವರಿಸಲು ನಾವು ಉನ್ನತ ಮಟ್ಟದಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮ ಪಾಲುದಾರಿಕೆಯ ಮುಂದುವರಿಯುವ ವಿಶ್ವಾಸವಿದೆ ಎಂದು ನೆಡ್ ಪ್ರೈಸ್ ತಿಳಿಸಿದ್ದಾರೆ.

ದೀರ್ಘಾವಧಿಯ ವ್ಯಾಪಾರ ಪಾಲುದಾರಿಕೆ

ದೀರ್ಘಾವಧಿಯ ವ್ಯಾಪಾರ ಪಾಲುದಾರಿಕೆ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತರಹಿತ ಸದಸ್ಯತ್ವವನ್ನು ಸ್ವಾಗತಿಸಿರುವ ಅಮೆರಿಕ, ಭಾರತದ ಅತಿ ದೀರ್ಘಾವಧಿಯ ವ್ಯಾಪಾರ ಪಾಲುದಾರಿಕೆ ದೇಶ ಅಮೆರಿಕವಾಗಿದ್ದು, ಒಟ್ಟು ದ್ವಿಪಕ್ಷೀಯ ವಾಣಿಜ್ಯ 2019ರಲ್ಲಿ 146 ಶತಕೋಟಿ ಡಾಲರ್ ನಷ್ಟು ಹೋಗಿದೆ ಎಂದರು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಧ್ಯೆ ಮಾತುಕತೆ ಏರ್ಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+